ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Shot Dead: ಬಿಎಸ್‌ಪಿ ನಾಯಕ ಹರ್ಬಿಲಾಸ್‌ ಸಿಂಗ್‌ನನ್ನು ಗುಂಡಿಕ್ಕಿ ಹತ್ಯೆ!

ಹರಿಯಾಣದ ಅಂಬಾಲಾದ ಬಹುಜನ ಸಮಾಜ ಪಕ್ಷದ (BSP) ನಾಯಕ ಹರ್ಬಿಲಾಸ್ ಸಿಂಗ್ ರಜ್ಜುಮಜ್ರಾನನ್ನು ನರೈಂಗರ್‌ನಲ್ಲಿ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶನಿವಾರ(ಜ.25)ತಿಳಿಸಿದ್ದಾರೆ. ಶುಕ್ರವಾರ ಸಂಜೆ ಬಿಎಸ್‌ಪಿ ನಾಯಕ ಹರ್ಬಿಲಾಸ್ ಸಿಂಗ್ ರಜ್ಜುಮಜ್ರಾ ಅವರ ಜೊತೆ ಪುನೀತ್ ಮತ್ತು ಗುಗಲ್ ಎಂಬ ಇಬ್ಬರು ಸ್ನೇಹಿತರು ಕಾರಿನಲ್ಲಿ ಕುಳಿತಿದ್ದಾಗ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಸ್‌ಪಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು!

Shot Dead

Profile Deekshith Nair Jan 25, 2025 1:02 PM

ಚಂಡೀಗಢ: ಹರಿಯಾಣದ(Hariyana) ಅಂಬಾಲಾದ(Ambala) ಬಹುಜನ ಸಮಾಜ ಪಕ್ಷದ (BSP) ನಾಯಕ ಹರ್ಬಿಲಾಸ್ ಸಿಂಗ್‌ನನ್ನು(Harbilas Singh) ನರೈಂಗರ್‌ನಲ್ಲಿ( Naraingarh ) ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ(Shot Dead) ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ನಿನ್ನೆ ಸಂಜೆ ಬಿಎಸ್‌ಪಿ ನಾಯಕ ಹರ್ಬಿಲಾಸ್ ಸಿಂಗ್ ರಜ್ಜುಮಜ್ರಾ ಅವರ ಜೊತೆ ಪುನೀತ್ ಮತ್ತು ಗುಗಲ್ ಎಂಬ ಇಬ್ಬರು ಸ್ನೇಹಿತರು ಕಾರಿನಲ್ಲಿ ಕುಳಿತಿದ್ದಾಗ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ವೇಳೆ ಹರ್ಬಿಲಾಸ್‌ ಸ್ನೇಹಿತ ಪುನೀತ್‌ಗೂ ಗುಂಡೇಟು ತಗುಲಿದೆ. ದಾಳಿಯ ನಂತರ ಚಿಕಿತ್ಸೆಗಾಗಿ ಅವರನ್ನು ಚಂಡೀಗಢದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭೀಕರ ಗುಂಡಿನ ದಾಳಿಯ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹರ್ಬಿಲಾಸ್ ತಡರಾತ್ರಿ ಮೃತಪಟ್ಟಿದ್ದಾರೆ. ಪುನೀತ್ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.



ಹಂತಕರನ್ನು ಇದುವರೆಗೆ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನರೈಂಗಡ್ ಎಸ್ ಹೆಚ್ ಒ(Station House Officer) ಲಲಿತ್ ಕುಮಾರ್ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದಾಳಿಕೋರರನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Murder Case: ಬೆಂಗಳೂರಲ್ಲಿ ಹೇಯ ಕೃತ್ಯ; ಬಾಂಗ್ಲಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಹತ್ಯೆ

ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಅಂಬಾಲಾ ಮೂಲದ ಬಿಎಸ್‌ಪಿ ನಾಯಕರು ಒತ್ತಾಯಿಸಿದ್ದಾರೆ. ಹರ್ಬಿಲಾಸ್‌ ಸಿಂಗ್ ಕಳೆದ ವರ್ಷ ನರೈಂಗಡ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.‌