ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕನಿಷ್ಠ ಮಟ್ಟದ ಸೌಲಭ್ಯ ಒದಗಿಸುತ್ತದೆ ಎಂಬ ಭರವಸೆ ಇದ್ದರೂ ಕೂಡಾ ಸರಕಾರ ಕ್ಯಾರೆ ಎನ್ನುತ್ತಿಲ್ಲ

ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಕೂಡಾ ಪ್ರಯೋಜನ ಆಗಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯಾಲಯಗಳು ಕೂಡಾ ಗುಣಮಟ್ಟದಾಗಿಲ್ಲ ಕನಿಷ್ಠ ಮಟ್ಟದ ಸೌಲಭ್ಯ ಒದಗಿಸುತ್ತದೆ ಎಂಬ ಭರವಸೆ ಇದ್ದರೂ ಕೂಡಾ ಸರಕಾರ ಕ್ಯಾರೆ ಎನ್ನುತ್ತಿಲ್ಲ

ಗ್ರಾಮ ಆಡಳಿತ ಅಧಿಕಾರಿಗಳ ೨ನೇ ದಿನದ ಪ್ರತಿಭಟನೆ

ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಬೇಡಿಕೆಗಳು ಈಡೇರಿಸಬೇಕು ಎಂದು ಪ್ರತಿಭಟಿಸಿದರು.

Profile Ashok Nayak Feb 14, 2025 8:27 PM

ಇಂಡಿ: ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಇಡೇರಿಕೆಗಾಗಿ ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಇತ್ಯರ್ಥವಾಗದೆ ಇರುವ ಹಿನ್ನಲೆಯಲ್ಲಿ ರಾಜ್ಯವ್ಯಾಪಿ 2 ದಿನ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಕೈಗೊಂಡ ಮುಷ್ಕರ ಯಾವುದೇ ಬೇಡಿಕೆ ಇಡೇರಿಸದೆ ಇರುವ ಕಾರಣ ರಾಜ್ಯ ವ್ಯಾಪಿ ೨ನೇ ಹಂತದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳ ಮೂಲಸೌಲಭ್ಯಗಳು ಒದಗಿಸಬೇಕು ಎಂದು ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಕೂಡಾ ಪ್ರಯೋಜನ ಆಗಿಲ್ಲ. ಗ್ರಾಮ ಆಡಳಿತ ಅಧಿಕಾರಿ ಗಳು ಕಾರ್ಯಾಲಯಗಳು ಕೂಡಾ ಗುಣಮಟ್ಟದಾಗಿಲ್ಲ. ಕನಿಷ್ಠ ಮಟ್ಟದ ಸೌಲಭ್ಯ ಒದಗಿಸುತ್ತದೆ ಎಂಬ ಭರವಸೆ ಇದ್ದರೂ ಕೂಡಾ ಸರಕಾರ ಕ್ಯಾರೆ ಎನ್ನುತ್ತಿಲ್ಲ.

ಇದನ್ನೂ ಓದಿ: Vijayapura News: ಶಿಕ್ಷಣದಿಂದ ಹೃದಯವಂತ ವ್ಯಕ್ತಿತ್ವ ನಿರ್ಮಾಣ

ನಮ್ಮ ಬೇಡಿಕೆಗಳಾದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ. ಉತ್ತಮ ಗುಣಮಟ್ಟದ ಟೇಬಲ್ ,ಖುರ್ಚಿ ,ಟ್ರೇಜರಿ, ಗುಣಮಟ್ಟದ ಮೋಬಾಯಿಲ್ (೧೨\೨೫೬ ಜಿ.ಬಿ) ಸಿಯುಜಿ ಸಿಮ್ ಹಾಗೂ ಡೇಟಾ, ಗೂಗಲ್ ಕ್ರೋಮ ,ಬುಕ್ಕ /ಲ್ಯಾಪ್ ಟಾಪ್, ಪ್ರೀಂಟರ್ ಮತ್ತು ಸ್ಕಾನರ್ ಗ್ರಾಮದ ಅಡಳಿತ ಅಧಿಕಾರಿಗಳ ಹುದ್ದೆಗಳನ್ನು ತಾಂತ್ರೀಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವ ಬಗ್ಗೆ ಇತರೆ ಎಲ್ಲಾ ಸೌಲಭ್ಯಗಳು ಒದಗಿಸಬೇಕುಎಂದು ತಾಲೂಕಾ ಅಧ್ಯಕ್ಷ ವಾಯ್.ಎಲ್ ಪೂಜಾರಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ವಾಯ.ಎಲ್ ಪೂಜಾರಿ, ಎಸ್.ಎಸ್ ಪೂಜಾರಿ , ಸಿದ್ದು ಮೋದಿ, ಪ್ರಕಶ ಚೌಡಿಹಾಳ, ಎಂ.ಆರ್ ರಾಠೋಡ, ವಿದ್ಯಾ ಸರಸಂಬಿ, ಜಿ.ಎಂ ಬಿರಾದಾರ, ಸುರೇಶ ಬಿರಾದಾರ, ಕವೀತಾ ಜೀರಂಕಲಗಿ, ಈರಮ್ಮಾ ಜೋಗುರ, ಚೌದರಿ ನಧಾಫ, ಬಸವರಾಜ ಅವುಜಿ, ಸಿದ್ದು ಲಾಳಸಂಗಿ, ಕವಿತಾ ಹಚಡದ ಸೇರಿದಂತೆ ಅನೇಕರು ಇದ್ದರು.