#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Prem Dhillon: ಪಂಜಾಬಿ ಗಾಯಕ ಪ್ರೇಮ್ ಧಿಲ್ಲೋನ್ ಮನೆ ಮೇಲೆ ಗುಂಡಿನ ದಾಳಿ

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪಂಜಾಬಿ ಖ್ಯಾತ ಗಾಯಕ ಪ್ರೇಮ್ ಧಿಲ್ಲೋನ್ ಅವರ ನಿವಾಸದ ಹೊರಗೆ ಮಂಗಳವಾರ ಗುಂಡಿನ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ. ದರೋಡೆಕೋರ ಗುರ್ಜಂತ್ ಜೆಂಟಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಅರ್ಶ್ದೀಪ್ ಸಿಂಗ್ ದಲ್ಲಾ ಅಲಿಯಾಸ್ ಅರ್ಧ್ ದಲ್ಲಾಗೆ ಆಪ್ತಳು ಎಂದು ಮೂಲಗಳು ತಿಳಿಸಿವೆ.

ಪಂಜಾಬಿ ಗಾಯಕನ ಮನೆ ಮೇಲೆ ಗುಂಡಿನ ದಾಳಿ

Prem Dhillon

Profile Deekshith Nair Feb 4, 2025 6:06 PM

ಒಟ್ಟಾವಾ: ಕೆನಡಾದ(Canada) ಬ್ರಾಂಪ್ಟನ್‌ನಲ್ಲಿರುವ (Brampton) ಪಂಜಾಬಿ ಪ್ರಸಿದ್ಧ ಗಾಯಕ ಪ್ರೇಮ್ ಧಿಲ್ಲೋನ್ (Prem Dhillon) ಅವರ ನಿವಾಸದ ಹೊರಗೆ ಮಂಗಳವಾರ (ಫೆ. 4) ಗುಂಡಿನ ದಾಳಿ ನಡೆದಿದೆ. ದರೋಡೆಕೋರ ಗುರ್ಜಂತ್ ಜೆಂಟಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಅರ್ಶ್ದೀಪ್ ಸಿಂಗ್ ದಲ್ಲಾ ಅಲಿಯಾಸ್ ಅರ್ಧ್ ದಲ್ಲಾಗೆ ಈ ಜೆಂಟಾ ಆಪ್ತ ಎಂದು ಮೂಲಗಳು ತಿಳಿಸಿವೆ.

ಪ್ರೇಮ್ ಧಿಲ್ಲೋನ್ ಪಂಜಾಬ್‌ನ ಅಮೃತಸರ ಜಿಲ್ಲೆಯ ಡೋಲೋ ನಂಗಲ್ ಗ್ರಾಮದವರು. ಅವರು ʼಮಜ್ಹಾ ಬ್ಲಾಕ್ʼ, ʼಓಲ್ಡ್ ಸ್ಕೂಲ್ʼ ಮತ್ತು ʼಬೂಟ್ ಕಟ್ʼ ಹಾಡುಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಧಿಲ್ಲೋನ್‌ ಮೇಲೆ ಹಲ್ಲೆ ನಡೆದಿತ್ತು.



ಗಾಯಕ ಎ.ಪಿ.ಧಿಲ್ಲೋನ್ ಮನೆ ಮೇಲೆ ಗುಂಡಿನ ದಾಳಿ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕೆನಡಾದ ವ್ಯಾಂಕೋವರ್‌ನಲ್ಲಿರುವ ಪಂಜಾಬಿ ಗಾಯಕ ಎ.ಪಿ. ಧಿಲ್ಲೋನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರ ರೋಹಿತ್ ಗೋಡಾರಾ ಈ ದಾಳಿಯ ಹೊಣೆ ಯನ್ನು ಹೊತ್ತಿಕೊಂಡಿದ್ದ. ವಿಕ್ಟೋರಿಯಾ ದ್ವೀಪದಲ್ಲಿರುವ ಧಿಲ್ಲೋನ್ ಮನೆ ಬಳಿ ಹಾಗೂ ಟೊರಾಂಟೋದ ವುಡ್‌ಬ್ರಿಡ್ಜ್ ಬಳಿ ದಾಳಿ ನಡೆದಿರುವ ವಿಡಿಯೊ ಸಾಕಷ್ಟು ವೈರಲ್ ‌ ಆಗಿತ್ತು.

ಈ ಸುದ್ದಿಯನ್ನೂ ಓದಿ:Sri Lankan Navy Firing: ಗುಂಡಿನ ದಾಳಿಯಲ್ಲಿ ಐವರು ಮೀನುಗಾರರಿಗೆ ಗಾಯ; ಶ್ರೀಲಂಕಾ ರಾಯಭಾರಿಗೆ ಭಾರತದಿಂದ ಸಮನ್ಸ್

ಧಿಲ್ಲೋನ್ ಇತ್ತೀಚೆಗೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ಅವರೊಂದಿಗೆ ಮಾಡಿದ್ದ ಹೊಸ ಹಾಡು ʼಓಲ್ಡ್ ಮನಿ' ಬಿಡುಗಡೆಯಾಗಿತ್ತು. ಸಲ್ಮಾನ್ ಜತೆ ಕಾಣಿಸಿಕೊಂಡಿದ್ದಕ್ಕೆ ಧಿಲ್ಲೋನ್‌ ಅವರನ್ನು ಗುರಿಯಾಗಿಸಲಾಗಿದೆ ಎಂದು ಗೋಡಾರಾ ಪೋಸ್ಟ್ ತಿಳಿಸಿತ್ತು. ಸಲ್ಮಾನ್ ಖಾನ್ ಹತ್ಯೆಗೆ ಹಿಂದಿನಿಂದಲೂ ಬಿಷ್ಟೋಯ್‌ ಗ್ಯಾಂಗ್‌ ಸಂಚು ನಡೆಸುತ್ತಿದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಲವು ಸುಲಿಗೆ, ಬೆದರಿಕೆ ಮತ್ತು ಹಿಂಸಾತ್ಮಕ ಅಪರಾಧಗಳಲ್ಲಿ ಭಾಗಿಯಾಗಿದ್ದ 11 ಗ್ಯಾಂಗ್‌ಗಳನ್ನು ದಿಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.