ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುಬ್ಬಿಯಲ್ಲಿ ಅದ್ದೂರಿ ದಿಂಡಿ ಉತ್ಸವ : 21 ಅಡಿ ಎತ್ತರದ ಶ್ರೀ ಪಾಂಡುರಂಗ ಸ್ವಾಮಿ, ರುಖ್ಖುಮಾಯಿ ಕಟೌಟ್ ಗೆ ಹಾಲಿನ ಅಭಿಷೇಕ

ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಜುಲೈ.6 ರಂದು ಬೆಳಿಗ್ಗೆ 10 ಕ್ಕೆ ವಿಷ್ಣು ಸಹಸ್ರ ನಾಮ, ಕುಂಕುಮಾರ್ಚನೆ, ಅಷ್ಟೋತ್ತರ ಪೂಜೆ ನಡೆಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಸಿ ದಾನಿಗಳಿಂದ ಪ್ರಸಾದ ವಿನಿಯೋಗ ಮಾಡಲಾಗುವುದು

ಗುಬ್ಬಿಯಲ್ಲಿ ಅದ್ದೂರಿ ದಿಂಡಿ ಉತ್ಸವ

Profile Ashok Nayak Jul 5, 2025 11:58 PM

ಗುಬ್ಬಿ: ಆಷಾಢ ಮಾಸದ ಏಕಾದಶಿ ಹಿನ್ನಲೆ ಜುಲೈ 6 ಮತ್ತು 7 ರಂದು ಶ್ರೀ ರುಖ್ಖುಮಾಯಿ, ಶ್ರೀ ಪಾಂಡುರಂಗಸ್ವಾಮಿ ಅವರ 21 ನೇ ವರ್ಷದ ದಿಂಡಿ ಉತ್ಸವ ಕಾರ್ಯಕ್ರಮವನ್ನು ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದಿಂದ ಆಯೋಜನೆ ಮಾಡಲಾಗಿದೆ. ಈ ಹಿನ್ನಲೆ ಸುಮಾರು 20 ಲಕ್ಷ ವೆಚ್ಚದ ಅದ್ದೂರಿ ದಿಂಡಿ ಉತ್ಸವ ವ್ಯವಸ್ಥೆ ಮಾಡಿದ ದಾನಿಗಳಾದ ನಾಗರತ್ನಬಾಯಿ ಜ್ಞಾನೇಶ್ವರ ರಾವ್ ಅವರು 21 ಅಡಿ ಎತ್ತರದ ಶ್ರೀ ಪಾಂಡುರಂಗ ಸ್ವಾಮಿ ಹಾಗೂ ರುಖ್ಖುಮಾಯಿ ಕಟೌಟ್ ಬಸ್ ಸ್ಟ್ಯಾಂಡ್ ಬಳಿ ನಿಲ್ಲಿಸಿ ಹಾಲಿನ ಅಭಿಷೇಕ ನಡೆಸಲಿದ್ದಾರೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವಾಸುದೇವ ರಾವ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಜುಲೈ.6 ರಂದು ಬೆಳಿಗ್ಗೆ 10 ಕ್ಕೆ ವಿಷ್ಣು ಸಹಸ್ರ ನಾಮ, ಕುಂಕುಮಾರ್ಚನೆ, ಅಷ್ಟೋತ್ತರ ಪೂಜೆ ನಡೆಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನಡೆಸಿ ದಾನಿಗಳಿಂದ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Gubbi (Tumkur) News: ಗುಬ್ಬಿಯಲ್ಲಿ ಜು.7ರಂದು ಶ್ರೀ ಪಾಂಡುರಂಗಸ್ವಾಮಿ ದಿಂಡಿ ಉತ್ಸವ: ಭಾವಸಾರ ಕ್ಷತ್ರಿಯರಿಂದ ಅದ್ದೂರಿ ಮೆರವಣಿಗೆ

ಪ್ರತಿ ವರ್ಷ ಮೆರವಣಿಗೆ ಸೇವೆ ನಡೆಸಿರುವ ದಾನಿಗಳಾದ ನಾಗರತ್ನ ಬಾಯಿ ಹಾಗೂ ಅವರ ಮಕ್ಕಳು ಲಕ್ಷಾಂತರ ಹಣ ದೇವರ ಕಾರ್ಯಕ್ಕೆ ಬಳಸಿದ್ದಾರೆ. ಅದ್ದೂರಿ ಮೆರವಣಿಗೆ ಪಟ್ಟಣದಲ್ಲಿ ಇತಿಹಾಸ ಸೃಷ್ಟಿಸಿದೆ. ಈ ಬಾರಿ 21 ಅಡಿಗಳ ಕಟೌಟ್ ಅತ್ಯಾಕರ್ಷಕವಾಗಲಿದೆ. ಈ ಜೊತೆಗೆ ಶ್ರೀ ಜ್ಞಾನೇಶ್ವರಿ ಪಾರಾಯಣ ಮತ್ತು ಭಜನೆ ಕೀರ್ತನೆ ನಡೆಸಲಾಗುವುದು. ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಘಟಕದ ಡಾ.ಸೂರ್ಯ ನಾರಾಯಣರಾವ್, ಗುರುಪ್ರಸಾದ್ ಪಿಸ್ಸೆ ಹಾಗೂ ಸತ್ಯನಾರಾಯಣ್ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದರು.

ಜುಲೈ.7 ರಂದು ಬೆಳಿಗ್ಗೆ ಪೂಜಾ ಕೈಂಕರ್ಯ ನೆರವೇರಿಸಿ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಸಿ ದಾನಿಗಳಿಂದ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಶ್ರೀ ಪಾಂಡುರಂಗಸ್ವಾಮಿ ಶ್ರೀ ರುಕ್ಮಿಣಿ ದೇವಿಯ ಅದ್ದೂರಿ ಮೆರವಣಿಗೆ ಊರಿನ ರಾಜ ಬೀದಿಗಳಲ್ಲಿ ಹೆಸರಾಂತ ಬೆಳ್ತಂಗಡಿ ಸಾಂಸ್ಕೃತಿಕ ಕಲಾ ಮೇಳದೊಂದಿಗೆ ಜರುಗಲಿದೆ. ಮುಖ್ಯ ಕೀರ್ತನಾಕಾರ ಧನಂಜಯ ಗುರೂಜಿ ಅವರು ಕೀರ್ತನೆ ಹಾಡಲಿದ್ದಾರೆ ಎಂದು ವಿವರಿಸಿದರು.