Chikkaballapur News: ನಗರದ ಪುಟ್‌ಪಾತ್‌ನಲ್ಲಿನ ಅಂಗಡಿಗಳ ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಿ
ನಗರಸಭೆ ಆವರಣದಲ್ಲಿನ ಶೌಚಾಲಯವನ್ನು ಇತ್ತೀಚೆಗೆ ಮುಚ್ಚಲಾಗಿದೆ. ಇದು ಬಳಕೆಗೆ ಬರುವ ಅವಧಿಯಲ್ಲಿ ಕೂಡ ಸ್ವಚ್ಛತೆಯಿಲ್ಲದೆ, ಸರಿಯಾದ ನೀರಿನ ಸಂಪರ್ಕವಿಲ್ಲದೆ ಗಬ್ಬು ನಾರುತ್ತಿರುತ್ತದೆ. ನಗರಾಡಳಿತ, ಕಮಿಷನರ್ ಇತ್ತ ಗಮನ ಹರಿಸಿದಂತೆ ಕಾಣುತ್ತಿಲ್ಲ.ಕಾರಣ ನಗರದ ಸ್ವಚ್ಛತೆ ಕಾಪಾಡುವ ನಗರಸಭೆ ಆವರಣದಲ್ಲಿಯೇ ಶೌಚಾಲಯ ಗಬ್ಬು ನಾರುತ್ತಿದೆ ಎಂದರೆ ಉಳಿದೆಡೆ ಹೇಗೆ ಎನ್ನುವುದು ಸಾರ್ವಜನಿಕ ಪ್ರಶ್ನೆಯಾಗಿದೆ

ಚಿಕ್ಕಬಳ್ಳಾಪುರ ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಚಿಕ್ಕಬಳ್ಳಾಪುರ : ನಗರದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಮಿಸಿರುವ ಪಾದಚಾರಿ ಮಾರ್ಗದ ಮೇಲೆ ಅಂಗಡಿಗಳನ್ನು ಇಟ್ಟುಕೊಂಡು ಸುಗಮ ಸಂಚಾರಕ್ಕೆ ತೊಂದರೆ ಕೊಡುತ್ತಿರುವ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕನ್ನಡ ಸೇನೆ ನಿಯೋಗ ನಗರದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಆಗ್ರಹಿಸಿ ದರು.
ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಾದ ಬಿ.ಬಿ.ರಸ್ತೆ, ಬಜಾರ್ ರಸ್ತೆ, ಗಂಗಮ್ಮಗುಡಿ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹಾಗೂ ವಾಣಿಜ್ಯ ಚಟುವಟಿಕೆ ಗಳಿಗೆ ಆಗಮಿಸುತ್ತಾರೆ. ಈ ರಸ್ತೆಯ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ಕೊಂಡಿರುವ ಇಲ್ಲಿನ ವ್ಯಾಪಾರಿಗಳು ಓಡಾಟಕ್ಕೆ ಅವಕಾಶ ಇಲ್ಲದಂತೆ ಅಡ್ಡಾದಿಡ್ಡಿಯಾಗಿ ಬಂಡಿ ಅಂಗಡಿಗಳನ್ನು ಹಾಗೂ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ಸಂಚಾರಕ್ಕೆ ತೊಂದರೆ ಪಡಿಸು ತ್ತಿರುತ್ತಾರೆ. ಹೀಗಾಗಿ ಪುಟ್‌ಪಾತ್ ಪುಟ್‌ಪಾತ್ ರಸ್ತೆಯಲ್ಲಿ ಜಾಗವಿಲ್ಲದೇ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಂತಾಗಿದ್ದು ಅಪಘಾತಗಳಿಗೆ ಆಸ್ಪದ ನೀಡುತ್ತಿದ್ದಾರೆ. ನಗರಡಳಿತ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Chikkaballapur News: 14ನೇ ಸಚಿವ ಸಂಪುಟದ ತೀರ್ಮಾನಗಳಿಗೆ ಅಂತಿಮ ಗಡುವು ನೀಡಿ : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ
ಇದೇ ರೀತಿ ನಗರಸಭೆ ಆವರಣದಲ್ಲಿನ ಶೌಚಾಲಯವನ್ನು ಇತ್ತೀಚೆಗೆ ಮುಚ್ಚಲಾಗಿದೆ. ಇದು ಬಳಕೆಗೆ ಬರುವ ಅವಧಿಯಲ್ಲಿ ಕೂಡ ಸ್ವಚ್ಛತೆಯಿಲ್ಲದೆ, ಸರಿಯಾದ ನೀರಿನ ಸಂಪರ್ಕವಿಲ್ಲದೆ ಗಬ್ಬು ನಾರು ತ್ತಿರುತ್ತದೆ. ನಗರಾಡಳಿತ, ಕಮಿಷನರ್ ಇತ್ತ ಗಮನ ಹರಿಸಿದಂತೆ ಕಾಣುತ್ತಿಲ್ಲ. ಕಾರಣ ನಗರದ ಸ್ವಚ್ಛತೆ ಕಾಪಾಡುವ ನಗರಸಭೆ ಆವರಣದಲ್ಲಿಯೇ ಶೌಚಾಲಯ ಗಬ್ಬು ನಾರುತ್ತಿದೆ ಎಂದರೆ ಉಳಿದೆಡೆ ಹೇಗೆ ಎನ್ನುವುದು ಸಾರ್ವಜನಿಕ ಪ್ರಶ್ನೆಯಾಗಿದೆ.
ಏಕೆಂದರೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ನಗರಸಭೆ ಕಾರ್ಯಾಲಯಕ್ಕೆ ಪ್ರತಿದಿನ ನೂರಾರು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದು, ನಗರಸಭೆಯ ಆವರಣದಲ್ಲಿನ ಶೌಚಾಲಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿರುವುದಿಲ್ಲ. ಇಲ್ಲಿ ಕಾಟಾಚಾರಕ್ಕೆ ಮಾತ್ರ ಶೌಚಾಲವಿದ್ದು, ನೀರಿನ ವ್ಯವಸ್ಥೆ ಇರುವುದಿಲ್ಲ ಮೇಲಾಗಿ ಶೌಚಾಲಯವನ್ನು ಮುಚ್ಚಿರುವು ದರಿಂದ ಇಲ್ಲಿಗೆ ಪ್ರತಿದಿನ ಬರುವ ಸಾರ್ವಜನಿಕರಿಗೆ, ವೃದ್ಧರಿಗೆ ಹಾಗೂ ಅನಾರೋಗ್ಯ ಪೀಡಿತರ ಶೌಚಾಲಯಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಈ ಬಗ್ಗೆ ನಗರಸಭೆ ಪೌರಾಯುಕ್ತರ ಗಮನಕ್ಕೂ ಸಹಾ ತರಲಾಗಿದೆ. ಆದುದರಿಂದ ತಾವುಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರ ಹಿತದೃಷ್ಠಿಯಿಂದ ಶೌಚಾಲಯ ವ್ಯವಸ್ಥೆ ಏರ್ಪಡಿಸುವಂತೆ ಸಂಬಂಧ ಪಟ್ಟವರಿಗೆ ತಾಕೀತು ಮಾಡಬೇಕು ಎಂದು ಮನವಿ ಮಾಡಿದರು.