Viral News: ತಮ್ಮತ್ತ ನಾಯಿ ಬೊಗಳಿತೆಂದು ಮಾಲೀಕನ ಮೇಲೆ ಮಹಿಳೆಯರಿಂದ ಹಲ್ಲೆ... 10 ಮಹಿಳೆಯರ ವಿರುದ್ಧ ಪ್ರಕರಣ ದಾಖಲು!
Viral News: ತಮ್ಮತ್ತ ನಾಯಿ ಬೊಗಳಿದ ಕಾರಣಕ್ಕೆ ಮಹಿಳೆಯರು ನಾಯಿ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ.


ಮುಂಬೈ: ಅಪರಿಚಿತರನ್ನು ನೋಡಿದಾಗ ನಾಯಿಗಳು ಸಾಮಾನ್ಯವಾಗಿ ಬೊಗಳುತ್ತವೆ. ಬೊಗಳುವ ನಾಯಿಗಳ ಬಾಯಿ ಮುಚ್ಚಿಸಲು ಸಾಧ್ಯವೇ? ಆದರೆ ಇಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆಯೊಂದು ವರದಿಯಾಗಿದೆ(Viral News). ಮಹಾರಾಷ್ಟ್ರದ(Maharashtra) ಥಾಣೆಯಲ್ಲಿ ಸಾಕು ನಾಯಿಯೊಂದು ಬೊಗಳಿದ್ದಕ್ಕೆ ಕೋಪಗೊಂಡ ಮಹಿಳೆಯರು ನಾಯಿಯ ಮಾಲಿಕ ಮತ್ತು ಆತನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪದಡಿ 10 ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ(Pet Dog Barking).
ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ಭಾನುವಾರ(ಜ.5) ಈ ಹಲ್ಲೆ ನಡೆದಿದೆ. ತರಕಾರಿ ಮಾರುವ ಕುಟುಂಬದ ಸಾಕು ನಾಯಿಯೊಂದು ಮಹಿಳೆಯರ ಗುಂಪೊಂದನ್ನು ನೋಡಿ ಬೊಗಳಿದೆ. ಇದರಿಂದ ಮಹಿಳೆಯರು ಕಿರಿಕಿರಿಯಾಗಿದ್ದು, ನಾಯಿಯ ಮಾಲೀಕರನ್ನು ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಮನೆಗೆ ಕಲ್ಲು ತೂರಿದ್ದಾರೆ. ನಂತರ ಮಹಿಳೆಯರ ಗುಂಪು ಮನೆಗೆ ನುಗ್ಗಿ ತರಕಾರಿ ಮಾರಾಟಗಾರರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಕುಟುಂಬಸ್ಥರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೆ ಒಳಗಾದ ತರಕಾರಿ ಮಾರಾಟಗಾರರು ಸೋಮವಾರ(ಜ.6) ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಓರ್ವ ಮಹಿಳೆ ಮತ್ತು ಇತರ ಒಂಬತ್ತು ಮಂದಿಯ ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಕು ನಾಯಿ ಬೊಗಳಿದ್ದಕ್ಕೆ ಯುವತಿಯ ಮೇಲೆ ದೌರ್ಜನ್ಯ
ಕಳೆದ ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಸಾಕು ನಾಯಿ ಬೊಗಳಿದ್ದ ವಿಚಾರಕ್ಕೆ ಗಲಾಟೆ ಮಾಡಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಯುವತಿ ನೀಡಿದ ದೂರಿನನ್ವಯ ಬಿಹಾರ್ ಮೂಲದ ಶಂಕರ್ ಎಂಬುವವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. "ಬಿಹಾರದ ಶಂಕರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಟೈಲ್ಸ್ ಜೋಡಿಸುವ ಕೆಲಸ ಮಾಡುತ್ತಿದ್ದ. ಯುವತಿ ನೀಡಿದ್ದ ದೂರು ಆಧರಿಸಿ ಶಂಕರ್‌ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ" ಎಂದು ಪೊಲೀಸರು ಹೇಳಿದ್ದರು.
ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಪೋಷಕರ ಜೊತೆ ಯುವತಿ ವಾಸವಿದ್ದರು. ಅವರ ಮನೆ ಸಮೀಪದಲ್ಲೇ ಆರೋಪಿ ಶಂಕರ್ ನೆಲೆಸಿದ್ದನು. ರಾತ್ರಿ ವೇಳೆ ಶಂಕರ್ ಸ್ನೇಹಿತರ ಜೊತೆ ತನ್ನ ಮನೆಗೆ ಬಂದಿದ್ದ. ಇದೇ ಸಂದರ್ಭದಲ್ಲಿ ಯುವತಿ ಮನೆಯ ಸಾಕು ನಾಯಿ ಬೊಗಳಿತ್ತು ಎನ್ನಲಾಗಿತ್ತು. ಸಾಕು ನಾಯಿಗೆ ಹೊಡೆಯಲು ಹೋಗಿದ್ದ ಶಂಕರ್, ಅದನ್ನು ಪ್ರಶ್ನಿಸಿದ್ದ ಯುವತಿಯ ತಂದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದನು. ತಂದೆಯ ರಕ್ಷಣೆಗೆ ಹೋಗಿದ್ದ ಯುವತಿಯನ್ನು ಎಳೆದಾಡಿ ದೌರ್ಜನ್ಯ ಎಸಗಿದ್ದನೆಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ:Self Harming: ಮುದ್ದಿನ ನಾಯಿ ಸತ್ತಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!