Gym Tips: ಫಿಟ್ ಆಗಿರಲೂ ಜಿಮ್ಗೆ ಹೋಗುವ ಮುನ್ನ ಈ ವಿಚಾರ ನೆನಪಿನಲ್ಲಿಡಿ!
ಫಿಟ್ ಆ್ಯಂಡ್ ಫೈನ್ ಆಗಿ ಕಾಣಬೇಕು ಎಂಬ ನೆಲೆಯಲ್ಲಿ ದೇಹಕ್ಕೆ ಒತ್ತಡ ಹೇರಿ ವರ್ಕೌಟ್ ಮಾಡುತ್ತಾರೆ. ಆದರೆ ಜಿಮ್ ವರ್ಕೌಟ್ ಜೊತೆ ದೇಹದ ಸುರಕ್ಷತೆ ಬಗ್ಗೆ ಕೂಡ ಗಮನಹರಿಸಬೇಕು. ಜಿಮ್ ಮಾಡುವಾಗ ಕೆಲವು ಸುರಕ್ಷತಾ ಕ್ರಮ ಪಾಲಿಸದಿದ್ದರೆ ಜೀವ ಹಾನಿಯಾಗುವ ಸಾಧ್ಯತೆ ಸಹ ಇದೆ. ಹಾಗಾಗಿ ಜಿಮ್‌ನಲ್ಲಿ ದೇಹ ಕಸರತ್ತು ಮಾಡುವವರು ಸುರಕ್ಷತಾ ಕ್ರಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದನ್ನು ಮರೆಯಬಾರದು.


ನವದೆಹಲಿ: ದೈನಿಕ ಜೀವನದಲ್ಲಿ ವ್ಯಾಯಾಮ ಅತೀ ಮುಖ್ಯವಾಗಿದ್ದು ತೂಕ ಇಳಿಕೆ, ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲಿ ದೈಹಿಕ ಚಟುವಟಿಕೆಗಳು ಪ್ರಧಾನ ಪಾತ್ರವಹಿಸಲಿದೆ. ಅದರಲ್ಲಿಯೂ ಇತ್ತೀಚಿನ ಯುವ ಜನತೆ ಫಿಟ್ ಆಗಿ ಕಾಣಲು ಜಿಮ್ ಸೆಂಟರ್‌ನ ಮೊರೆ ಹೋಗಿ ವಿಧ ವಿಧದ ವರ್ಕೌಟ್ ಮಾಡಿ ಹೊಟ್ಟೆ ಬೊಜ್ಜು, ದೇಹದ ಅತೀ ತೂಕ ಇಳಿಸಲು ಮುಂದಾಗುತ್ತಾರೆ. ಫಿಟ್ ಆ್ಯಂಡ್ ಫೈನ್ ಆಗಿ ಕಾಣಬೇಕು ಎಂಬ ನೆಲೆಯಲ್ಲಿ ದೇಹಕ್ಕೆ ಒತ್ತಡ ಹೇರಿ ವರ್ಕೌಟ್ ಮಾಡುತ್ತಾರೆ(Gym Tips). ಆದರೆ ಜಿಮ್ ವರ್ಕೌಟ್ ಜೊತೆ ದೇಹದ ಸುರಕ್ಷತೆ ಬಗ್ಗೆ ಕೂಡ ಗಮನಹರಿಸಬೇಕು. ಜಿಮ್ ಮಾಡುವಾಗ ಕೆಲವು ಸುರಕ್ಷತಾ ಕ್ರಮ ಪಾಲಿಸದಿದ್ದರೆ ಜೀವ ಹಾನಿಯಾಗುವ ಸಾಧ್ಯತೆ ಸಹ ಇದೆ. ಹಾಗಾಗಿ ಜಿಮ್‌ನಲ್ಲಿ ದೇಹ ಕಸರತ್ತು ಮಾಡುವವರು ಸುರಕ್ಷತಾ ಕ್ರಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದನ್ನು ಮರೆಯಬಾರದು.
ಜಿಮ್‌ನಲ್ಲಿ ಸುರಕ್ಷತೆ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಿದರೂ ಅದನ್ನು ಪಾಲಿಸದೇ ಇರುವವರೇ ಅಧಿಕವಾಗಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಯಷ್ಟಿಕಾ ಆಚಾರ್ಯ ಜಿಮ್ ತರಬೇತಿ ಪಡೆ ಯುತ್ತಿರಬೇಕಾದರೆ ಸಾವನಪ್ಪಿದ್ದರು. ಹಾಗೆಯೇ ರಾಜಸ್ಥಾನದ ಬಿಕಾ ನೇರ್ ನಲ್ಲಿ ಜಿಮ್ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ 17 ವರ್ಷದ ಯುವತಿಯೊಬ್ಬರು 270 kg ತೂಕ ಎತ್ತಲು ಪ್ರಯತ್ನಿಸಿ ಅದು ಕುತ್ತಿಗೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದು ಆಘಾತಕಾರಿ ವಿಚಾರ. ಈ ಘಟನೆ ಗಳ ಬಳಿಕ ಜಿಮ್ ಸುರಕ್ಷತೆ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ವಿಚಾರ ಗಳು ಚರ್ಚೆಯಾಗುತ್ತಿವೆ. ಹಾಗಾಗಿ ಜಿಮ್ ವರ್ಕೌಟ್ ಅಂತ ತೆರಳುವ ಯುವಕ ಯುವತಿಯರು ಜೀವದ ಸುರಕ್ಷತೆ ಬಗ್ಗೆಯು ಅರಿವು ಇರಬೇಕು.
ವರ್ಕೌಟ್ ಮುನ್ನ ಈ ಬಗ್ಗೆ ತಿಳಿದುಕೊಳ್ಳಿ
ವಾರ್ಮ್ ಅಪ್: ಜಿಮ್ ಮಾಡುವಾಗ ಏಕಾಏಕಿ ಹೊಸ ಹೊಸ ಪ್ರಯೋಗ ಮಾಡಬಾರದು ಮೊದಲಿಗೆ ನಿಮ್ಮ ದೇಹ ವಾರ್ಮ್ ಅಪ್ ಆಗಬೇಕು. ಕಠಿಣ ವ್ಯಾಯಾಮ ಕರಗತ ಮಾಡಿಕೊಳ್ಳುವ ಮೊದಲು ನಿಮ್ಮ ದೇಹ ಸ್ಥಿತಿ ಹೊಂದಿಕೊಳ್ಳಲು ನೀವು ಅವಕಾಶ ಮಾಡಿಕೊಡಬೇಕು. ವಾರ್ಮ್ ಅಪ್ ಮಾಡಲು ಕನಿಷ್ಟ 5-10 ನಿಮಿಷ ಆದರೂ ಸಮಯ ನೀಡಬೇಕು ಎಂಬುದು ತಜ್ಞರ ಸಲಹೆಯಾಗಿದೆ.
ಸರಿಯಾದ ಕ್ರಮ ಅನುಸರಿಸಿ:ವ್ಯಾಯಾಮ ಮಾಡುವಾಗ ಸರಿಯಾದ ಕ್ರಮ ಅನುಸರಿಸುವುದು ಬಹಳ ಮುಖ್ಯ. ಯಾವ ಭಂಗಿಯಲ್ಲಿ ಯಾವ ವ್ಯಾಯಾಮ ಮಾಡುವುದು ಸೂಕ್ತ ಎಂಬುದನ್ನು ಅರ್ಥೈಸಿಕೊಳ್ಳಬೇಕು. ತಪ್ಪಾದ ಭಂಗಿಯಲ್ಲಿ ನೀವು ಅಭ್ಯಾಸ ಕ್ರಮ ಅನುಸರಿಸಿದರೆ ಕೀಲು ನೋವು, ಸ್ನಾಯು ಸೆಳೆತ ಇತರ ಆರೋಗ್ಯ ಸಮಸ್ಯೆಗಳು ಕಾಡಲಿದೆ.ದೇಹದ ತೂಕ ಇಳಿಕೆಗಾಗಿ ನೀವು ವ್ಯಾಯಾಮ ಮಾಡುತ್ತಿದ್ದರೂ ಅದಕ್ಕೂ ನಿರ್ದಿಷ್ಟ ನಿಯಮ ಇರಲಿದ್ದು ಅದೇ ಕ್ರಮದಲ್ಲೇ ವರ್ಕೌಟ್ ಮಾಡುವುದು ಸೂಕ್ತ ಎನ್ನಬಹುದು.
ಉಡುಗೆ ತೊಡುಗೆಗೂ ಕಾಳಜಿ ಅಗತ್ಯ: ಜಿಮ್ ಹೋಗುವಾಗ ಸ್ಲಿಪ್ ಆಗದ ಶೂ ಧರಿಸುವುದು ಬಹಳ ಮುಖ್ಯ. ಗಾಯಗಳಾಗದಂತೆ ತಡೆಯಲು ಮತ್ತು ನಿಮ್ಮ ಸುರಕ್ಷತೆ ದೃಷ್ಟಿಯಿಂದ ಶೂ ಧರಿಸಿಕೊಡರೆ ಒಳಿತು ಜಿಮ್ ನಲ್ಲಿ ಕೆಲವು ಸಲಕರಣೆ ಸುರಕ್ಷತೆ ದೃಷ್ಟಿಯಿಂದ ಇರಿಸಲಾಗುವುದು ಅವುಗಳ ಬಗ್ಗೆ ಸರಿಯಾಗಿ ತಿಳಿದಿ ರಬೇಕು. ಆಗ ಅಪಾಯದ ಸಂದರ್ಭದಲ್ಲಿ ನಿಮಗೆ ಇಂತಹ ಸಲಕರಣೆ ಗಳು, ಔಷಧದ ಟೂಲ್ ಕಿಟ್ ಗಳು ಸಹಕಾರಿ ಆಗಲಿದೆ.
ನಿತ್ಯ ಅಭ್ಯಾಸದ ಕ್ರಮ ಪಾಲಿಸಿ: ಒಮ್ಮಿಂದೊಮ್ಮೆಲೆ ವರ್ಕೌಟ್ ಮಾಡುವವರು ಒಮ್ಮೆಲೆಗೆ 80kg ತೂಕ ಎತ್ತುವ ಕೆಲಸಕ್ಕೆ ಹೋಗಬಾರದು ಅದರ ಬದಲಿಗೆ ಮೊದಲು 20 kg ತೂಕ ಎತ್ತುವುದು ಆ ಬಳಿಕ 40, 60, 80, 100 kg ಯಂತೆ ತೂಕ ಎತ್ತಿದರೆ ಅದು ನಿಮ್ಮ ದೇಹ ಒಗ್ಗಿಕೊಳ್ಳಲು ಸಮಯಾವಕಾಶ ನೀಡಿದಂತಾಗುವುದು.
ರೆಸ್ಟ್ ಕೂಡ ಅಗತ್ಯ:ವಿಶ್ರಾಂತಿ ಎನ್ನುವುದು ಬಹಳ ಮುಖ್ಯ. ನಿಯಮಿತವಾಗಿ ಜಿಮ್ ಮಾಡಿದರೂ ಜಿಮ್ ಮಾಡುವವರು ತಮ್ಮ ದೇಹಕ್ಕೆ ಆಗಾಗ ರೆಸ್ಟ್ ಸಹ ನೀಡುವುದನ್ನು ಮರೆಯಬಾರದು. ಆಯಾಸ , ಗಾಯ ಇತ್ಯಾದಿ ಗಳಾದಾಗಲೂ ಮತ್ತೆ ಪುನಃ ವ್ಯಾಯಾಮ ಮಾಡಬಾರದು ಬದಲಿಗೆ ವಿಶ್ರಮಿಸಬೇಕು.
ತರಬೇತಿ ಮುಖ್ಯ:ಅತೀ ಭಾರದ ತೂಕ ಒಮ್ಮಿಂದೊಮ್ಮೆಲೆ ಎತ್ತಿದರೆ ಬೆನ್ನು, ಕೈಕಾಲು ನೋವು, ಸ್ನಾಯು ನೋವು ಕಾಣಿಸಿಕೊಳ್ಳಲಿದೆ. ಕೆಲವು ಸಂದರ್ಭ ಮೂಳೆ ಮುರಿತ, ವಿಪರೀತ ಗಾಯ ಆಗುವ ಸಾಧ್ಯತೆ ಕೂಡ ಇದೆ ಹಾಗಾಗಿ ಈ ಬಗ್ಗೆ ಮೊದಲೇ ತರಬೇತಿ ಪಡೆದುಕೊಳ್ಳಿ.
ದೇಹ ಸ್ಥಿತಿ ಅರ್ಥೈಸಿಕೊಳ್ಳಿ: ಎಷ್ಟೋ ಬಾರಿ ಜಿಮ್ ಟ್ರೈನರ್ ಹೇಳುತ್ತಾರೆ ಎಂದು ನಾವು ಕೇಳಿ ಬಿಡುತ್ತೇವೆ. ಜಿಮ್ ಮಾಡುವಾಗ ಊತ, ಸೆಳೆತದ ನೋವು ಬಂದರೆ ಅದನ್ನು ನಿರ್ಲಕ್ಷ್ಯ ಮಾಡುವವರು ಇದ್ದಾರೆ. ಹಾಗಾಗಿ ನಿಮ್ಮ ದೇಹ ಸ್ಥಿತಿಯನ್ನು ಮೊದಲು ನೀವು ಅರ್ಥೈಸಿಕೊಂಡು ಬಳಿಕ ಅದಕ್ಕೆ ಯಾವುದು ಸೂಕ್ತ ಎಂದು ಅಂತಹ ವ್ಯಾಯಾಮ ಮಾಡುವುದು ಸರಿಯಾದ ಕ್ರಮವಾಗಿದೆ.
ಇದನ್ನು ಓದಿ: Health Tips: ಋತುಬಂಧಕ್ಕೆ ಒಳಗಾಗುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಳ!
ಉಪಕರಣಗಳ ಬಗ್ಗೆ ಗಮನಿಸಬೇಕು: ಜಿಮ್ ನಲ್ಲಿ ವೈಟ್ ಲಿಫ್ಟಿಂಗ್ ನಲ್ಲಿ ಇರುವ ಉಪಕರಣಗಳ ಬಗ್ಗೆ ಅರಿವು ಇರಬೇಕು ಹಾನಿಗೊಳಗಾದ, ದೋಷಪೂರಿತ ಉಪಕರಣಗಳನ್ನು ಬಳಕೆ ಮಾಡಬಾರದು. ಹಾಗಾಗಿ ಈ ಎಲ್ಲ ಕ್ರಮ ಅನುಸರಿಸುವ ಜೊತೆಗೆ ಜಿಮ್ ತೆರಳುವವರು ತಮ್ಮ ಬಗ್ಗೆ ತಾವೇ ಸ್ವ ಕಾಳಜಿ ಹೊಂದಿದ್ದರೆ ಯಾವುದೇ ಅಸುರಕ್ಷತೆ ಸಮಸ್ಯೆ ಬರಲಾರದು.