Vishweshwar Bhat Column: ವೃದ್ಧರು ಮತ್ತು ಡ್ರೈವಿಂಗ್ ಲೈಸೆನ್ಸ್
ಗ್ರಾಮೀಣ ಭಾಗಗಳಲ್ಲಿ 75 ವರ್ಷ ದಾಟಿದವರು ತಮ್ಮ ಮಕ್ಕಳಿಂದ ದೂರವಾಗಿ ಪತ್ನಿಯೊಂದಿಗೆ ಅಥವಾ ಏಕಾಂಗಿಯಾಗಿ ಜೀವನ ನಡೆಸುತ್ತಿರುವುದು ಗಮನಾರ್ಹ. ಅಂಥವರ ಡ್ರೈವಿಂಗ್ ಲೈಸೆ ನ್ಸನ್ನು ರದ್ದು ಮಾಡಿಬಿಟ್ಟರೆ, ಅವರ ಓಡಾಟಕ್ಕೆ ಸಮಸ್ಯೆ ಆಗುವುದು ಸಹಜ. ಅಲ್ಲದೇ ವೃದ್ಧರು ಇದಕ್ಕಾಗಿ ಬೇರೆಯವರನ್ನು ಅವಲಂಬಿಸುವುದು ಅನಿವಾರ್ಯ. ಈ ಕಾರಣದಿಂದ ಸರಕಾರ ಅಂಥ ಕ್ರಮವನ್ನು ಕೈಬಿ ಟ್ಟಿತು


ನಾನು ಜಪಾನಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ‘ಜಪಾನ್ ಟೈಮ್ಸ್’ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಡ್ರೈವಿಂಗ್ ಲೈಸೆನ್ಸನ್ನು ಸ್ವಯಂಪ್ರೇರಿತರಾಗಿ ನವೀಕರಿಸದಿರುವ ಮನೋಭಾವ ವಯಸ್ಕರಲ್ಲಿ ಹೆಚ್ಚುತ್ತಿದೆ ಎಂಬುದು ಆ ಸುದ್ದಿಯ ಸಾರಾಂಶವಾಗಿತ್ತು. ಜಪಾನಿನಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚಿರುವುದು ಗೊತ್ತಿರುವ ಸಂಗತಿ. 70-75 ವರ್ಷ ವಾದರೂ ಅಲ್ಲಿನ ವಯಸ್ಕರು ವಾಹನಗಳನ್ನು ಡ್ರೈವ್ ಮಾಡುವುದು ಸಾಮಾನ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ವಯಸ್ಕರಿಂದಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಸರಾಸರಿ ಹತ್ತು ರಸ್ತೆ ಅಪಘಾತಗಳ ಪೈಕಿ ನಾಲ್ಕರಲ್ಲಿ ವಯಸ್ಕರೇ ಭಾಗಿಯಾಗುತ್ತಿರುವುದು ಕಳವಳ ಕಾರಿ. 75 ವರ್ಷ ದಾಟಿದವರ ಡ್ರೈವಿಂಗ್ ಲೈಸೆ ರದ್ದುಪಡಿಸಲು ಸರಕಾರ ನಿರ್ಧರಿಸಿತ್ತು.
ಆದರೆ ಆ ತೀರ್ಮಾನವನ್ನು ಕೈಬಿಟ್ಟಿತು. ಗ್ರಾಮೀಣ ಭಾಗಗಳಲ್ಲಿ 75 ವರ್ಷ ದಾಟಿದವರು ತಮ್ಮ ಮಕ್ಕಳಿಂದ ದೂರವಾಗಿ ಪತ್ನಿಯೊಂದಿಗೆ ಅಥವಾ ಏಕಾಂಗಿಯಾಗಿ ಜೀವನ ನಡೆಸು ತ್ತಿರುವುದು ಗಮನಾರ್ಹ. ಅಂಥವರ ಡ್ರೈವಿಂಗ್ ಲೈಸೆನ್ಸನ್ನು ರದ್ದು ಮಾಡಿಬಿಟ್ಟರೆ, ಅವರ ಓಡಾಟಕ್ಕೆ ಸಮಸ್ಯೆ ಆಗುವುದು ಸಹಜ. ಅಲ್ಲದೇ ವೃದ್ಧರು ಇದಕ್ಕಾಗಿ ಬೇರೆಯವರನ್ನು ಅವಲಂಬಿಸುವುದು ಅನಿವಾರ್ಯ. ಈ ಕಾರಣದಿಂದ ಸರಕಾರ ಅಂಥ ಕ್ರಮವನ್ನು ಕೈಬಿ ಟ್ಟಿತು.
ಹಾಗಂತ 75 ವರ್ಷ ದಾಟಿದವರೆಲ್ಲರೂ ಕೆಟ್ಟ ಚಾಲಕರು ಎಂದು ಭಾವಿಸಬೇಕಿಲ್ಲ. ಅವ ರಲ್ಲಿ ಇಂದಿಗೂ ಅಪಘಾತರಹಿತ ದಾಖಲೆ ಹೊಂದಿರುವವರೇ ಹೆಚ್ಚು. ಆದರೆ ಹೆಚ್ಚಿನ ಅಪಘಾತ ಪ್ರಕರಣಗಳಲ್ಲಿ ವಯಸ್ಕರು ಭಾಗಿಯಾಗುತ್ತಿರುವುದೂ ಸುಳ್ಳಲ್ಲ. ಹೀಗಾಗಿ ವಯಸ್ಸಿನ ಕಾರಣ ನೀಡಿ ಏಕಾಏಕಿ ಲೈಸೆನ್ಸನ್ನು ರದ್ದು ಮಾಡುವ ಬದಲು, ಅಲ್ಲಿನ ಸರ ಕಾರ ಈ ನಿರ್ಧಾರ ತೆಗೆದುಕೊಳ್ಳುವ ವಿವೇಚನೆಯನ್ನು ವೃದ್ಧರಿಗೇ ಬಿಟ್ಟಿತು.
ಸರಿಯಾಗಿ ಡ್ರೈವ್ ಮಾಡಲು ತಾವು ಅಸಮರ್ಥರು ಎಂದು ಅನಿಸಿದರೆ, ಅವರೇ ಲೈಸೆನ್ಸ್ ರದ್ದು ಮಾಡುವಂತೆ ಕೋರುವ ಪದ್ಧತಿಯನ್ನು ಜಾರಿಗೆ ತಂದಿತು. ಇದರಿಂದ ಸ್ವಯಂ ಪ್ರೇರಿತರಾಗಿ ಲೈಸೆನ್ಸ್ ರದ್ದು ಮಾಡುವಂತೆ ಕೋರುವ ವೃದ್ಧರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಲಾರಂಭಿಸಿತು.
ಜಪಾನಿನಲ್ಲಿ ಡ್ರೈವಿಂಗ್ ಲೈಸೆನ್ಸನ್ನು ಐಡೆಂಟಿಟಿ ಕಾರ್ಡ್ ಆಗಿ ಬಳಸುವುದರಿಂದ, ಯಾರು ಡ್ರೈವಿಂಗ್ ಲೈಸೆನ್ಸನ್ನು ರದ್ದುಪಡಿಸುವಂತೆ ಕೋರುತ್ತಾರೋ, ಅವರಿಗೆ ಹೊಸತಾಗಿ ಐಡಿ ಕಾರ್ಡ್ ನೀಡಬೇಕಾಗಿ ಬಂದಿತು. ಆದರೆ ಬೇರೆ ದಾರಿಯೇ ಇರಲಿಲ್ಲ. ಕಳೆದ ಒಂದೇ ವರ್ಷ ದಲ್ಲಿ ತಮ್ಮ ಡ್ರೈವಿಂಗ್ ಲೈಸೆನ್ಸನ್ನು ರದ್ದುಪಡಿಸುವಂತೆ 4 ಲಕ್ಷಕ್ಕೂ ಅಧಿಕ ವೃದ್ಧರು ಅರ್ಜಿ ಹಾಕಿದರು.
ಇವರ ಪೈಕಿ ಹೆಚ್ಚಿನವರು ತಾವು ಡ್ರೈವಿಂಗ್ ಮಾಡಲು ಅಸಮರ್ಥರು ಎಂದು ಭಾವಿಸಿದ್ದ ಕ್ಕಿಂತ, ತಮ್ಮಿಂದ ಯಾವ ಅಚಾತುರ್ಯವೂ ಸಂಭವಿಸಬಾರದು ಎಂದು ಯೋಚಿಸಿದ್ದರು. ವಯೋಸಹಜ ಜವಾಬ್ದಾರಿಯಿಂದ ಅವರು ಆ ನಿರ್ಧಾರಕ್ಕೆ ಬಂದಿದ್ದರು. ಈ ವಿಷಯದಲ್ಲಿ ಸರಕಾರ ಅತ್ಯಂತ ವಿವೇಚನೆಯಿಂದ ವರ್ತಿಸಿದ್ದನ್ನು ಗಮನಿಸಬಹುದು.
ಸರಕಾರ ಮನಸ್ಸು ಮಾಡಿದ್ದರೆ, 70-75 ವರ್ಷ ದಾಟಿದವರ ಡ್ರೈವಿಂಗ್ ಲೈಸೆನ್ಸನ್ನು ರದ್ದು ಪಡಿಸಬಹುದಿತ್ತು ಅಥವಾ ನವೀಕರಿಸದಿರಬಹುದಿತ್ತು. ಒಂದು ವೇಳೆ ಹಾಗೆ ಮಾಡಿದ್ದಿದ್ದರೆ, ವಯಸ್ಕರಿಗೆ ಬದಲಿ ಸಂಚಾರ ವ್ಯವಸ್ಥೆಯನ್ನು ಸರಕಾರವೇ ಕಲ್ಪಿಸಬೇಕಾಗುತ್ತಿತ್ತು. ಆದರೆ ಜಪಾನಿನಲ್ಲಿ 75 ವರ್ಷ ದಾಟಿದವರ ಪೈಕಿ ಹೆಚ್ಚಿನವರು ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಬಯಸುವುದಿಲ್ಲ. 2017ರಲ್ಲಿ ಇಡೀ ಪ್ರಕರಣ ಹೊಸ ತಿರುವು ಪಡೆಯಿತು.
82ನೇ ವಯಸ್ಸಿನಲ್ಲಿ ರಾಜಮನೆತನದ ಅಕಿಹಿಟೋ ಅವರು ತಮ್ಮ ಡ್ರೈವಿಂಗ್ ಲೈಸೆನ್ಸನ್ನು ನವೀಕರಿಸಿದ್ದು ದೊಡ್ಡ ಸುದ್ದಿಯಾಯಿತು. ಈ ವಯಸ್ಸಿನಲ್ಲಿ ಅವರಿಗೆ ಡ್ರೈವಿಂಗ್ ಲೆಸೆನ್ಸ್ ನೀಡಿದ್ದು ಎಷ್ಟು ಸರಿ ಎಂಬ ಬಗ್ಗೆ ಚರ್ಚೆ ಹುಟ್ಟಿಕೊಂಡಿತು. ಆಗ ಸ್ವತಃ ಅಕಿಹಿಟೋ ಅವರೇ ಅದಕ್ಕೆ ಸ್ಪಷ್ಟನೆ ನೀಡಿದರು.
‘ನಾನು ಯಾವ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಡ್ರೈವ್ ಮಾಡುವುದಿಲ್ಲ. ಅರಮನೆ ಯೊಳಗೆ ಮಾತ್ರ ಡ್ರೈವ್ ಮಾಡುತ್ತೇನೆ. ಆ ಉದ್ದೇಶಕ್ಕೆ ಲೈಸೆನ್ಸ್ ಪಡೆದಿದ್ದೇನೆ’ ಎಂದು ಹೇಳಿ ದರು. ಅರಮನೆಯೊಳಗೆ ಮಾತ್ರ ಡ್ರೈವ್ ಮಾಡಲು ಲೈಸೆ ಪಡೆಯಬೇಕಿರಲಿಲ್ಲ. ಆದರೂ ಅಕಿಹಿಟೋ ಕ್ರಮವನ್ನು ಮೆಚ್ಚಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.