ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bhajan Lal Sharma: ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾಗೆ ಜೀವ ಬೆದರಿಕೆ-ಜೈಲಿನಿಂದಲೇ ಬಂದಿತ್ತು ಕರೆ

ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾಗೆ ಜೀವ ಬೆದರಿಕೆ ಹಾಕಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 29 ವರ್ಷದ ರಿಂಕು ಜೈಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ; ಜೈಲಿನಿಂದಲೇ ಕರೆ

ಭಜನ್ ಲಾಲ್ ಶರ್ಮಾ

Profile Vishakha Bhat Feb 22, 2025 1:48 PM

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾಗೆ (Bhajan Lal Sharma) ಜೀವ ಬೆದರಿಕೆ ಬಂದಿದೆ. ದೌಸಾದ ಸಲಸ್ವಾಲ್ ಜೈಲಿನ ಕೈದಿಯೊಬ್ಬ ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 29 ವರ್ಷದ ರಿಂಕು ಜೈಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಕೈದಿ ಸಿಎಂಗೆ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಕರೆ ಮಾಡಲು ಬಳಸಲಾದ ಮೊಬೈಲ್ ಫೋನ್ ಸಲಸ್ವಾಸ್ ಜೈಲಿನಲ್ಲಿ ಪತ್ತೆಯಾಗಿದೆ.

ಬೆಳಗಿನ ಜಾವ 3 ರಿಂದ ಬೆಳಿಗ್ಗೆ 7 ರವರೆಗೆ ಜೈಲಿನ ಆವರಣದಲ್ಲಿ ಮೊಬೈಲ್ ಫೋನ್‌ನನ್ನು ಪೊಲೀಸರು ಹುಡುಕಿದ್ದಾರೆ. ಕೊಲೆ ಬೆದರಿಕೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ಕೂಡ ಸಿಎಂ ಶರ್ಮಾಗೆ ಹಲವು ಬೆದರಿಕೆಗಳು ಬಂದಿದ್ದವು. ಜುಲೈ 2024 ರಲ್ಲಿ, ದೌಸಾ ಕೇಂದ್ರ ಕಾರಾಗೃಹದ ಕೈದಿಯೊಬ್ಬ ಸಿಎಂ ಶರ್ಮಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಅದಕ್ಕೂ ಮೊದಲು ಅದೇ ವರ್ಷದ ಜನವರಿಯಲ್ಲಿ, ಜೈಪುರ ಕೇಂದ್ರ ಕಾರಾಗೃಹದ ಪೋಕ್ಸೊ ಅಪರಾಧಿಯೊಬ್ಬ ಜೈಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಶರ್ಮಾ ಅವರನ್ನು ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದ.

ಇದೇ ರೀತಿಯ ಘಟನೆ ಗುರುವಾರ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ ಪೊಲೀಸರಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಾರನ್ನು ಸ್ಫೋಟಿಸುವ ಬೆದರಿಕೆ ಇರುವ ಇಮೇಲ್‌ಗಳು ಬಂದಿವೆ. ಗೋರೆಗಾಂವ್ ಮತ್ತು ಜೆಜೆ ಮಾರ್ಗ್ ಎಂಬ ಎರಡು ಪೊಲೀಸ್ ಠಾಣೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿವೆ. ಶಿಂಧೆ ವಿರುದ್ಧ ಪೊಲೀಸ್ ಠಾಣೆಗಳಿಗೆ ಕೊಲೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ ಆರೋಪದ ಮೇಲೆ ಅಪರಾಧ ವಿಭಾಗದ ಅಧಿಕಾರಿಗಳು ಶುಕ್ರವಾರ ದೆಯುಲ್ಗಾಂವ್ ಮಾಹಿ ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಂಧನದ ನಂತರ, ಇಬ್ಬರೂ ಶಂಕಿತರನ್ನು ಮುಂಬೈಗೆ ಕರೆದೊಯ್ಯಲಾಗುತ್ತಿದೆ, ಅಲ್ಲಿ ಬೆದರಿಕೆಯ ಹಿಂದಿನ ಉದ್ದೇಶ ಮತ್ತು ಯಾವುದೇ ದೊಡ್ಡ ಪಿತೂರಿಯನ್ನು ನಿರ್ಧರಿಸಲು ಮುಂಬೈ ಅಪರಾಧ ವಿಭಾಗವು ಅವರನ್ನು ವಿಚಾರಣೆ ನಡೆಸಲಿದೆ.

ಈ ಸುದ್ದಿಯನ್ನೂ ಓದಿ : Life Threat: ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ

ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈ ಸಂಚಾರ ಪೊಲೀಸರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಗುರಿಯಾಗಿಸಿಕೊಂಡು ಕೊಲೆ ಬೆದರಿಕೆ ಕರೆ ಬಂದಿತ್ತು . ವಾಟ್ಸಾಪ್‌ನಲ್ಲಿ ಬಂದ ಈ ಬೆದರಿಕೆಯಲ್ಲಿ, ಆದಿತ್ಯನಾಥ್ 10 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಅವರನ್ನು ಕೊಲ್ಲುತ್ತೇವೆ ಎಂದು ಸಂದೇಶವನ್ನು ಕಳುಹಿಸಲಾಗಿತ್ತು.