ಆರ್‌ಸಿಬಿ ಅಭಿಮಾನಿಗಳ ಅಬ್ಬರ ತಾಳಲಾರದೆ ಕಿವಿ ಮುಚ್ಚಿಕೊಂಡ ಮುಂಬೈ ನಾಯಕಿ
Harmanpreet Kaur: ಹ್ಯಾಟ್ರಿಕ್ ಹಾದಿಯಲ್ಲಿದ್ದ ಆರ್‌ಸಿಬಿ ಈ ಪಂದ್ಯದಲ್ಲಿ ಸೋಲು ಕಂಡಿತು. ಮುಂಬೈಗೆ 4 ವಿಕೆಟ್‌ಗಳಿಂದ ಶರಣಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 167 ರನ್ ಪೇರಿಸಿದರೆ, ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಮುಂಬೈ 19.5 ಓವರ್‌ಗಳಲ್ಲಿ 6 ವಿಕೆಟಿಗೆ 170 ರನ್ ಬಾರಿಸಿತು.


ಬೆಂಗಳೂರು: ಶುಕ್ರವಾರ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಆರ್‌ಸಿಬಿ ಅಭಿಮಾನಿಗಳು ಜೈಕಾರ ಕೂಗುತ್ತಾ, ತಂಡವನ್ನು ಹುರಿದುಂಬಿಸಿದರು. ಪಂದ್ಯದುದ್ದಕ್ಕೂ ಆರ್‌ಸಿಬಿ...ಆರ್‌ಸಿಬಿ...ಎಂದು ಕೂಗುತ್ತಾ ಬೆಂಬಲ ಸೂಚಿಸಿದರು. ಅದರಲ್ಲೂ ಆರ್‌ಸಿಬಿ ಬ್ಯಾಟಿಂಗ್ ವೇಳೆ ಅಭಿಮಾನಿಗಳ ಕಿರುಚಾಟ ದೊಡ್ಡ ಮಟ್ಟದಲ್ಲಿ ಕೇಳಿಬಂತು. ಕಿರುಚಾಟ ತಾಳಲಾರದೇ ಎದುರಾಳಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಿವಿಗೆ ಕೈ ಇಟ್ಟ ದೃಶ್ಯ ಕಂಡುಬಂತು. ಈ ವಿಡಿಯಿ ಇದೀಗ ವೈರಲ್ ಆಗಿದೆ.
ಹ್ಯಾಟ್ರಿಕ್ ಹಾದಿಯಲ್ಲಿದ್ದ ಆರ್‌ಸಿಬಿ ಈ ಪಂದ್ಯದಲ್ಲಿ ಸೋಲು ಕಂಡಿತು. ಮುಂಬೈಗೆ 4 ವಿಕೆಟ್‌ಗಳಿಂದ ಶರಣಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 167 ರನ್ ಪೇರಿಸಿದರೆ, ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಮುಂಬೈ 19.5 ಓವರ್‌ಗಳಲ್ಲಿ 6 ವಿಕೆಟಿಗೆ 170 ರನ್ ಬಾರಿಸಿತು.
ಚೇಸಿಂಗ್ ವೇಳೆ ಹರ್ಮನ್‌ಪ್ರೀತ್ ಕೌರ್ 50 ಹಾಗೂ ಅಮನ್‌ಜೋತ್ ಕೌರ್ ಔಟಾಗದೆ 34 ರನ್ ಹೊಡೆದರು. ಬೌಲಿಂಗ್‌ನಲ್ಲಿಯೂ ಮಿಂಚಿದ ಅಮನ್‌ಜೋತ್ ಕೌರ್ 22ಕ್ಕೆ 3 ವಿಕೆಟ್ ಉರುಳಿಸಿ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಓಪನರ್ ಹ್ಯಾಲಿ ಮ್ಯಾಥ್ಯೂಸ್ 15 ರನ್ ಮಾಡಿದರು. ನ್ಯಾಟ್ ಸ್ಕಿವರ್ ಬ್ರಂಟ್ ಬಿರುಸಿನ ಆಟವಾಡಿ 42 ರನ್ ಬಾರಿಸಿದರು (21 ಎಸೆತ, 9 ಬೌಂಡರಿ). ಇವರ ವಿಕೆಟ್ ಬೀಳುತ್ತಿದ್ದಂತೆ ಮುಂಬೈ ಸೋಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೌರ್ ಧ್ವಯರು ಸೇರಿಕೊಂಡು ಪಂದ್ಯವನ್ನು ಆರ್‌ಸಿಬಿಯಿಂದ ಕಸಿದರು.
ಇದನ್ನೂ ಓದಿ GGTW vs RCBW: ಹಲವು ದಾಖಲೆಗಳಿಗೆ ಸಾಕ್ಷಿಯಾದ ಆರ್‌ಸಿಬಿ-ಗುಜರಾತ್ ಪಂದ್ಯ
ಬೆಂಗಳೂರು ಪರ ಮಧ್ಯಮ ಕ್ರಮಾಂಕದ ಆಟಗಾರ್ತಿ ಎಲ್ಲಿಸ್ ಪೆರ್ರಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 43 ಎಸೆತಗಳಿಂದ 81 ರನ್ ಸಿಡಿಸಿದರು (11 ಬೌಂಡರಿ, 2 ಸಿಕ್ಸರ್). ಪೆರ್ರಿ ಪರಾಕ್ರಮದಿಂದ ಕೊನೆಯ 5 ಓವರ್‌ಗಳಲ್ಲಿ 53 ರನ್ ಒಟ್ಟುಗೂಡಿತು. ಉಳಿದಂತೆ ರಿಚಾ ಘೋಷ್ 28 ಮತ್ತು ನಾಯಕಿ ಮಂಧನಾ 26 ರನ್ ಕೊಡುಗೆ ಸಲ್ಲಿಸಿದರು.