ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

MS Dhoni: 43ನೇ ವಯಸ್ಸಿನಲ್ಲಿ ಐಪಿಎಲ್ ಆಡುವುದು ಕಠಿಣವೇ?; ಧೋನಿಯ ಉತ್ತರ ಹೀಗಿದೆ

MS Dhoni: ಒಂದೆಡರು ತಿಂಗಳು ಆಡುದಿದ್ದರೂ, ಖಂಡಿತವಾಗಿಯೂ, ಅದಕ್ಕಾಗಿ, ಆರರಿಂದ ಎಂಟು ತಿಂಗಳುಗಳ ಕಾಲ ಕಠಿಣ ಪರಿಶ್ರಮ ಪಡಬೇಕಾಗಿದೆ. ಏಕೆಂದರೆ ಐಪಿಎಲ್ ಅತ್ಯಂತ ಕಠಿಣ ಪಂದ್ಯಾವಳಿಗಳಲ್ಲಿ ಒಂದಾಗಿದೆ. ನಿಮ್ಮ ವಯಸ್ಸು ಎಷ್ಟು ಎಂದು ಯಾರೂ ಕೇಳುದಿಲ್ಲ. ಬದಲಾಗಿ ನೀವು ಯಾವ ಮಟ್ಟದಲ್ಲಿ ಆಡುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಹೀಗಾಗಿ ನಾವು ಕಠಿಣ ಪರಿಶ್ರಮ ಪಡಲೇ ಬೇಕು ಎಂದು ಧೋನಿ ಹೇಳಿದರು.

43ನೇ ವಯಸ್ಸಿನಲ್ಲಿ ಐಪಿಎಲ್ ಆಡುವುದು ಕಠಿಣವೇ?; ಧೋನಿಯ ಉತ್ತರ ಹೀಗಿದೆ

Profile Abhilash BC Feb 22, 2025 11:35 AM

ಚೆನ್ನೈ: ಐಪಿಎಲ್‌ 18ನೇ ಆವೃತ್ತಿ ಮಾರ್ಚ್‌ 22ರಿಂದ ಆರಂಭವಾಗಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಟೂರ್ನಿಗೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಧೋನಿ ಐಪಿಎಲ್‌ನಲ್ಲಿ ಇನ್ನೂ ಕೆಲ ವರ್ಷಗಳ ಕಾಲ ತಮ್ಮ ಆಟ ಮುಂದುವರಿಸುವ ಹೇಳಿಕೆ ನೀಡಿದ್ದರು. ಇದೀಗ 43 ವರ್ಷದಲ್ಲಿಯೂ ಐಪಿಎಲ್‌ ಆಡಲು ಬೇಕಿರುವ ಪರಿಶ್ರಮದ ಬಗ್ಗೆ ಮಹತ್ವದ ಸಲಹೆ ನೀಡಿದ್ದಾರೆ.

'ನಾನು ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಆಡುತ್ತೇನೆ, ಆದರೆ ನಾನು ಆಡಲು ಪ್ರಾರಂಭಿಸಿದ ರೀತಿಯಲ್ಲಿ ಅದನ್ನು ಆನಂದಿಸಲು ಬಯಸುತ್ತೇನೆ' ಎಂದು ಮುಂಬೈನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಧೋನಿ ಹೇಳಿದರು.

'ಒಂದೆಡರು ತಿಂಗಳು ಆಡುದಿದ್ದರೂ, ಖಂಡಿತವಾಗಿಯೂ, ಅದಕ್ಕಾಗಿ, ಆರರಿಂದ ಎಂಟು ತಿಂಗಳುಗಳ ಕಾಲ ಕಠಿಣ ಪರಿಶ್ರಮ ಪಡಬೇಕಾಗಿದೆ. ಏಕೆಂದರೆ ಐಪಿಎಲ್ ಅತ್ಯಂತ ಕಠಿಣ ಪಂದ್ಯಾವಳಿಗಳಲ್ಲಿ ಒಂದಾಗಿದೆ. ನಿಮ್ಮ ವಯಸ್ಸು ಎಷ್ಟು ಎಂದು ಯಾರೂ ಕೇಳುದಿಲ್ಲ. ಬದಲಾಗಿ ನೀವು ಯಾವ ಮಟ್ಟದಲ್ಲಿ ಆಡುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಹೀಗಾಗಿ ನಾವು ಕಠಿಣ ಪರಿಶ್ರಮ ಪಡಲೇ ಬೇಕು' ಎಂದರು.



ಅಭ್ಯಾಸ ಆರಂಭಿಸಿದ ಧೋನಿ

ಐಪಿಎಲ್‌(IPL 2025) ಟೂರ್ನಿ ಮುಂದಿನ ತಿಂಗಳು ಮಾ. 22ರಿಂದ ಆರಂಭಗೊಳ್ಳಲಿದೆ. ಟೂರ್ನಿಗೆ ಒಂದು ತಿಂಗಳು ಬಾಕಿ ಇರುವಾಗಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತವರು ಮೈದಾನವಾದ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದೆ. ಧೋನಿ ಕೂಡ ಅಭ್ಯಾಸ ಶುರು ಮಾಡಿದ್ದಾರೆ. ಬುಧವಾರವಷ್ಟೇ ಧೋನಿ 'ಹೆಲಿಕಾಪ್ಟರ್ ಶಾಟ್' ಮೂಲಕ ಸಿಕ್ಸರ್‌ ಬಾರಿಸುತ್ತಿರುವ ವಿಡಿಯೊವೊಂದು ವೈರಲ್‌ ಆಗಿತ್ತು. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅನ್‌ಕ್ಯಾಪ್ಟ್‌ ನಿಯಮದ ಅಡಿಯಲ್ಲಿ ಧೋನಿಯನ್ನು 4 ಕೋಟಿ ರೂ. ನೀಡಿ ರಿಟೇನ್‌ ಮಾಡಿತ್ತು.



ಧೋನಿ ಈ ಬಾರಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್‌ ಕೀಪರ್‌ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಮೂಲಗಳ ಪ್ರಕಾರ ಅವರು ಕೆಲ ಪಂದ್ಯಗಳಲ್ಲಿ ಮಾತ್ರ ಪೂರ್ಣಪ್ರಮಾಣದಲ್ಲಿ ಆಡಿ ಆ ಬಳಿಕ ಬಹುತೇಕ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಬ್ಯಾಟ್‌ ಬೀಸಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ದೊಡ್ಡ ಹೊಡೆತದ ಅಭ್ಯಾಸ ನಡೆಸುವಂತೆ ಕಾಣುತ್ತಿದೆ.

ಚೆನ್ನೈ ತಂಡ

ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್​ ಅಹ್ಮದ್,​ ಆರ್​. ಅಶ್ವಿನ್​, ಡೆವೊನ್​ ಕಾನ್ವೇ, ರಚಿನ್​ ರವೀಂದ್ರ, ರಾಹುಲ್​ ತ್ರಿಪಾಠಿ, ಖಲೀಲ್​ ಅಹ್ಮದ್​, ವಿಜಯ್​ ಶಂಕರ್​, ಸ್ಯಾಮ್​ ಕರನ್​, ಅಂಶುಲ್​ ಕಂಬೋಜ್​, ಶೇಕ್​ ರಶೀದ್​, ಮುಕೇಶ್​ ಚೌಧರಿ, ದೀಪಕ್​ ಹೂಡಾ, ಗುರುಜಪ್​ನೀತ್​ ಸಿಂಗ್​ ,ನಾಥನ್​ ಎಲ್ಲಿಸ್​, ಜೇಮಿ ಓವರ್ಟನ್​, ಕಮಲೇಶ್​ ನಾಗರಕೋಟಿ, ರಾಮಕೃಷ್ಣ ಘೋಷ್​, ಶ್ರೇಯಸ್​ ಗೋಪಾಲ್​, ವಂಶ್​ ಬೇಡಿ, ಆಂಡ್ರೆ ಸಿದ್ಧಾರ್ಥ್​.