ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Google Pay: ಗೂಗಲ್‌ ಪೇ ಬಳಕೆದಾರರಿಗೆ ಶಾಕ್‌; ಇನ್ನುಮುಂದೆ ಬಿಲ್‌ ಪೇಮೆಂಟ್‌ಗೆ ಶುಲ್ಕ ಪಾವತಿಸಬೇಕು

ಜನಪ್ರಿಯ ಯುಪಿಐ ಆ್ಯಪ್‌ ಗೂಗಲ್‌ ಪೇ ವಿದ್ಯುತ್‌ ಬಿಲ್‌ ಮತ್ತು ಗ್ಯಾಸ್‌ ಬಿಲ್‌ ಪಾವತಿಗೆ ಕನ್ವೀನಿಯನ್ಸ್‌ ಶುಲ್ಕ ಪರಿಚಯಿಸಿದೆ. ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸಿ ವಿದ್ಯುತ್‌ ಮತ್ತು ಗ್ಯಾಸ್‌ ಬಿಲ್‌ ಪಾವತಿಸುವವರು ಇನ್ನುಮುಂದೆ ಶೇ. 0.5ರಿಂದ ಶೇ. 1ರಷ್ಟು ಹೆಚ್ಚುವರಿ ಕನ್ವೀನಿಯನ್ಸ್‌ ಶುಲ್ಕ ನೀಡಬೇಕಾಗುತ್ತದೆ.

ಗೂಗಲ್‌ ಪೇ ಬಳಕೆದಾರರಿಗೆ ಕಹಿ ಸುದ್ದಿ; ಬಿಲ್‌ ಪಾವತಿಗೆ ಹೆಚ್ಚುವರಿ ಶುಲ್ಕ

ಗೂಗಲ್‌ ಪೇ.

Profile Ramesh B Feb 20, 2025 10:17 PM

ಹೊಸದಿಲ್ಲಿ: ನೀವು ವಿದ್ಯುತ್‌, ಗ್ಯಾಸ್‌ ಬಿಲ್‌ಗಳನ್ನು ಗೂಗಲ್‌ ಪೇ (Google Pay) ಮೂಲಕ ಪಾವತಿಸುತ್ತಿದ್ದೀರಾ? ಹಾಗಾದರೆ ಇನ್ನುಮುಂದೆ ನಿಮ್ಮ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ. ಹೌದು, ಜನಪ್ರಿಯ ಯುಪಿಐ (UPI) ಆ್ಯಪ್‌ ಗೂಗಲ್‌ ಪೇ ವಿದ್ಯುತ್‌ ಬಿಲ್‌ ಮತ್ತು ಗ್ಯಾಸ್‌ ಬಿಲ್‌ ಪಾವತಿಗೆ ಕನ್ವೀನಿಯನ್ಸ್‌ ಶುಲ್ಕ (Convenience fee) ಪರಿಚಯಿಸಿದೆ. ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸಿ ವಿದ್ಯುತ್‌ ಮತ್ತು ಗ್ಯಾಸ್‌ ಬಿಲ್‌ ಪಾವತಿಸುವವರು ಇನ್ನುಮುಂದೆ ಶೇ. 0.5ರಿಂದ ಶೇ. 1ರಷ್ಟು ಹೆಚ್ಚುವರಿ ಕನ್ವೀನಿಯನ್ಸ್‌ ಶುಲ್ಕ ನೀಡಬೇಕಾಗುತ್ತದೆ. ಈಗಾಗಲೇ ಪ್ರಮುಖ ಯುಪಿಐ ಪಾವತಿ ವೇದಿಕೆಗಳಾದ ಫೋನ್‌ಪೇ ಹಾಗೂ ಪೇಟಿಎಂ ಈ ರೀತಿ ಶುಲ್ಕ ವಿಧಿಸುತ್ತಿವೆ. ಇದೀಗ ಗೂಗಲ್‌ ಪೇ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಡಲು ಮುಂದಾಗಿದೆ.

ಮೊದಲ ಸಲವಲ್ಲ

ಹಾಗೆ ನೋಡಿದರೆ ಗೂಗಲ್‌ ಪೇ ಪಾವತಿಗೆ ತನ್ನ ಗ್ರಾಹಕರ ಮೇಲೆ ಹೆಚ್ಚುವರಿ ಶುಲ್ಕ ಹೇರುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ ಅಂದರೆ ಕಳೆದ ವರ್ಷ ಮೊಬೈಲ್‌ ರೀಚಾರ್ಚ್‌ಗೆ ಗೂಗಲ್‌ ಪೇ 3 ರೂ. ಕನ್ವೀನಿಯನ್ಸ್‌ ಶುಲ್ಕ ವಿಧಿಸಲು ಆರಂಭಿಸಿತ್ತು. ʼʼಈ ಕ್ರಮವು ಯುಪಿಐ ಆಧಾರಿತ ವಹಿವಾಟುಗಳನ್ನು ಹಣಗಳಿಸಲು ಬಳಸುವ ಕಂಪನಿಯ ಬದಲಾದ ಚಿಂತನೆಯನ್ನು ಸೂಚಿಸುತ್ತದೆ. ಇದರೊಂದಿಗೆ ಯುಪಿಐ ವೇದಿಕೆಗಳು ವಹಿವಾಟುಗಳಿಂದ ಹಣ ಗಳಿಸುವ ಮಾರ್ಗ ತುಳಿದಿವೆʼʼ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.



ಯುಪಿಐ ಪಾವತಿಗಿಲ್ಲ ಶುಲ್ಕ

ಅದಾಗ್ಯೂ ಕಾರ್ಡ್‌ ಮೂಲಕ ಬಿಲ್‌ ಪಾವತಿಗೆ ಮಾತ್ರ ಈ ಶುಲ್ಕ ಇದೆ. ಬ್ಯಾಂಕ್‌ಗೆ ಲಿಂಕ್ ಆಗಿರುವ ಯುಪಿಐ ಮೂಲಕ ಬಿಲ್‌ ಪಾವತಿಸಿದಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಈ ಸೇವೆ ಉಚಿತವಾಗಿ ಮುಂದುವರಿಯಲಿದೆ ಎಂದು ಗೂಗಲ್‌ ಪೇ ಹೇಳಿದೆ.

ಫೋನ್‌ ಪೇಯಲ್ಲಿಯೂ ಇದೆ ಶುಲ್ಕ

ಫೋನ್‌ ಪೇ ಈಗಾಗಲೇ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ನೀರು, ವಿದ್ಯುತ್‌ ಮತ್ತು ಗ್ಯಾಸ್‌ ಬಿಲ್‌ಗೆ ಪಾವತಿಗೆ ಕನ್ವೀನಿಯನ್ಸ್‌ ಶುಲ್ಕ ಶುಲ್ಕ ವಿಧಿಸುತ್ತಿದೆ. ಮಾತ್ರವಲ್ಲ ಪೇಟಿಎಂ ಯುಪಿಐ ಮತ್ತು ಬಿಲ್‌ ಪಾವತಿಗೆ 1 ರೂ. ಯಿಂದ 40 ರೂ.ವರೆಗೆ ಶುಲ್ಕ ವಿಧಿಸುತ್ತಿದೆ.

ಈ ಸುದ್ದಿಯನ್ನೂ ಓದಿ: Gold ETF: ಮಾಸಿಕ 10,000 ರುಪಾಯಿ ಹೂಡಿಕೆ, 9 ಲಕ್ಷ ಲಾಭ! ಗೋಲ್ಡ್‌ ಇಟಿಎಫ್‌ ಅಂದ್ರೆ ಏನ್‌ ಗೊತ್ತಾ?

2ನೇ ಅತಿ ದೊಡ್ಡ ಮಾರುಕಟ್ಟೆ

ಯುಪಿಐ ಪಾವತಿಗಳಲ್ಲಿ ಗೂಗಲ್‌ ಪೇ 2ನೇ ಸ್ಥಾನದಲ್ಲಿದೆ. ಇದು ಮಾರುಕಟ್ಟೆಯಲ್ಲಿ ಶೇ. 37ರಷ್ಟು ಪಾಲು ಹೊಂದಿದೆ. ಮೊದಲ ಸ್ಥಾನದಲ್ಲಿ ವಾಲ್‌ಮಾರ್ಟ್‌ ಒಡೆತನದ ಫೋನ್‌ಪೇ ಇದೆ. ಜನವರಿಯಲ್ಲಿ ಗೂಗಲ್‌ ಪೇ ಸುಮಾರು 8.26 ಲಕ್ಷ ಕೋಟಿ ರೂ. ವಹಿವಾಟು ನಡೆಸಿದೆ.

ಹೆಚ್ಚುತ್ತಿರುವ ಯುಪಿಐಯ ಜನಪ್ರಿಯತೆಯ ಹೊರತಾಗಿಯೂ ಫಿನ್‌ಟೆಕ್‌ ಕಂಪನಿಗಳು ಈ ವಹಿವಾಟುಗಳಿಂದ ಗಣನೀಯ ಆದಾಯವನ್ನು ಗಳಿಸಲು ಹೆಣಗಾಡುತ್ತಿವೆ. ಈ ಆರ್ಥಿಕ ಅಡೆತಡೆಗಳ ಹೊರತಾಗಿಯೂ ಯುಪಿಐ ದೇಶಾದ್ಯಂತ ವೇಗವಾಗಿ ಬೆಳೆಯುತ್ತಿದೆ. 2025ರ ಜನವರಿಯಲ್ಲಿ ಒಟ್ಟು ಯುಪಿಐ ವಹಿವಾಟು 16.99 ಬಿಲಿಯನ್‌ಗೆ ಏರಿದೆ.