ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Relationship tips: ಬ್ರೇಕಪ್ ಆಯ್ತು ಅಂತ ಚಿಂತಿಸ್ಬೇಡಿ... Move on ಮಾಡೋಕೆ ಇಲ್ಲಿದೆ ಟಿಪ್ಸ್!

ಕೆಲವು ಪ್ರೀತಿಯನ್ನು ಇದ್ದಾಗ ಜೋಪಾನವಾಗಿಸದೇ ಕೈತಪ್ಪಿ ಹೋದಾಗ ಮರುಕ ಪಡುವವರು ಇದ್ದಾರೆ. ಅವರಿಗೆ ತಾವೆಷ್ಟು ಪ್ರಯತ್ನ ಪಟ್ಟರು ತಮ್ಮ ಮಾಜಿ ಪ್ರೀತಿಯಿಂದ ಹೊರ ಬರಲು ಸೂಕ್ತ ಮಾರ್ಗವೇ ಸಿಗುತ್ತಿಲ್ಲ ಎಂಬ ದ್ವಂದ್ವದಲ್ಲಿಯೇ ಬದುಕುತ್ತಾರೆ. ಹಾಗಾಗಿ ಬ್ರೇಕಪ್ ಬಳಿಕ ಆ ಘಟನೆಯಿಂದ ಸಂಪೂರ್ಣ ಹೊರ ಉಳಿಯಲು ಬಯಸಿದವರು ಅಗತ್ಯವಾಗಿ ಕೆಲವು ಕ್ರಮ ಅನುಸರಿಸಲೇ ಬೇಕು.

ಲವ್ ಬ್ರೇಕಪ್‌ನಿಂದ ಹೊರಬರಲಾಗ್ತಿಲ್ಲವೇ? ಈ ಟಿಪ್ಸ್‌ ಫಾಲೋ ಮಾಡಿ

Profile Pushpa Kumari Feb 22, 2025 5:30 AM

ಬೆಂಗಳೂರು: ಪ್ರೀತಿಯಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಪರಸ್ಪರ ನಂಬಿಕೆಯ ಅಡಿಯಲ್ಲಿ ಪ್ರೀತಿ ದೀರ್ಘಕಾಲದವರೆಗೂ ಜೊತೆ ಇರುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಪ್ರೀತಿಮಾಡಿ ಮದುವೆ ತನಕ ಹೋಗುವವರಿಗಿಂತ ಬ್ರೇಕಪ್ ಮಾಡಿಕೊಂಡು ಬೇರೆಯಾಗಿರರುವ ಸಂಖ್ಯೆಯೇ ಹೆಚ್ಚು ಎನ್ನಬಹುದು. ಸಮಯ ಕೊಡುತ್ತಿಲ್ಲ, ಪರಸ್ಪರ ಭಾವನೆ ವಿನಿಮಯ ಮಾಡಿಕೊಳ್ಳುತ್ತಿಲ್ಲ, ಹೇಳಿದಾಗೆ ಕೇಳೊಲ್ಲ, ಹೊಂದಾಣಿಕೆ ಇಲ್ಲ ಎಂಬ ಅನೇಕ ಕ್ಷುಲ್ಲಕ ಕಾರಣಕ್ಕೆ ಪ್ರೀತಿ ಕೊನೆಯಾಗುತ್ತಿದೆ. ಹಾಗಿದ್ದರೂ ಕೆಲವು ಪ್ರೀತಿಯನ್ನು ಇದ್ದಾಗ ಜೋಪಾನವಾಗಿಸದೇ ಕೈ ತಪ್ಪಿ ಹೋದಾಗ ಮರುಕ ಪಡುವವರು ಇದ್ದಾರೆ(Relationship Tips). ಅವರಿಗೆ ತಾವೆಷ್ಟು ಪ್ರಯತ್ನ ಪಟ್ಟರು ತಮ್ಮ ಮಾಜಿ ಪ್ರೀತಿಯಿಂದ ಹೊರ ಬರಲು ಸೂಕ್ತ ಮಾರ್ಗವೇ ಸಿಗುತ್ತಿಲ್ಲ ಎಂಬ ದ್ವಂದ್ವದಲ್ಲಿಯೇ ಬದುಕುತ್ತಾರೆ. ಹಾಗಾಗಿ ಬ್ರೇಕಪ್ ಬಳಿಕ ಆ ಘಟನೆಯಿಂದ ಸಂಪೂರ್ಣ ಹೊರ ಉಳಿಯಲು ಬಯಸಿದವರು ಅಗತ್ಯವಾಗಿ ಕೆಲವು ಕ್ರಮ ಅನುಸರಿಸಲೇ ಬೇಕು.

ಯಾವುದೇ ಸಂಪರ್ಕ ಬೇಡ:

ಅನೇಕ ಸಲ ಬ್ರೇಕಪ್ ಬಳಿಕ ಆ ವ್ಯಕ್ತಿಯ ನೆನಪು ಕಾಡುವುದು ಹೆಚ್ಚು. ಹೀಗಾಗಿ ಒಮ್ಮೆ ಮಾತನಾಡಿಸೋಣ , ಮೀಟ್ ಆಗೋಣ ಎಂಬ ಅನೇಕ ಯೋಚನೆ ಬರುವ ಸಾಧ್ಯತೆ ಸಹ ಇದೆ. ಆದರೆ ಒಡೆದುಹೋದ ಕನ್ನಡಿ ಮರು ಜೋಡಣೆ ಮಾಡಿದಂತೆ ಇದು ಕೂಡ ಎನ್ನಬಹುದು. ಮಾಜಿ ಪ್ರಿಯಕರ/ಪ್ರೇಯಸಿಯ ಹಳೆ ಮೆಸೇಜ್ ನೋಡುವುದು, ಫೋಟೋ ವಿಡಿಯೊ ವೀಕ್ಷಣೆ ಎಲ್ಲವನ್ನು ಬಿಡಬೇಕು. ಮಾಜಿ ಪ್ರೇಮಿಯ ಜೊತೆ ಸಾಮಾಜಿಕ ಜಾಲತಾಣದ ಸಂಪರ್ಕ ಕೂಡ ನಿರ್ಬಂಧಿಸಬೇಕು. ಇದು ಕಷ್ಟದ ಕೆಲಸವೇ ಆದರೂ ಹಳೆ ಪ್ರೀತಿ ಮರೆಯಲು ಈ ಕ್ರಮ ಅನುಕರಣೆ ಬಹಳ ಮುಖ್ಯವಾಗಿದೆ.

ಇತರ ಸಂಬಂಧಗಳಿಗೆ ಬೆಲೆ ನೀಡಿ:

ಪ್ರೀತಿ ಒಂದೇ ಆದರು ಅದರ ಮಜಲು ಬೇರೆ ಬೇರೆ ತರನಾಗಿರುವುದು. ಪ್ರೀತಿ ನಿರಾಶೆಯಾಗಿದೆ ಎಂಬ ಮಾತ್ರಕ್ಕೆ ಯಾರು ನಂಬಿಕೆಗೆ ಅರ್ಹರಲ್ಲ ಎಂಬ ಭಾವನೆ ಬೇಡ. ನಿಮ್ಮ ಕುಟುಂಬದವರು, ಸ್ನೇಹಿತರ ಸಂಬಂಧ ಗಳಿಗೆ ಬೆಲೆ ನೀಡಿ ಹೆಚ್ಚು ಕಾಲ ಅವರೊಂದಿಗೆ ಇರಿ. ಪಿಕ್ ನಿಕ್, ಟ್ರಿಪ್ ಎಂದು ಇತರರ ಜೊತೆಗೆ ಬೆರೆತಾಗ ನಿಮ್ಮ ಮನಸ್ಸಿನ ನೋವು ಕಡಿಮೆಯಾಗುವುದು.

ಹೊಸ ಗುರಿಗಳತ್ತ ಗಮನಹರಿಸಿ:

ಪ್ರೀತಿ ಉಳಿಯಲಿಲ್ಲ ಎಂದು ನಾವು ಚಿಂತಿಸುತ್ತಾ ನಮ್ಮನ್ನು ನಾವು ಶಿಕ್ಷಿಸಿಕೊಳ್ಳುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ. ಅದರ ಬದಲಿಗೆ ಅದರಿಂದ ಹೊರಬಂದು ಹೊಸ ಗುರಿಗಳತ್ತ ಗಮನಹರಿಸಬೇಕು. ಫಿಟ್‌ನೆಟ್‌, ವರ್ಕೌಟ್ ಮಾಡುವುದು, ಓದುವುದು, ಉತ್ತಮ ಹವ್ಯಾಸ ಕಲಿಯುವುದು ಹೀಗೆ ನಿಮ್ಮ ಜೀವನ ಏನಾಗಿದೆ ಎಂದು ಮರುಕ ಪಡುವುದು ಬಿಟ್ಟು ಏನಾಗಬೇಕು ಎಂಬ ಗುರಿಗಳತ್ತ ಚಿಂತಿಸಿ ಮುನ್ನಡೆಯಬೇಕು.

ಮನಸ್ಸಿನ ಭಾವನೆ ಹೊರ ಹಾಕಿ:

ಪ್ರೀತಿ ಭಾವನೆ ಮರೆಯುವುದು ಬಹಳ ಕಷ್ಟದ ಕೆಲಸ. ಬ್ರೇಕಪ್ ಆದ ಬಳಿಕ ಮನಸ್ಸಿನ ತೊಳಲಾಟ ಮನಸ್ಸಿನೊಳಗೆ ಅದುಮಿಟ್ಟಿರೆ ಅದು ಮಾನಸಿಕ ಸಮಸ್ಯೆಯಾಗಿ ಕಾಡುವ ಸಾಧ್ಯತೆ ಸಹ ಇದೆ. ಹಾಗಾಗಿ ಮನಸ್ಸಿನ ಎಲ್ಲ ಭಾವನೆಯನ್ನು ನಿಮ್ಮ ಪ್ರೀತಿ ಪಾತ್ರರ ಜೊತೆ, ಸ್ನೇಹಿತರ ಜೊತೆ ಶೇರ್ ಮಾಡಿಕೊಳ್ಳಿ. ನಂಬಿಕೆಗೆ ಅರ್ಹವಾಗಿದ್ದವರ ಜೊತೆ ಮಾತ್ರ ವೇ ನಿಮ್ಮ ವಿಷಯ ವಿನಿಯೋಗಿಸಿದರೆ ಅದಕ್ಕೆ ಪರಿಹಾರ ಕ್ರಮ ಕೂಡ ಅವರಿಂದ ನಿಮಗೆ ಸಿಗುವ ಸಾಧ್ಯತೆ ಇದೆ. ಹೀಗೆ ಮಾಜಿ ಪ್ರೀತಿಯ ನೆನಪು ದೂರಮಾಡಲು ಸಾಧ್ಯವಾಗಲಿದೆ.

ಖುಷಿಯಾಗಿರಿ:

ನೀವು ಖುಷಿಯಾಗಿರಲು ಏನು ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕು. ಪ್ರವಾಸಕ್ಕೆ ಹೋಗುವುದು, ಪ್ರಕೃತಿ ವೀಕ್ಷಣೆ, ಟ್ರಕ್ಕಿಂಗ್ ಮಾಡುವುದು, ಅಡ್ವೆಂಚರ್‌ ಸ್ಪೋರ್ಟ್ಸ್ ಈ ತರಹದರಲ್ಲಿ ನಿಮ್ಮನ್ನು ನೀವು ಅಳವಡಿಸಿದಾಗ ಹೊಸ ಜೀವನೋತ್ಸಾಹ ಯಾವಾಗಲು ಜೊತೆಗೆ ಇರಲಿದೆ.

ಇದನ್ನು ಓದಿ: Health Tips: ರಕ್ತದಾನ ಮಹಾದಾನ: ಲಾಭಗಳೇನು? ತಪ್ಪುಕಲ್ಪನೆಗಳೇನು?

ಹೆಚ್ಚು ಆತ್ಮವಿಶ್ವಾಸದಿಂದ ಇರಿ:

ಆತ್ಮವಿಶ್ವಾಸ ಒಂದಿದ್ದರೆ ಯಾರೇ ಆದರೂ ಜಗತ್ತನ್ನೇ ಗೆಲ್ಲುವಷ್ಟು ದೃಢ ವಾಗಿರುತ್ತಾರೆ. ಆದರೆ ಪ್ರೀತಿಯಿಂದ ಸೋತವರಿಗೆ ಅಂಜಿಕೆ, ಭಯ ಇರುವ ಕಾರಣ ತಮ್ಮ ಮೇಲೆ ತಮಗೆ ದೊಡ್ಡ ಅಸಮಧಾನ ಇರಲಿದೆ ಹಾಗಾಗಿ ಈ ಎಲ್ಲ ಭಾವನೆಯಿಂದ ಹೊರಬಂದು ಆತ್ಮವಿಶ್ವಾಸ ಉಳಿ ಸುವ ನೆಲೆಯಲ್ಲಿ ನಿಮ್ಮ ಬದುಕು ಸಾಗಬೇಕು. ಇತರರನ್ನು ವಿನಃ ಕಾರಣ ನಿಂಧನೆ ಮಾಡದೆ ನಮ್ಮ ಒಳಿತು ಕೆಡುಕು ಅರ್ಥೈಸಿ ನಡೆಯಬೇಕು. ಒಟ್ಟಾರೆಯಾಗಿ ಮಾಜಿ ಪ್ರೀತಿ ಮರೆಯುವುದು ಕಷ್ಟವಾಗಿದ್ದರೂ ನೋವು ಕೊಡುವ ಸಂಗತಿಯಿಂದ ದೂರ ಉಳಿದಷ್ಟು ಒಳ್ಳೆಯದ್ದೇ ಎಂಬ ಬದುಕಿನ ಪಾಠ ಅನುಸರಿಸಿದರೆ ಲೈಫ್ ಇಸ್ ಕಲರ್ ಫುಲ್ ಅನ್ನುದರಲ್ಲಿ ಅನುಮಾನವಿಲ್ಲ.