Health Tips: ಯಾಕೋ ಮೂಡ್ ಸರಿ ಇಲ್ಲ ಅನಿಸ್ತಿದ್ಯಾ? ಈ ಆಹಾರ ಸೇವಿಸಿ... ಇವು ಮಾನಸಿಕ ಆರೋಗ್ಯ ವೃದ್ಧಿಸುತ್ತೆ!
ಮಾನಸಿಕ ಆರೋಗ್ಯಕ್ಕೆ ನಾವು ಸೇವಿಸುವಂತಹ ಆಹಾರ ಕೂಡ ಬಹಳಷ್ಟು ಪರಿಣಾಮ ಬೀಳಲಿದೆ. ಆರೋಗ್ಯಕರ ಆಹಾರಗಳು ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜ್ಞಾಪಕಶಕ್ತಿಯನ್ನು ಹೆಚ್ಚಿಸಿ ಒತ್ತಡದಿಂದ ದೂರವಿರಿಸುತ್ತದೆ.. ಹಾಗಾದರೆ ಮಾನಸಿಕ ಆರೋಗ್ಯ ಸುಧಾರಿಸಲು ಯಾವ ಆಹಾರ ಸೇವಿಸಬೇಕು, ಸ್ಥಿರ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳಲು ತಾವು ಸೇವಿಸುವಂತಹ ಆಹಾರ ಪದ್ದತಿ ಹೇಗಿರಬೇಕು ನೋಡಿ.


ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಎನ್ನುವುದು ಎಲ್ಲ ವಯೋಮಾನದವರಲ್ಲೂ ಹೆಚ್ಚುತ್ತಿದೆ. ಇದಕ್ಕೆ ಕಾರಣ ಒತ್ತಡದ ಕೆಲಸ ಆಧುನಿಕ ಜೀವನ ಶೈಲಿ ಹೊರಗಿನ ಆಹಾರ ಪದ್ದತಿ, ಇವೆಲ್ಲದರ ನಡುವೆ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಸವಾಲು ಆಗಿ ಬಿಟ್ಟಿದೆ. ನಮ್ಮ ಮಾನಸಿಕ ಆರೋಗ್ಯಕ್ಕೆ ನಾವು ಸೇವಿಸುವಂತಹ ಆಹಾರ ಕೂಡ ಬಹಳಷ್ಟು ಪರಿಣಾಮ ಬೀಳಲಿದೆ. ಆರೋಗ್ಯಕರ ಆಹಾರಗಳು(Health Tips) ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜ್ಞಾಪಕಶಕ್ತಿಯನ್ನು ಹೆಚ್ಚಿಸಿ ಒತ್ತಡದಿಂದ ದೂರವಿರಿಸುತ್ತದೆ. ಹಾಗಾದರೆ ಮಾನಸಿಕ ಆರೋಗ್ಯ ಸುಧಾರಿಸಲು ಯಾವ ಆಹಾರ ಸೇವಿಸಬೇಕು, ಸ್ಥಿರ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳಲು ತಾವು ಸೇವಿಸುವಂತಹ ಆಹಾರ ಪದ್ದತಿ ಹೇಗಿರಬೇಕು ನೋಡಿ.
ಮಾನಸಿಕ ಆಹಾರ ವೃದ್ದಿಗೆ ಈ ಆಹಾರ ಸೇವಿಸಿ
ಅರಿಶಿಣ: ಅರಿಶಿಣವು ಎಲ್ಲ ಆಹಾರದ ತಯಾರಿಕೆಯಲ್ಲಿ ಬಳಕೆ ಮಾಡುತ್ತೇವೆ. ಇದರಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಶಕ್ತಿ ಇರಲಿದ್ದು, ಇದು ಸಿರೊಟೋನಿನ್ ಬಿಡುಗಡೆಯನ್ನು ಉತ್ತೇಜಿಸುವ ಮೂಲಕ ಮಾನಸಿಕ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡ ಲಿದೆ.ಹಾಗಾಗಿ ಮಾನಸಿಕ ಅಭಿ ವೃದ್ಧಿಗಾಗಿ ದಿನಕ್ಕೆ ಸುಮಾರು 1 ಟೀಚಮಚದಷ್ಟು ಬಿಸಿ ನೀರಿಗೆ ಸೇರಿಸಿ ಕುಡಿಯಬಹುದು
ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್ ತಿನ್ನಲು ಇಷ್ಟಪಡುತ್ತಿದ್ದರೆ ಇದರಿಂದ ಅದ್ಭುತ ಪ್ರಯೋಜನಗಳಿವೆ. ಇದು ಮನ ಸ್ಥಿತಿಯನ್ನು ಸುಧಾರಿಸಲು, ಮೆದುಳಿನ ಆರೋಗ್ಯವನ್ನು ವೃದ್ಧಿಸಲು, ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಡಾರ್ಕ್ ಚಾಕೊಲೇಟ್ ತಿನ್ನಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.
ಮೊಸರು: ಮೊಸರು ಕೂಡ ಮಾನಸಿಕ ಆರೋಗ್ಯ ವೃದ್ದಿಗೆ ಒಳಿತು.ಹಾಗಾಗಿ ನಿಮ್ಮ ಊಟದ ಜೊತೆಗೆ ಮೊಸರು ಸೇರಿಸಬಹುದು. ಮೊಸರಿನಲ್ಲಿ ಪ್ರೋಬ ಯಾಟಿಕ್ ಅಂಶ ಇರಲಿದ್ದು ಇದು ಆರೋಗ್ಯಕರ ಕರುಳು ಮತ್ತು ಖಿನ್ನತೆ ಯ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ ಯಾಗಲಿದೆ. ಹಾಗಾಗಿ ದಿನ ಊಟದ ಜೊತೆಗೆ ಬೇಕಾದಷ್ಟು ಪ್ರಮಾಣದ ಮೊಸರು ಸೇವನೆ ಮಾಡಬಹುದು.
ಬೆರ್ರಿ ಹಣ್ಣುಗಳು: ಬೆರ್ರಿ ಹಣ್ಣುಗಳು, ಸ್ಟ್ರಾಬೆರಿ ಮತ್ತು ಬ್ಲ್ಯಾಕ್‌ಬೆರ್ರಿಗಳು ಉತ್ಕರ್ಷಣ ನಿರೋಧಕಗಳಿಂದ ಅಧಿಕವಾಗಿರುತ್ತದೆ. ಇದು ಮೆದುಳಿನಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸುವ ಗುಣ ಹೊಂದಿದ್ದು ಈ ಆಹಾರಗಳು ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ.
ಹಸಿರು ಸೊಪ್ಪುಗಳು: ಮೊರಿಂಗಾ, ಕರಿಬೇವಿನ ಎಲೆ,ಪಾಲಕ್ ಮುಂತಾದ ಹಸಿರು ಸೊಪ್ಪುಗಳಲ್ಲಿ ಕಬ್ಬಿನಾಂಶ ಹೆಚ್ಚಾಗಿ ಇರಲಿದ್ದು ಇದರಲ್ಲಿ ಫೋಲೇಟ್ ಮತ್ತು ಪೋಷ ಕಾಂಶ ಅಧಿಕವಾಗಿ ಇರಲಿದೆ.ಸೊಪ್ಪುಗಳ ಸೇವನೆಯಿಂದ ಮನಸ್ಥಿತಿಯ ಅಸ್ವಸ್ಥತೆಗಳು ದೂರವಾಗಲಿವೆ. ಮಾನಸಿಕ ಯೋಗ ಕ್ಷೇಮವನ್ನು ಹೆಚ್ಚಿಸಲು ಹಸಿರು ಸೊಪ್ಪುಗಳ ಸೇವನೆ ಉತ್ತಮ.
ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಮಟ್ಟದ ಮೆಗ್ನೀಸಿಯಮ್, ಸತು ಮತ್ತು ಟ್ರಿಪ್ಟೊಫಾನ್ ಇರುತ್ತದೆ, ಇವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಪ್ರಮಾಣವು ಮೆದುಳಿನ ಕಾರ್ಯ ಕ್ಷಮತೆಗೆ ಹೆಚ್ಚು ಪರಿಣಾಮ ಕಾರಿಯಾಗಲಿದೆ
ಬಾಳೆಹಣ್ಣುಗಳು: ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6 ಹೆಚ್ಚಾಗಿ ಇರಲಿದ್ದು ಇದು ಸಿರೊ ಟೋನಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿ ನೈಸ ರ್ಗಿಕ ಸಕ್ಕರೆ ಮಟ್ಟ ಫೈಬರ್ ಹೆಚ್ಚಿರಲಿದ್ದು ಆರೋಗ್ಯಕ್ಕೂ ಉತ್ತಮ
ಇದನ್ನು ಓದಿ:Health Tips: ರಕ್ತದಾನ ಮಹಾದಾನ: ಲಾಭಗಳೇನು? ತಪ್ಪುಕಲ್ಪನೆಗಳೇನು?
ಅಗಸೆ ಬೀಜಗಳು: ಒಮೆಗಾ-3 ಕೊಬ್ಬಿನಾಮ್ಲಗಳು ಮೆದುಳಿನ ಕಾರ್ಯಚಟುವಟಿಕೆಗೆ ಅಗಸೆ ಬೀಜಗಳು ಮೂಲಗಳಾಗಿವೆ. ಇದು ಖಿನ್ನತೆ ಮತ್ತು ಆತಂಕದ ಲಕ್ಷಣ ಗಳನ್ನು ನಿವಾರಿಸಲು ಮೆಮೊರಿ, ಏಕಾಗ್ರತೆ ಮತ್ತು ಸಾಮಾನ್ಯ ಅರಿವಿನ ಕಾರ್ಯವನ್ನು ವರ್ಧಿಸುತ್ತದೆ.
ಅಲ್ಲದೆ ನಿಮ್ಮ ಮಾನಸಿಕ ಅಭಿವೃದ್ಧಿ ಗಾಗಿ ಮೆದುಳು ಕ್ರಿಯಾಶೀಲತೆ ಯಾಗಿರಲು ಪ್ರತಿದಿನ ಡ್ರೈಫ್ರೂಟ್ಸ್ಗಳನ್ನು ವಾಲ್ನಟ್ಸ್, ಬಾದಾಮಿ, ಕಡಲೆಕಾಯಿ, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಚಿಯಾ ಬೀಜಗಳಂತಹ ಬೀಜಗಳನ್ನು ಸೇವಿಸುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ.