Viral Video: ಜಪಾನಿನಲ್ಲಿ ಮಕ್ಕಳು ಆರೋಗ್ಯವಾಗಿರಲು ಈ ಊಟವೇ ಕಾರಣವಂತೆ! ವಿಡಿಯೊ ವೈರಲ್
ಜಪಾನಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತಯಾರಿಸಿದ ಚಿಕನ್ ರೆಸಿಪಿಯೊಂದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜಪಾನಿನ ಮಕ್ಕಳು ಆರೋಗ್ಯವಾಗಿರಲು ಈ ರೆಸಿಪಿಯೇ ಮುಖ್ಯ ಕಾರಣವಂತೆ. ಹಾಗಾಗಿ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಇದರ ಝಲಕ್ ಇಲ್ಲಿದೆ.

japan food

ಟೋಕಿಯೊ: 2ನೇ ವಿಶ್ವ ಮಹಾಯುದ್ಧದ ವೇಳೆ ಜಪಾನಿನ ಎರಡು ನಗರಗಳಾದ ಹಿರೋಷಿಮಾ ಹಾಗೂ ನಾಗಸಾಕಿಗಳ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯಿಂದಾಗಿ ಅಲ್ಲಿ ಹುಟ್ಟುವ ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗೆ ಎಡೆಮಾಡಿಕೊಟ್ಟಿತು. ಆದರೆ ಇಂದು ಆ ದೇಶದಲ್ಲಿ ಮಕ್ಕಳು ಬಹಳ ಆರೋಗ್ಯವಾಗಿದ್ದಾರೆ. ಇದಕ್ಕೆ ಕಾರಣವೇನು ಎಂಬುದನ್ನು ವೈರಲ್ ವಿಡಿಯೊವೊಂದರಲ್ಲಿ ತಿಳಿಸಲಾಗಿದೆ. ಫುಡ್ ವ್ಲಾಗರ್ ಜುಕಾನನ್ 727 ಪೋಸ್ಟ್ ಮಾಡಿದ ವಿಡಿಯೊದಲ್ಲಿ ಜಪಾನಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತಯಾರಿಸಲಾಗುತ್ತಿರುವ ತರಕಾರಿ ತುಂಬಿದ ಚಿಕನ್ ರೆಸಿಪಿಯ ವಿಧಾನವನ್ನು ವಿವರಿಸಿದ್ದಾರೆ. ಇದು ಅಲ್ಲಿನ ಮಕ್ಕಳು ಆರೋಗ್ಯವಾಗಿರಲು ಕಾರಣ ಎನ್ನಲಾಗಿದೆ (Viral Video). ಹಾಗಾಗಿ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೊದಲ್ಲಿ ಜಪಾನಿನ ಶಾಲೆಯಲ್ಲಿ ಮಕ್ಕಳಿಗೆ ಊಟವನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ದೊಡ್ಡ ಅಡುಗೆ ಪಾತ್ರೆಯಲ್ಲಿ ತಾಜಾ ತರಕಾರಿಗಳಾದ ಎಲೆಕೋಸು, ಕ್ಯಾರೆಟ್, ಸೊಪ್ಪುಗಳನ್ನು ಬೇಯಿಸಿ ಅದನ್ನು ಚಿಕನ್ ಸೂಪ್‍ನಲ್ಲಿ ಮಿಕ್ಸ್ ಮಾಡಲಾಗಿದೆ. ಇದು ತರಕಾರಿ ಚಿಕನ್ ಮೀಟ್ಬಾಲ್ ಸೂಪ್ ಎಂದು ಫುಡ್ ವ್ಲಾಗರ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ವಿಡಿಯೊದಲ್ಲಿ ಹಂತ ಹಂತವಾಗಿ ಅಡುಗೆ ಮಾಡುವ ವಿಧಾನವನ್ನು ತೋರಿಸಲಾಗಿದೆ. ಖಾದ್ಯವನ್ನು ತಯಾರಿಸುವಾಗ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅಡುಗೆ ಮಾಡುವವರು ಹ್ಯಾಂಡ್‍ಗ್ಲೌಸ್‍ಗಳನ್ನು ಧರಿಸಿದ್ದಾರೆ. ತರಕಾರಿ, ಮೊಟ್ಟೆ, ಚಿಕನ್ ತಯಾರಿಸಿ ಸಮತೋಲಿತವಾದ ಆಹಾರವನ್ನು ಮಕ್ಕಳಿಗಾಗಿ ತಯಾರಿಸಲಾಗಿದೆ.
ಅನೇಕರು ಈ ಊಟವನ್ನು ಐಷಾರಾಮಿ ಹೋಟೆಲ್‍ನಲ್ಲಿ ತಯಾರಿಸುವ ಆರೋಗ್ಯಕರ ಮೆನುಗೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. "ಇದು ಭಾರತದಲ್ಲಿ 7-ಸ್ಟಾರ್ ಹೋಟೆಲ್ ಉಪಾಹಾರ" ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಜಪಾನ್‍ನ ಬದ್ಧತೆಯನ್ನು ಇನ್‌ಸ್ಟಾಗ್ರಾಂ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಜಪಾನ್‍ನಲ್ಲಿ ಮಕ್ಕಳು ಹೆಚ್ಚಾಗಿ ಆರೋಗ್ಯಕರವಾಗಿರಲು ಇಂತಹ ಊಟ ಪ್ರಮುಖ ಕಾರಣವಾಗಿದೆ ಎಂದು ಅನೇಕರು ಹೇಳಿದ್ದಾರೆ.
Viral Video: ಜಪಾನ್‌ನಲ್ಲೂ 'ಮೈಸೂರು ಕೆಫೆ': ಕನ್ನಡತಿಯ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಜನ ಉದ್ಯೋಗ ಹಾಗೂ ಇತರೆ ಕಾರಣಕ್ಕೆ ಬೇರೆ ದೇಶ, ರಾಜ್ಯದಲ್ಲಿ ನೆಲೆಸಿರುತ್ತಾರೆ. ಆದರೆ ಎಲ್ಲೆ ಹೋದರು, ನಮ್ಮೂರು, ನಮ್ಮೂರಿನ ತಿಂಡಿ, ನಮ್ಮೂರಿನ ಜನರು ಎಂಬ ಭಾವವೊಂದು ಸದಾ ಮನಸ್ಸಿನ ಮೂಲೆಯಲ್ಲಿರುತ್ತದೆ. ಯಾರಾದರು ಊರಿನವರು ಸಿಕ್ಕರೆ ಆಗುವ ಖುಷಿ ಅಷ್ಟಿಷ್ಟಲ್ಲ! ಇದೀಗ ಜಪಾನ್‍ನ ಟೋಕಿಯೊದಲ್ಲಿರುವ ಮೈಸೂರು ಮೂಲದ ಕೆಫೆಯೊಂದು ಗಮನ ಸೆಳೆದಿದ್ದು, ಕನ್ನಡತಿ ಶ್ವೇತಾ ಆರಾಧ್ಯ ಅವರು ಈ ಕೆಫೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ.
"ಮೈಸೂರು ಕೆಫೆ" ಎಂದು ಹೆಸರಿನ ಈ ಕೆಫೆಯಲ್ಲಿ ಲೆಮನ್ ರೈಸ್, ಚಿಕ್ಕಮಗಳೂರು ಫಿಲ್ಟರ್ ಕಾಫಿ ಹೀಗೆ ಸಾಂಪ್ರದಾಯಿಕ ಭಕ್ಷ್ಯಗಳು ಹಾಗೂ ಮೈಸೂರು ಶೈಲಿಯ ಅಡುಗೆಗಳು ಇವೆಯಂತೆ. ಈ ವಿಶಿಷ್ಟ ರುಚಿಗಳ ಖಾದ್ಯವು ಜಪಾನಿಗರ ಮೆಚ್ಚುಗೆ ಕೂಡ ಗಳಿಸಿದೆಯಂತೆ!
ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಶಿಲ್ಪಾ ಆರಾಧ್ಯ ಕೆಫೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಜಪಾನಿನ ರಾಜಧಾನಿಯಲ್ಲಿ ಕರ್ನಾಟಕದ ಕೆಫೆಯನ್ನು ಕಂಡು ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತಂತೆ. ಹಾಗೇ ಇಲ್ಲಿ ಸಿಗುವ ಲೆಮನ್ ರೈಸ್, ಸಲಾಡ್ ಹಾಗೂ ಕಾಫಿಯ ರುಚಿಯೂ ಅದ್ಭುತವಾಗಿದೆ ಎಂದು ಆಕೆ ಹೊಗಳಿದ್ದಾರೆ. ಕರ್ನಾಟಕದ ಶ್ರೀಮಂತ ಪಾಕಶಾಲೆಯ ಪರಂಪರೆಯು ವಿಶ್ವಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ ಎಂದು ಅವರು ಸಿಕ್ಕಾಪಟ್ಟೆ ಖುಷಿ ವ್ಯಕ್ತಪಡಿಸಿದ್ದಾರೆ.