ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Automobile: ಸರಿಸಾಟಿಯಿಲ್ಲದ ಲಕ್ಸುರಿ: ಭಾರತಕ್ಕೆ ಆಗಮಿಸಿದ ರೋಲ್ಸ್ ರಾಯ್ಸ್ ಘೋಸ್ಟ್ ಸೀರೀಸ್

ಭಾರತದಲ್ಲಿ ದಿ ಘೋಸ್ಟ್ ಸೀರೀಸ್ II ಅನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್ : ಇದು ಇದುವರೆಗಿನ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಮತ್ತು ಚಾಲಕ-ಕೇಂದ್ರಿತ V12 ರೋಲ್ಸ್ ರಾಯ್ಸ್ ಆಗಿದ್ದು, ಘೋಸ್ಟ್ ಸೀರೀಸ್ II ಅನ್ನು ಈಗ ರೋಲ್ಸ್ ರಾಯ್ಸ್‌ನ ಚೆನ್ನೈ ಮತ್ತು ನವ ದೆಹಲಿ ಶೋ ರೂಂಗಳಲ್ಲಿ ಆರ್ಡರ್ ಮಾಡಲು ಲಭ್ಯವಿದೆ.

ಭಾರತಕ್ಕೆ ಆಗಮಿಸಿದ ರೋಲ್ಸ್ ರಾಯ್ಸ್ ಘೋಸ್ಟ್ ಸೀರೀಸ್

Profile Ashok Nayak Feb 20, 2025 9:21 PM

* ಇದರ ನವೀನ ಬಾಹ್ಯ ಸ್ಟೈಲಿಂಗ್, ಘೋಸ್ಟ್‌ನ ಬೇಸಿಕ್ ವಿನ್ಯಾಸದ ಪ್ರಭಾವಶಾಲಿ ವಿಕಸನವೇ ಆಗಿದೆ.

* ಸಾಟಿಯಿಲ್ಲದ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಸೇರಿದಂತೆ, ಅದ್ಭುತ ಚಾಲನೆಯನ್ನೇ ಹೃದಯಭಾಗದಲ್ಲಿ ಹೊಂದಿರುವಂತೆ ನಿರ್ಮಿಸಲಾಗಿದೆ.

* ಪ್ಲಾನರ್ ಸಸ್ಪೆನ್ಷನ್ ಸಿಸ್ಟಮ್, ಫ್ಲ್ಯಾಗ್‌ಬೇರರ್ ಮತ್ತು ಸ್ಯಾಟಲೈಟ್ ಏಡೆಡ್ ಟ್ರಾನ್ಸ್‌ ಮಿಷನ್ ಸಿಸ್ಟಮ್‌ಗಳನ್ನು ಹೊಂದಿರುವುದರ ಜೊತೆಗೆ ಚಾಲಕರಿಗೆ ಅನುಕೂಲಕರವಾದ ಚಾಸಿಸ್‌ ಹೊಂದಿದೆ.

* ಹೊಸ SPIRIT ಡಿಜಿಟಲ್ ಇಂಟರ್ಫೇಸ್ ಮತ್ತು ವಿಸ್ಪರ್ಸ್ ಪ್ರೈವೇಟ್ ಮೆಂಬರ್ಸ್ ಅಪ್ಲಿಕೇಶನ್ ಜೊತೆ ಸಂಯೋಜನೆ ಹೊಂದಿದೆ.

* ವರ್ಧಿತ ಆಡಿಯೊ ಸಿಸ್ಟಮ್, ಇಂಟರ್ನೆಟ್ ಸಂಪರ್ಕ ಮತ್ತು ವೀಡಿಯೊ ಸ್ಟ್ರೀಮಿಂಗ್ ಕಾರ್ಯಗಳನ್ನು ಸಂಯೋಜಿಸುತ್ತದೆ.

* ಘೋಸ್ಟ್‌ನ ವಿಸ್ತೃತ ಸೀರಿಸ್ II, ಸೃಜನಶೀಲತೆಗೆ ಇನ್ನೂ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.

* ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್ ಸೀರಿಸ್ II ಮತ್ತು ಘೋಸ್ಟ್ ಸೀರಿಸ್ II ಆವೃತ್ತಿಗಳು ಬಿಡುಗಡೆ ಯಾದ ದಿನದಿಂದಲೇ, ಕಮಿಷನ್ ಮಾಡಲು ಲಭ್ಯವಿವೆ.

ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್‌ನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯವಾದ ಘೋಸ್ಟ್ ಸೀರಿಸ್ II ನ, ಇತ್ತೀಚಿನ ವಿಕಸಿತ ಆವೃತ್ತಿಯು ಈಗ ಭಾರತದಲ್ಲಿ ಲಭ್ಯವಿದೆ. ಪ್ರಬಲ, ಚಾಲಕ-ಆಧಾರಿತ ಮತ್ತು ಸೊಗಸಾದ ವಿನ್ಯಾಸ ಹೊಂದಿದ, ಘೋಸ್ಟ್‌ನ ಅಖಂಡ ಮತ್ತು ಸೂಕ್ಷ್ಮ ಬಾಹ್ಯ ನೋಟದ ವಿಕಸನವು, ನಿರ್ದಿಷ್ಟ ಗ್ರಾಹಕರ ಮನಸೆಳೆಯಲು ಪ್ರಬಲ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ತಮ್ಮ ಆಯ್ಕೆಗಳನ್ನು ವಿಸ್ತರಿಸಲು, ಗ್ರಾಹಕರು ಈಗ ಘೋಸ್ಟ್‌ನಲ್ಲಿ ಹಿಂದೆಂದೂ ಲಭ್ಯವಿಲ್ಲದ ಒಳಾಂಗಣ ವಿನ್ಯಾಸಗಳನ್ನು ಮತ್ತು ವೈಶಿಷ್ಟ್ಯಗಳನ್ನು ತಮಿಷ್ಟದಂತಯೇ ಡಿಸೈನ್ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ, ಜೊತೆಗೆ ಗ್ರಾಹಕರು ಡಿಜಿಟಲ್ ಜಗತ್ತಿನಲ್ಲಿಯೂ ಕಸ್ಟಮೈಸ್ ಮಾಡಿ ಕೊಳ್ಳಲು ಸುಧಾರಿತ ಸಾಫ್ಟ್‌ವೇರ್ ತಂತ್ರಜ್ಞಾನಗಳನ್ನು ಹೊಂದಿದೆ.

ಇದನ್ನೂ ಓದಿ: Indian Automobile: ಪ್ರಯಾಣಿಕ ವಾಹನಗಳ ಮಾರಾಟಕ್ಕೆ ‘ಶುಕ್ರದೆಸೆ’ ತಂದ ನವೆಂಬರ್!; ಯಾವ ಕಂಪನಿಗಳ ಎಷ್ಟು ವೆಹಿಕಲ್ಸ್ ಸೇಲ್?

“ನಮ್ಮ ಗ್ರಾಹಕರು ಘೋಸ್ಟ್‌ನ ನಿರ್ವಹಣಾ ಸಾಮರ್ಥ್ಯಗಳು ಮತ್ತು ಕಸ್ಟಮೈಸ್ ಆಗುವ ಅದರ ಸಾಮರ್ಥ್ಯವನ್ನು ನಿಜವಾಗಿಯೂ ಮೆಚ್ಚುತ್ತಾರೆ. ಘೋಸ್ಟ್ ಸೀರೀಸ್ II ಅದರ ತತ್ವ ಗಳಿಗೆ ಬದ್ಧವಾಗಿ ಉಳಿದಿದ್ದೂ, ಪ್ರತಿಯೊಂದು ಅಂಶದಲ್ಲಿಯೂ ತನ್ನ ಉಪಸ್ಥಿತಿಯನ್ನು ಉನ್ನತೀಕರಿಸುತ್ತದೆ. ಇದು ಇದುವರೆಗೆ ರಚಿಸಲಾದ ಅತ್ಯಂತ ತಾಂತ್ರಿಕವಾಗಿ ಮುಂದು ವರಿದ ಮತ್ತು ಚಾಲಕ-ಕೇಂದ್ರಿತ V12 ರೋಲ್ಸ್ ರಾಯ್ಸ್ ಆಗಿದೆ, ಮತ್ತು ಇದರ ಸದೃಢ ನೋಟವು ಘೋಸ್ಟ್‌ನ್ನು ಸೃಜನಾತ್ಮಕವಾಗಿ ರಚಿಸಲು ಪ್ರಬಲ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಾ, ಇದು ಪರಿಪೂರ್ಣ ಚಾಲಕ-ಕೇಂದ್ರಿತ ವಾಹನವನ್ನಾಗಿ ಮಾಡಲಿದೆ.

ಈ ಬ್ರ್ಯಾಂಡ್ ಭಾರತದಲ್ಲಿನ ಅತ್ಯಂತ ಅಪೇಕ್ಷಣೀಯ ಐಷಾರಾಮಿ ಬ್ರಾಂಡ್ ಆಗಿ ತನ್ನ ಸ್ಥಾನವನ್ನು ಪುನರುಚ್ಚರಿಸಿದ್ದು, 2024 ರಲ್ಲಿ ಮಾರುಕಟ್ಟೆಯು ಸುಮಾರು ಮೂರನೇ ಒಂದು ಭಾಗದಷ್ಟು ವಿಸ್ತರಣೆಯಾಗಿದೆ. ಈಗ ಘೋಸ್ಟ್ ಸೀರೀಸ್ II ಭಾರತದಲ್ಲಿ ಲಭ್ಯ ವಿರುವುದರಿಂದ, ಗ್ರಾಹಕರು ಹೆಚ್ಚು ಮಹತ್ವಾಕಾಂಕ್ಷೆಯ ಮತ್ತು ಮೌಲ್ಯಯುತವಾದ ಮೋಟಾರ್ ಕಾರುಗಳನ್ನು ಹೊಂದಲು ಉತ್ಸುಕರಾಗುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್‌ನ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕಿ ಐರಿನ್ ನಿಕ್ಕಿನ್ ಹೇಳಿದರು.

ಭಾರತದಲ್ಲಿ ಈಗ ಘೋಸ್ಟ್ ಸೀರೀಸ್ II ನ ಮೂರು ಆವೃತ್ತಿಗಳು ಲಭ್ಯವಿವೆ.

ಘೋಸ್ಟ್ ಸೀರೀಸ್ II, ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್ ಸೀರೀಸ್ II ಮತ್ತು ಘೋಸ್ಟ್ ವಿಸ್ತೃತ ಸೀರೀಸ್ II, ಈಗ ರೋಲ್ಸ್ ರಾಯ್ಸ್‌ನ ಚೆನ್ನೈ ಮತ್ತು ನವದೆಹಲಿ ಶೋ ರೂಂಗಳಲ್ಲಿ ಆರ್ಡರ್ ಮಾಡಲು ಲಭ್ಯವಿದೆ.

ರೋಲ್ಸ್ ರಾಯ್ಸ್ ಬೆಲೆ ಗ್ರಾಹಕರ ಅಗತ್ಯತೆಗಳ ಮೇಲೆ ಅವಲಂಬಿಸಿರುತ್ತದೆ. ಪ್ರಾರಂಭಿಕ ಬೆಲೆಗಳು ಕೆಳಗಿನಂತಿವೆ

ಘೋಸ್ಟ್ ಸೀರೀಸ್ II - ರೂ. 8,95,00,000

ಘೋಸ್ಟ್ ವಿಸ್ತೃತ ಸೀರೀಸ್ II - ರೂ. 10,19,00,000

ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್ ಸೀರೀಸ್ II - ರೂ. 10,52,00,000