Wankhede Stadium: ಚೆಂಡು ಬಳಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ವಾಂಖೇಡೆ ಸ್ಟೇಡಿಯಮ್
Wankhede Stadium Guinness World Record: 2011ರ ವಿಶ್ವಕಪ್ ಟೂರ್ನಿಯ ಭಾಗವಾಗಿ ವಾಂಖೇಡೆ ಸ್ಟೇಡಿಯಂನ ನವೀಕರಣ ಮಾಡಲಾಯಿತು. ಈ ವೇಳೆ 45 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದ ಮೈದಾನವನ್ನು 33 ಸಾವಿರಕ್ಕೆ ಇಳಿಸಲಾಯಿತು.

Wankhede Stadium

ಮುಂಬಯಿ: ಐಕಾನಿಕ್ ವಾಂಖೇಡೆ ಕ್ರೀಡಾಂಗಣದಲ್ಲಿ(Wankhede Stadium) ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಕ್ರಿಕೆಟ್ ಚೆಂಡನ್ನು ಬಳಸಿ ದೀರ್ಘವಾದ ವಾಕ್ಯವೊಂದನ್ನು ರಚಿಸುವ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ ಸಾಧನೆ ಮಾಡಿದೆ. 14,505 ಕೆಂಪು ಮತ್ತು ಬಿಳಿ ಬಣದ ಚೆಂಡನ್ನು ಬಳಸಿ 'ಫಿಫ್ಟಿ ಇಯರ್ಸ್ ಆಫ್ ವಾಂಖೆಡೆ ಸ್ಟೇಡಿಯಮ್' ಎಂದು ಬರೆಯಲಾಗಿದೆ. ಈ ಸ್ಟೇಡಿಯಂಗೆ 50 ವರ್ಷ ತುಂಬಿದ ಸಂಭ್ರಮಾಚರಣೆಯ ಭಾಗವಾಗಿ ಏರ್ಪಡಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಈ ಸಾಧನೆ ಮಾಡಲಾಯಿತು.
'ಇದುವರೆಗೂ ಯಾರೂ ಮಾಡದಂತಹ ವಿಶೇಷ ಸಾಧನೆ ಮಾಡಿರುವ ಹೆಮ್ಮೆ ನಮಗಿದೆ. ಈ ದಾಖಲೆ ಮಾಡಲು ಬಳಸಲಾದ ಚೆಂಡುಗಳನ್ನು ಸ್ಥಳೀಯ ಶಾಲೆ, ಕ್ಲಬ್, ಎನ್‌ಜಿಒಗಳ ಉದಯೋನ್ಮುಖ ಕ್ರಿಕೆಟಿಗಿಗೆ ನೀಡುವ ಮೂಲಕ ಅವರು ಕ್ರಿಕೆಟ್ ರಂಗದಲ್ಲಿ ಉತ್ತಮ ಸಾಧನೆ ಮಾಡುಲು ಪ್ರೋತ್ಸಾಹಿಸಲಿದೆ ಎಂದು' ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.
14,505 cricket balls,
— Mumbai Cricket Association (MCA) (@MumbaiCricAssoc) January 23, 2025
50 years of Wankhede,
1 Guinness World Record! ❤️#Wankhede50 #MCA #Mumbai #Cricket pic.twitter.com/0Eab7otbRs
2011ರ ವಿಶ್ವಕಪ್ ಟೂರ್ನಿಯ ಭಾಗವಾಗಿ ವಾಂಖೇಡೆ ಸ್ಟೇಡಿಯಂನ ನವೀಕರಣ ಮಾಡಲಾಯಿತು. ಈ ವೇಳೆ 45 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದ ಮೈದಾನವನ್ನು 33 ಸಾವಿರಕ್ಕೆ ಇಳಿಸಲಾಯಿತು. ವಾಂಖೆಡೆ ಕ್ರೀಡಾಂಗಣದ ಇನ್ನೊಂದು ವಿಶೇಷತೆ ಎಂದರೆ, ಭಾರತ ತಂಡ ಯಾವುದೇ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದಾಗಲೂ ಈ ಸ್ಟೇಡಿಯಂಗೆ ಬಂದು ಛಾಯಾಚಿತ್ರವೊಂದನ್ನು ತೆಗೆಯುವುದು ವಾಡಿಕೆ.1983ರಲ್ಲಿ ಕಪಿಲ್ ಡೆವಿಲ್ ಸಾರಥ್ಯದ ಭಾರತವು ಚೊಚ್ಚಲ ವಿಶ್ವಕಪ್ ಗೆದ್ದಾಗಿನಿಂದ 2024 ರ ಟಿ20 ವಿಶ್ವಕಪ್ ಗೆಲುವಿನ ವರೆಗೂ ಈ ಸಂಪ್ರದಾಯ ಕಂಡುಬಂದಿದೆ.
ಈ ಐತಿಹಾಸಿಕ ಕ್ರೀಡಾಂಗಣ ಭಾರತೀಯ ಕ್ರಿಕೆಟಿಗೆ ಅದೆಷ್ಟೋ ಕೊಡುಗೆಗಳನ್ನು ನೀಡಿದೆ. 2011ರ ಏಕದಿನ ವಿಶ್ವಕಪ್, ಧೋನಿಯ ಗೆಲುವಿನ ಸಿಕ್ಸರ್, ಸಚಿನ್ ತೆಂಡೂಲ್ಕರ್ ಟೆಸ್ಟ್ ವಿದಾಯ ಇವುಗಳಲ್ಲಿ ಪ್ರಮುಖವಾದದ್ದು