ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daali Weds Dhanyatha: ಡಾಲಿ-ಧನ್ಯತಾಗೆ ಶಿವಣ್ಣ ವಿಶ್‌; ತಬ್ಬಿಕೊಂಡು ಭಾವುಕರಾದ ಧನಂಜಯ್‌

ನಟ ಶಿವರಾಜ್‌ಕುಮಾರ್‌, ಸಪ್ತಮಿ ಗೌಡ, ಶೃತಿ ಹರಿಹರನ್‌, ಹಿರಿಯ ನಟಿ ಭಾರತೀ ವಿಷ್ಣುವರ್ಧನ್‌, ನೀನಾಸಂ ಸತೀಶ್‌ ಸೇರಿದಂತೆ ಅನೇಕರು ಡಾಲಿ ಮದುವೆಯಲ್ಲಿ ಸಂಭ್ರಮಿಸಿದರು. ಇನ್ನು ಮದುವೆ ಆಗಮಿಸಿದ ಸ್ವಾಮೀಜಿಗಳ ಕಾಲಿಗೆ ಬಿದ್ದು ನವ ದಂಪತಿ ಆಶೀರ್ವಾದ ಪಡೆದರು.ಇನ್ನು ಶಿವಣ್ಣನನ್ನು ಕಂಡೊಡನೆ ಡಾಲಿ ತಬ್ಬಿಕೊಂಡರು.

ಶಿವಣ್ಣನನ್ನು ತಬ್ಬಿಕೊಂಡ ಡಾಲಿ- ವಿಡಿಯೊ ಇದೆ

Profile Rakshita Karkera Feb 16, 2025 12:21 PM

ಮೈಸೂರು: ಡಾಲಿ ಧನಂಜಯ ಮತ್ತು ಧನ್ಯತಾ(Daali Weds Dhanyatha) ಅವರ ವಿವಾಹ ಇಂದು ಅದ್ದೂರಿಯಾಗಿ ನೆರವೇರಿದೆ. ಮೀನಾ ಲಗ್ನದಲ್ಲಿ ಡಾಲಿ ಧನ್ಯತಾಗೆ ಮಾಂಗಲ್ಯ ಧಾರಣೆ ಮಾಡಿದ್ದು, ತಾಳಿ ಕಟ್ಟುತ್ತಿದ್ದಂತೆಯೇ ಧನ್ಯತಾ ಎಮೋಷನಲ್ ಆಗಿದ್ದಾರೆ. ತಾಳಿಯನ್ನು ಕಣ್ಣಿಗೆ ಒತ್ತಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಅಭಿಮಾನಿಗಳು, ಆಪ್ತರು, ಕುಟುಂಬದವರು ನವ ದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ಡಾಲಿ ಮದುವೆಗೆ ಚಿತ್ರರಂಗದ ಸ್ನೇಹಿತರು, ರಾಜಕೀಯ ಮುಖಂಡರು, ಕುಟುಂಬಸ್ಥರು ಸಾಕ್ಷಿಯಾದರು.

ನಟ ಶಿವರಾಜ್‌ಕುಮಾರ್‌, ಸಪ್ತಮಿ ಗೌಡ, ಶೃತಿ ಹರಿಹರನ್‌, ಹಿರಿಯ ನಟಿ ಭಾರತೀ ವಿಷ್ಣುವರ್ಧನ್‌, ನೀನಾಸಂ ಸತೀಶ್‌ ಸೇರಿದಂತೆ ಅನೇಕರು ಡಾಲಿ ಮದುವೆಯಲ್ಲಿ ಸಂಭ್ರಮಿಸಿದರು. ಇನ್ನು ಮದುವೆ ಆಗಮಿಸಿದ ಸ್ವಾಮೀಜಿಗಳ ಕಾಲಿಗೆ ಬಿದ್ದು ನವ ದಂಪತಿ ಆಶೀರ್ವಾದ ಪಡೆದರು.ಇನ್ನು ಶಿವಣ್ಣನನ್ನು ಕಂಡೊಡನೆ ಡಾಲಿ ತಬ್ಬಿಕೊಂಡರು.

ಡಾಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ

ಇನ್ನು ಧಾರಾ ಮೂಹೂರ್ತದ ನಂತರ ವೇದಿಕೆಯಿಂದ ಕೆಳಗಿಳಿದು ಅಭಿಮಾನಿಗಳ ಬಳಿಗೆ ಬಂದ ಡಾಲಿಯನ್ನು ಜನ ಮುತ್ತಿಕ್ಕಿದ್ದರು. ಇದೇ ವೇಳೆ ಪೊಲೀಸ್‌ ಸಿಬ್ಬಂದಿ ಕೂಡ ಡಾಲಿ ಧನ್ಯತಾ ದಂಪತಿ ಜೊತೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದರು.