ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Singer Neha Kakkar: ಗೋಬ್ಯಾಕ್‌ ಎಂದ ಪ್ರೇಕ್ಷಕರು; ಕಾನ್ಸರ್ಟ್ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಗಾಯಕಿ ನೇಹಾ ಕಕ್ಕರ್‌

Melbourne Concert: ಸಂಗೀತ ಕಾರ್ಯಕ್ರಮ ನೀಡಲು ಅಸ್ಪ್ರೇಲಿಯಾದ ಮೆಲ್ಬೋರ್ನ್‌ಗೆ ತೆರಳಿದ ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್‌ ವೇದಿಕೆಯಲ್ಲಿ ಪ್ರೇಕ್ಷಕರ ಎದುರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಕಾರ್ಯಕ್ರಮಕ್ಕೆ 3 ಗಂಟೆ ತಡವಾಗಿ ಆಗಮಿಸಿದ ಅವರು ಕ್ಷಮೆ ಕೋರುವಾಗ ಭಾವುಕರಾಗಿದ್ದಾರೆ.

ಕಾನ್ಸರ್ಟ್ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಗಾಯಕಿ ನೇಹಾ ಕಕ್ಕರ್‌

ಗಾಯಕಿ ನೇಹಾ ಕಕ್ಕರ್‌.

Profile Ramesh B Mar 25, 2025 5:14 PM

ಮೆಲ್ಬೋರ್ನ್‌: ಸಂಗೀತ ಕಾರ್ಯಕ್ರಮ (Melbourne Concert) ನೀಡಲು ಅಸ್ಪ್ರೇಲಿಯಾದ ಮೆಲ್ಬೋರ್ನ್‌ಗೆ ತೆರಳಿದ ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್‌ (Singer Neha Kakkar) ವೇದಿಕೆಯಲ್ಲಿ ಪ್ರೇಕ್ಷಕರ ಎದುರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ನೆರೆದಿದ್ದವರ ಗೋಬ್ಯಾಕ್‌ ಎಂಬ ಗಲಭೆಯ ನಡುವೆ ನೇಹಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಅವರು ಪ್ರೇಕ್ಷಕರಲ್ಲಿ ಕ್ಷಮೆ ಕೋರಿ ವೇದಿಕೆಯಲ್ಲೇ ಭಾವುಕರಾಗಿ ಅಳುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video). ಅಷ್ಟಕ್ಕೂ ಅವರು ಅತ್ತಿದ್ದೇಕೆ? ಪ್ರೇಕ್ಷಕರು ಗೋಬ್ಯಾಕ್‌ ಎಂದಿದ್ದೇಕೆ? ಇಲ್ಲಿದೆ ವಿವರ.

ಕಾರ್ಯಕ್ರಮಕ್ಕೆ ನೇಹಾ ಕಕ್ಕರ್‌ ಸುಮಾರು 3 ಗಂಟೆ ತಡವಾಗಿ ಆಗಮಿಸಿದರು. ಇದರಿಂದ ಅಸಮಾಧಾನಗೊಂಡಿದ್ದ ನೂರಾರು ಪ್ರೇಕ್ಷಕರು ಗೋಬ್ಯಾಕ್‌ ಎಂದು ಧ್ವನಿ ಏರಿಸಿದ್ದಾರೆ. ಈ ವೇಳೆ ಕ್ಷಮೆ ಕೋರಿ ನೇಹಾ ಭಾವುಕರಾಗಿ ಅತ್ತೇ ಬಿಟ್ಟಿದ್ದಾರೆ.

ನೇಹಾ ಕಕ್ಕರ್‌ ಅಳುತ್ತಿರುವ ವಿಡಿಯೊ ಇಲ್ಲಿದೆ:



ವಿಡಿಯೊದಲ್ಲಿ ಏನಿದೆ?

ತಡವಾಗಿ ಆಗಮಿಸಿದ ನೇಹಾ ಅವರನ್ನು ಕಂಡು ಪ್ರೇಕ್ಷಕರು ಗಟ್ಟಿಯಾಗಿ ಕೂಗಿಕೊಂಡರು. ಈ ವೇಳೆ ಅಳುತ್ತಲೇ ಮಾತನಾಡಿದ ಅವರು, ತಡವಾಗಿದ್ದಕ್ಕೆ ಕ್ಷಮೆ ಇರಲಿ ಎಂದರು. ʼʼನೀವು ನಿಜಕ್ಕೂ ಉತ್ತಮ ವ್ಯಕ್ತಿಗಳು. ಇಷ್ಟು ಹೊತ್ತು ತಾಳ್ಮೆಯಿಂದ ಕಾದಿದ್ದೀರಿ. ಸುಮಾರು ಹೊತ್ತಿನಿಂದ ಇಲ್ಲಿದ್ದೀರಿ. ಇನ್ನು ಮುಂದೆ ಯಾರನ್ನೂ ಕಾಯಿಸುವುದಿಲ್ಲ. ಇಷ್ಟು ತಡವಾಗಿದ್ದಕ್ಕೆ ಕ್ಷಮಿಸಿ. ಈ ಕಾರ್ಯಕ್ರಮವನ್ನು ಎಂದಿಗೂ ಮರೆಯಲಾರೆʼʼ ಎಂದು ನೇಹಾ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Shihan Hussaini: ಜಯಲಲಿತಾ ಅಧಿಕಾರಕ್ಕೆ ಬರಲೆಂದು 2015ರಲ್ಲಿ ಶಿಲುಬೆಗೇರಿ ಸುದ್ದಿಯಾಗಿದ್ದ ನಟ ಇನ್ನಿಲ್ಲ

ಪ್ರೇಕ್ಷಕರ ಪೈಕಿ ಕೆಲವರು ನೇಹಾ ಅವರನ್ನು ಕ್ಷಮಿಸಿದ್ದಾರೆ. ಆದರೆ ಹಲವರು ಗೋಬ್ಯಾಕ್‌ ಎಂದು ಅಸಮಾಧಾನದಿಂದ ಕೂಗಿದ್ದಾರೆ. ʼʼಇಲ್ಲಿಂದ ತೆರಳಿ ಹೊಟೇಲ್‌ಗೆ ಹೋಗಿ ವಿಶ್ರಾಂತಿ ಪಡೆಯಿರಿʼʼ ಎಂದು ಒಂದಿಬ್ಬರು ಕಿರುಚಿದರೆ, ಇನ್ನೊಂದಷ್ಟು ಮಂದಿ ʼʼ3 ಗಂಟೆಗಳಿಂದ ಇಲ್ಲಿ ಕಾಯುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ. ಇನ್ನೊಬ್ಬರು ʼʼಇದು ಭಾರತ ಅಲ್ಲ. ನೀವು ಆಸ್ಟ್ರೇಲಿಯಾದಲ್ಲಿದ್ದೀರಿ ಎನ್ನುವುದು ನೆನಪಿರಲಿʼʼ ಎಂದು ಟೀಕಿಸಿದ್ದಾರೆ. ಮಗದೊಬ್ಬರು, ʼʼನಿಮ್ಮ ನಟನೆ ಚೆನ್ನಾಗಿದೆ. ಇದು ಇಂಡಿಯನ್‌ ಐಡಲ್‌ ಶೋ ಅಲ್ಲ. ಅಲ್ಲಿ ಮಕ್ಕಳನ್ನು ಸಂಭಾಳಿಸಿದಂತೆ ಇಲ್ಲಿ ನಮ್ಮ ಮುಂದೆ ನಾಟಕ ಮಾಡಬೇಡಿʼʼ ಎಂದು ವ್ಯಂಗ್ಯವಾಡಿರುವುದು ವೈರಲ್‌ ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊ ನೋಡಿದ ನೆಟ್ಟಿಗರು ಈ ಬಗ್ಗೆ ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ. ʼʼಪರಿಸ್ಥಿತಿ ಹೇಗೇ ಇರಲಿ. ಭಾವನೆಗೆ ಬೆಲೆ ಕೊಡಬೇಕುʼʼ ಎಂದು ಒಬ್ಬರು ನೇಹಾ ನೆರವಿಗೆ ಧಾವಿಸಿದ್ದಾರೆ. ʼʼತಡವಾಗಿ ಬಂದರೂ ಸುಮಾರು 2.30 ಗಂಟೆಗಳ ಕಾಲ ಪ್ರದರ್ಶನ ನೀಡಿದ್ದಾರೆʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.

ಬಾಲಿವುಡ್‌ನಲ್ಲಿ ಜನಪ್ರಿಯ

ತಮ್ಮ ವಿಶಿಷ್ಟ ಧ್ವನಿಯಿಂದ ಬಾಲಿವುಡ್‌ನಲ್ಲಿ ಜನಪ್ರಿಯರಾದ ನೇಹಾ ಕಕ್ಕರ್‌ 2008ರಲ್ಲಿ ತೆರೆಕಂಡ ʼಮೀರಾಭಾಯಿ ನಾಟ್‌ ಔಟ್‌ʼ ಹಿಂದಿ ಚಿತ್ರದಲ್ಲಿ ಸುಖವಿಂದರ್‌ ಸಿಂಗ್‌ ಜತೆ ಹಾಡುವ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಅಂದಿನಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಆಲ್ಬಂಗಳಿಗೂ ಧ್ವನಿ ನೀಡಿದ್ದಾರೆ. ಅಲ್ಲದೆ ರಿಯಾಲಿಟಿ ಶೋ ಜಡ್ಜ್‌ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋದಲ್ಲಿ ಅವರು ಕೆಲವೊಮ್ಮೆ ಭಾವುಕರಾಗಿ ಅಳುತಿರುತ್ತಾರೆ. ಇದೇ ಕಾರಣಕ್ಕೆ ಆಗಾಗ ಟ್ರೋಲಿಗೂ ಆಹಾರವಾಗುತ್ತಾರೆ.