Toxic movie: ಟಾಕ್ಸಿಕ್ ಶೂಟಿಂಗ್ ಜೋರು! ರಾಕಿ ಭಾಯ್ ಫುಲ್ ಬ್ಯುಸಿ
ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಸಿನೆಮಾ ಬಗ್ಗೆ ಆಗಾಗ ಹೊಸ ಹೊಸ ವಿಚಾರ ಕೇಳಿಬರುತ್ತಲೇ ಇದೆ. ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಯಶ್ ಹಾಗೂ ಟೀಂ ಬ್ಯುಸಿಯಾಗಿದ್ದು ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾಕ್ಕಾಗಿ ತಮ್ಮನ್ನು ತಾವೇ ಪೂರ್ತಿಯಾಗಿ ಸಮರ್ಪಿಸಿಕೊಳ್ಳುತ್ತಿದ್ದಾರಂತೆ. ಸದ್ಯ ಯಶ್ ಸಿನಿಮಾದ ಮೇಲೆ ಮಾತ್ರ ಫುಲ್ ಫೋಕಸ್ ಮಾಡುತ್ತಿದ್ದಾರೆ. ಈಗಾಗಲೇ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗೋವಾ ಹಾಗೂ ಮುಂಬೈನಲ್ಲಿ ಚಿತ್ರಿಕರಣಗೊಂಡಿದ್ದು, ಈ ವರ್ಷದೊಳಗೆ ಸಿನೆಮಾ ತೆರೆಗೆ ಬರಲು ಸಜ್ಜಾಗುತ್ತಿದೆ.
ನವದೆಹಲಿ: ರಾಕಿಂಗ್ ಸ್ಟಾರ್ ಯಶ್ (Yash) ಕೆಜಿಎಫ್ 2 ಹಿಟ್ ಬಳಿಕ ಮತ್ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೆಜಿಎಫ್ ಸಿನಿಮಾ ಮಾಡಿದ್ದ ರಾಕಿ ಬಾಯ್ ಸದ್ಯ ಟಾಕ್ಸಿಕ್ ಸಿನೆಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಗೀತು ಮೋಹನ್ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದ ಕುರಿತಾಗಿ ಅಭಿಮಾನಿಗಳು ಬಹಳಷ್ಟು ಕಾತುರರಾಗಿದ್ದು ಚಿತ್ರತಂಡ ಈಗಾಗಲೇ ಭರದಿಂದ ಶೂಟಿಂಗ್ ಮಾಡುತ್ತಿದ್ದು ಈ ಬಗ್ಗೆ ಕೆಲವೊಂದು ವಿಚಾರ ವೈರಲ್ ಆಗುತ್ತಿವೆ.
ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಸಿನೆಮಾ ಬಗ್ಗೆ ಆಗಾಗ ಹೊಸ ಹೊಸ ವಿಚಾರ ಕೇಳಿಬರುತ್ತಲೇ ಇದೆ. ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಯಶ್ ಹಾಗೂ ಟೀಂ ಬ್ಯುಸಿಯಾಗಿದ್ದು ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾಕ್ಕಾಗಿ ತಮ್ಮನ್ನು ತಾವೇ ಪೂರ್ತಿಯಾಗಿ ಸಮರ್ಪಿಸಿಕೊಳ್ಳುತ್ತಿದ್ದಾರಂತೆ. ಸದ್ಯ ಯಶ್ ಸಿನಿಮಾದ ಮೇಲೆ ಮಾತ್ರ ಫುಲ್ ಫೋಕಸ್ ಮಾಡುತ್ತಿದ್ದಾರೆ. ಈಗಾಗಲೇ ಟಾಕ್ಸಿಕ್ ಸಿನೆಮಾದ ಶೂಟಿಂಗ್ ಗೋವಾ ಹಾಗೂ ಮುಂಬೈನಲ್ಲಿ ಚಿತ್ರಿಕರಣಗೊಂಡಿದ್ದು ಈ ವರ್ಷದೊಳಗೆ ಸಿನೆಮಾ ತೆರೆಗೆ ತರಲು ಸಜ್ಜಾಗುತ್ತಿದೆ.
ಟಾಕ್ಸಿಕ್ ಸಿನೆಮಾ ಮೂರು ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ಮೊನ್ನೆಯಷ್ಟೇ ನಾಲ್ಕನೇ ಹಂತದ ಶೂಟಿಂಗ್‌ಗಾಗಿ ಬೆಂಗಳೂರಿಗೆ ಆಗಮಿಸಿದ್ದ ಚಿತ್ರತಂಡ ಬಿಟ್ಟು ಬಿಡದೆ ಶೂಟಿಂಗ್ ಕಾರ್ಯ ಕಂಪ್ಲೀಟ್ ಮಾಡಲು ಮುಂದಾಗುತ್ತಿದೆ. ಟಾಕ್ಸಿಕ್ ಸಿನಿಮಾಕ್ಕಾಗಿ ಯಶ್ ಅವರ ಡೆಡಿಕೇಷನ್ ಇಷ್ಟ ಕಂಡು ಯಶ್ ಅಭಿಮಾನಿಗಳು ಸಲಾಂ ರಾಕಿ ಬಾಯ್ ಅನ್ನುತ್ತಿದ್ದಾರೆ. ಕಳೆದ ಒಂದು ವಾರದಿಂದ ಸತತ 12 ಗಂಟೆಗಳ ಶೂಟಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡುತ್ತಿದ್ದಾರೆ. ಮೂರು ದಿನ ಕ್ಯಾರವಾನ್‌ನಲ್ಲೇ ನಿದ್ದೆ ಮಾಡಿರುವ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾಗಾಗಿ ಸಂಪೂರ್ಣವಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರಂತೆ.
ಇದನ್ನು ಓದಿ: Viral News: ʼಚೋಲಿ ಕೆ ಪೀಚೆ ಕ್ಯಾ ಹೈʼ ಡ್ಯಾನ್ಸ್ ಮಾಡಿದ ವರ ; ಸಿಟ್ಟಿಗೆದ್ದ ವಧುವಿನ ತಂದೆ ಮಾಡಿದ್ದೇನು?ವಿಡಿಯೊ ನೋಡಿ
ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್ ನಾರಾಯಣ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಚಿತ್ರದಲ್ಲಿ ನಯನತಾರ, ಕಿಯಾರ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಇವರು ರಾಕಿ ಬಾಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ ಟಾಕ್ಸಿಕ್ ಸಿನಿಮಾ ಮೇಲೆ ಪ್ಯಾನ್ ಇಂಡಿಯಾ ಪ್ರೇಕ್ಷಕರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಪಕ್ಕಾ ಎನ್ನಲಾಗುತ್ತಿದೆ.