ಪತ್ನಿ ಜತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪ್ರಿಯಕರನ ಖಾಸಗಿ ಅಂಗವನ್ನು ಕಚ್ಚಿ ಗಾಯಗೊಳಿಸಿದ ಪತಿ
Extra Marital Affair: ತನ್ನ ಪತ್ನಿಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವನ ಖಾಸಗಿ ಅಂಗವನ್ನು ಕಚ್ಚಿ ಪತಿ ಗಾಯಗೊಳಿಸಿದ ವಿಚಿತ್ರ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ. ಗುರುವಾರ (ಏ. 10) ರಾತ್ರಿ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ವ್ಯಕ್ತಿ ಸದ್ಯ ಚೇತರಿಸಿಕೊಂಡಿದ್ದಾನೆ. ಈ ಕುರಿತಾದ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಲಖನೌ: ʼಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆʼ ಎನ್ನುವ ಮಾತಿದೆ. ಅದಕ್ಕೆ ತಕ್ಕ ಉದಾಹರಣೆಯಂತಿದೆ ಈ ಘಟನೆ. ಮದುವೆಯಾಗಿದ್ದ ನೆರೆ ಮನೆಯವಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾತನಿಗೆ ತಕ್ಕ ಶಾಸ್ತಿಯಾಗಿದೆ. ತನ್ನ ಪತ್ನಿಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವನ ಖಾಸಗಿ ಅಂಗವನ್ನು ಕಚ್ಚಿ ಪತಿ ಗಾಯಗೊಳಿಸಿದ ವಿಚಿತ್ರ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ (Extra Marital Affair). ಗುರುವಾರ (ಏ. 10) ರಾತ್ರಿ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ವ್ಯಕ್ತಿ ಸದ್ಯ ಚೇತರಿಸಿಕೊಂಡಿದ್ದಾನೆ.
ಗುರುವಾರ ರಾತ್ರಿ ವ್ಯಕ್ತಿ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದ. ಇಬ್ಬರು ಬೆಡ್‌ರೂಮ್‌ನಲ್ಲಿ ಸರಸವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕೆಯ ಗಂಡನೂ ಆಗಮಿಸಿದ್ದ. ಇವರನ್ನು ನೋಡಿ ಸಿಟ್ಟಿಗೆದ್ದ ಪತಿ ಆಕೆಯ ಪ್ರಿಯಕನ ಮೇಲೆ ಹಲ್ಲೆ ನಡೆಸಿ ಆತನ ಖಾಸಗಿ ಅಂಗವನ್ನು ಕಚ್ಚಿ ಗಾಯಗೊಳಿಸಿದ್ದ. ಹೇಗೂ ತಪ್ಪಿಸಿಕೊಂಡ ಪ್ರಿಯಕರ ಪೊಲೀಸ್ ಠಾಣೆಗೆ ತೆರಳಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಈ ಸುದ್ದಿಯನ್ನೂ ಓದಿ: Self Harming: ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ
ಘಟನೆ ವಿವರ
ಕಾನ್ಪುರದ ಬೆಕೊಂಗಂಜ್ ಮೂಲದ ಯುವಕ ಬಾಬುಪೂರ್ವದಲ್ಲಿನ ಯುವತಿಯೊಬ್ಬಳು ಪ್ರೀತಿಸಿ 2 ವರ್ಷಗಳ ಹಿಂದೆ ಮದುವೆಯಾಗಿದ್ದ. ಅದಾದ ಬಳಿಕ ಬಾಬುಪೂರ್ವದಲ್ಲಿನ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ಗುರುವಾರ ಸಂಜೆ ಕೆಲಸದ ನಿಮಿತ್ತ ಮನೆಯಿಂದ ಹೊರಟ ಆತ ಶುಕ್ರವಾರ ವಾಪಸಾಗುವುದಾಗಿ ತಿಳಿಸಿದ್ದ. ಆದರೆ ಅದೇ ದಿನ ರಾತ್ರಿ ಹಿಂದಿರುಗಿದ್ದ.
ಮಧ್ಯರಾತ್ರಿ ಮನೆಗೆ ಮರಳಿದ ಆತನಿಗೆ ಆಘಾತಕಾರಿ ದೃಶ್ಯ ಕಣ್ಣಿಗೆ ಬಿದ್ದಿತ್ತು. ತನ್ನ ಪತ್ನಿ ಬೆಡ್‌ರೂಮ್‌ನಲ್ಲಿ ನೆರೆಮನೆಯ ವ್ಯಕ್ತಿಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿರುವುದು ಕಂಡು ಬಂದಿತ್ತು. ಈ ದೃಶ್ಯವನ್ನು ನೋಡುತ್ತಿದ್ದಂತೆ ಪತಿಯ ಕೋಪ ಉಕ್ಕೇರಿತ್ತು. ಪತಿಯನ್ನು ನಿರೀಕ್ಷಿಸಿಯೇ ಇರದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಆಘಾತಗೊಂಡಿದ್ದರು. ಬಳಿಕ ಚೇತರಿಸಿಕೊಂಡ ಪ್ರಿಯಕರ ಹೊರಗೋಡಲು ಯತ್ನಿಸಿದಾಗ ಪತಿಯ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಮುಂದೆ ನಡೆದದ್ದು ಘೋರ ದುರಂತ.
ಪತ್ನಿಯ ಪ್ರಿಯಕರ ಮೇಲೆ ಹಲ್ಲೆ ನಡೆಸಿದ ಪತಿ ಆತನ ಖಾಸಗಿ ಅಂಗವನ್ನು ಕಚ್ಚಿ ಗಾಯಗೊಳಿಸಿದ್ದ. ಬಳಿಕ ಪ್ರಿಯಕರ ಹೇಗೋ ಪತಿಯ ಕೈಯಿಂದ ತಪ್ಪಿಸಿಕೊಂಡು ಸೋರುವ ರಕ್ತದೊಂದಿಗೆ ಸಮೀಪದ ಪೊಲೀಸ್ ಠಾಣೆಗೆ ತೆರಳಿದ್ದ. ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಡಿಸ್‌ಚಾರ್ಚ್ ಮಾಡಿದ್ದಾರೆ.
ಘಟನೆ ಬಗ್ಗೆ ಬಾಬುಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅರುಣ್ ದ್ವಿವೇದಿ ಮಾಹಿತಿ ನೀಡಿ, ʼʼಇದೊಂದು ಅಪರೂಪದ ಪ್ರಸಂಗವಾಗಿದ್ದು, ಸದ್ಯ ಪ್ರಿಯಕರನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸೋರುವ ರಕ್ತದೊಂದಿಗೆ ಮಧ್ಯರಾತ್ರಿ ಠಾಣೆಗೆ ಬಂದಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲʼʼ ಎಂದು ತಿಳಿಸಿದ್ದಾರೆ. ಸದ್ಯ ಎರಡೂ ಕಡೆಯವರ ಜಗಳಕ್ಕೆ ಬ್ರೇಕ್ ಹಾಕಲಾಗಿದೆ. ಅದಾಗ್ಯೂ ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.