ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪಿಟ್‌ಬುಲ್‌ ಅಟ್ಟಹಾಸಕ್ಕೆ 7 ತಿಂಗಳ ಕಂದಮ್ಮ ಬಲಿ- ತಂದೆಯ ಗೋಳಾಟ ಹೇಳ ತೀರದು!

ಅಮೆರಿಕದ ಓಹಿಯೋದಲ್ಲಿ ಕುಟುಂಬದವರು ಸಾಕಿದ ಪಿಟ್‌ಬುಲ್‌ ನಾಯಿಯೊಂದು 7 ತಿಂಗಳ ಹೆಣ್ಣು ಮಗು ಎಲಿಜಾ ಟರ್ನರ್ ಅವಳನ್ನು ಕಚ್ಚಿ ಕ್ರೂರವಾಗಿ ಕೊಂದ ಘಟನೆ ನಡೆದಿದೆ. ಈ ಸುದ್ದಿಯನ್ನು ಅವಳ ತಾಯಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್(Viral Video) ಆಗಿದೆ.

ಪಿಟ್‌ಬುಲ್‌ನ ಡೆಡ್ಲಿ ಅಟ್ಯಾಕ್‌- 7 ತಿಂಗಳ ಕಂದಮ್ಮ ಬಲಿ

Profile pavithra Apr 14, 2025 6:48 PM

ವಾಷಿಂಗ್ಟನ್‌: ಜನರು ನಾಯಿಯನ್ನು ಕುಟುಂಬದ ಸದಸ್ಯನಂತೆ ಪ್ರೀತಿಯಿಂದ ಸಾಕುತ್ತಾರೆ. ನಾಯಿಗಳು ಕೂಡ ಮಾಲೀಕನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಆದರೆ ಈ ನಾಯಿಗಳು ಕೆಲವೊಮ್ಮೆ ಪ್ರೀತಿ ತೋರಿಸುವ ಜೊತೆಗೆ ಅಷ್ಟೇ ಅಪಾಯಕಾರಿ ಕೂಡ ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಅಮೆರಿಕದ ಓಹಿಯೋದಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆಯೇ ಸಾಕ್ಷಿ. ಕುಟುಂಬದವರು ಸಾಕಿದ ಪಿಟ್‌ಬುಲ್‌ ನಾಯಿಯೊಂದು 7 ತಿಂಗಳ ಹೆಣ್ಣು ಮಗುವನ್ನು ಕಚ್ಚಿ ಕ್ರೂರವಾಗಿ ಕೊಂದ ಘಟನೆ ನಡೆದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಮಗುವಿನ ತಾಯಿ ಮ್ಯಾಕೆಂಝಿ ಕಾಪ್ಲೆ ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿ ತನ್ನ ದುಃಖವನ್ನು ತೋಡಿಕೊಂಡಿದ್ದಾಳೆ. ತನ್ನ ಮಗಳು ಎಲಿಜಾ ಟರ್ನರ್ ನಾಯಿಗಳನ್ನು ಮುದ್ದಾಡುತ್ತಿರುವ ಪೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಷ್ಟು ಪ್ರೀತಿಯಿಂದ ಇದ್ದ ನಾಯಿ ಯಾಕೆ ತನ್ನ ಮಗಳನ್ನು ಅಷ್ಟು ಕ್ರೂರವಾಗಿ ಕೊಂದಿದೆ ಎಂದು ತನಗೆ ಅರ್ಥವಾಗುತ್ತಿಲ್ಲ ಎಂದಿದ್ದಾಳೆ. ಹಾಗೇ ಎಲಿಜಾಳ ತಂದೆ ಕಾಮರೂನ್ ಟರ್ನರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅವಳ ನಿಧನಕ್ಕೆ ಶೋಕ ವ್ಯಕ್ತಪಡಿಸಿ, ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ದುಃಖಿಸಿದ್ದಾನೆ.



ವರದಿ ಪ್ರಕಾರ, 7 ತಿಂಗಳ ಮಗು ಎಲಿಜಾ ಟರ್ನರ್ ಅನ್ನು ಅವಳ ಕುಟುಂಬದ ಸಾಕು ನಾಯಿಯೊಂದು ಕಚ್ಚಿ ಕೊಂದಿದೆ ಎಂದು ಹೇಳಲಾಗಿದೆ. ಘಟನೆಯ ನಂತರ ಪಿಟ್‌ಬುಲ್‌ ಅನ್ನು ಫ್ರಾಂಕ್ಲಿನ್ ಕೌಂಟಿ ಅನಿಮಲ್ ಕಂಟ್ರೋಲ್, ಮನೆಯಿಂದ ಹೊರಗೆ ಕರೆದೊಯ್ದಿದೆಯಂತೆ. ನಾಯಿಗೆ ಏನಾಗಿತ್ತು ಎಂಬುದನ್ನು ಏಜೆನ್ಸಿ ಶೀಘ್ರದಲ್ಲೇ ಪತ್ತೆಹಚ್ಚಲಿದೆ ಎನ್ನಲಾಗಿದೆ.

ನಾಯಿಗಳು ಮಕ್ಕಳನ್ನು ಕಚ್ಚಿ ಕೊಂದ ಘಟನೆ ಹಲವು ವರದಿಯಾಗಿದ್ದರಿಂದ ಪಿಟ್ ಬುಲ್ಸ್ ಅಥವಾ ಇತರ ತಳಿಗಳ ನಾಯಿಗಳನ್ನು ಮನೆಯಲ್ಲಿ ಸಾಕಬಾರದೆಂಬ ನಿಯಮವನ್ನು ಜಾರಿಗೊಳಿಸಲಾಗಿತ್ತು. ಆದರೆ ಓಹಿಯೋದಲ್ಲಿ ಪಿಟ್ ಬುಲ್ಸ್ ಅಥವಾ ಇತರ ತಳಿಗಳ ನಾಯಿಗಳನ್ನು ಮನೆಯಲ್ಲಿ ಸಾಕಬಾರದೆಂದು ರಾಜ್ಯವ್ಯಾಪಿ ನಿಷೇಧವಿಲ್ಲವಾದ್ದರಿಂದ , ಕೆಲವು ನಗರಗಳ ಜನರು ಈ ತಳಿಯ ನಾಯಿಗಳನ್ನು ಮನೆಯಲ್ಲಿ ಸಾಕಿಕೊಂಡಿದ್ದರು. ಹೀಗಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಜನರ ಮಧ್ಯೆ ʼಇಲ್ಯುಮಿನಾಟಿʼ ಹಾಡಿಗೆ ಕುಣಿದು ಕುಪ್ಪಳಿಸಿದ ಆನೆ; ಶಾಕ್‌ ಆದ ನೆಟ್ಟಿಗರು ಹೇಳಿದ್ದೇನು?

ಇಂತಹ ದುರಂತ ಈ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿರುವುದಾಗಿ ವರದಿಯಾಗಿತ್ತು. ಏಳು ತಿಂಗಳ ಮಗುವೊಂದನ್ನು ಅವಳ ಕುಟುಂಬದ ಸಾಕು ನಾಯಿ ಕಚ್ಚಿ ಕೊಂದಿತ್ತು. ಬೆಲ್ಜಿಯಂ ಮಾಲಿನೋಯಿಸ್ ಎಂದು ಹೆಸರಿನ ಈ ನಾಯಿ ಮಗುವನ್ನು ಕಚ್ಚಿದ್ದು, ಇದರಿಂದ ಅವಳ ತಲೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಕೂಡ ವೈದ್ಯರ ಸಕಲ ಪ್ರಯತ್ನಗಳ ಹೊರತಾಗಿ ಆಕೆ ಸಾವನಪ್ಪಿದ್ದಳು. ಹೀಗಾಗಿ ಅದೇ ದಿನ ನಾಯಿಯನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು.