MS Dhoni: ಧೋನಿಯ ಫ್ರೀಕ್ ರನೌಟ್ ಕಂಡು ದಂಗಾದ ಪ್ರೇಕ್ಷಕರು!
IPL 2025: ಧೋನಿ ಈ ಪಂದ್ಯದಲ್ಲಿ ಕ್ಯಾಚ್, ಸ್ಟಂಪಿಂಗ್ ಮತ್ತು ರನೌಟ್ ಮೂಲಕ ಮೂವರನ್ನು ಔಟ್ ಮಾಡಿದರು. ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಅವರು ಅಜೇಯ 26 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಮೂಲಕ ಐಪಿಎಲ್‌ನಲ್ಲಿ ಪಂದ್ಯಶ್ರೇಷ್ಠ ಪಡೆದ ಮೊದಲ ಅತಿ ಹಿರಿಯ ಆಟಗಾರ ಎನಿಸಿಕೊಂಡರು.


ಲಕ್ನೋ: ಈ ಬಾರಿಯ ಐಪಿಎಲ್(IPL 2025) ಟೂರ್ನಿಯಲ್ಲಿ ಸೆಕೆಂಡುಗಳ ಅಂತರದಲ್ಲಿ ಸ್ಟಂಪಿಂಗ್ ಮಾಡುವ ಮೂಲಕ ಗಮನಸೆಳೆದಿದ್ದ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ಕೀಪರ್ ಮಹೇಂದ್ರ ಸಿಂಗ್ ಧೋನಿ(MS Dhoni) ಇದೀಗ ಸ್ಟನ್ನಿಂಗ್ ರನೌಟ್ ಮೂಲಕ ಅಭಿಮಾನಿಗಳ ಗಮನಸೆಳೆದಿದ್ದಾರೆ. ಸೋಮವಾರ ನಡೆದಿದ್ದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಧೋನಿ ಗ್ಲೌಸ್ ಧರಿಸಿಯೇ ನಾನ್‌ಸ್ಟ್ರೈಕರ್‌ನತ್ತ ಎಸೆದು ಅಬ್ದುಲ್ ಸಮದ್ ಅವರನ್ನು ರನೌಟ್ ಮಾಡಿದರು. ಈ ವಿಡಿಯೊ ವೈರಲ್ ಆಗಿದ್ದು 43 ವರ್ಷದಲ್ಲಿಯೂ ಈ ಪ್ರದರ್ಶನ ತೋರಿದ ಧೋನಿಗೆ ಹಲವು ಮಾಜಿ ಆಟಗಾರರು ಮೆಚ್ಚುಗೆ ಸೂಚಿಸಿದ್ದಾರೆ.
ಲಕ್ನೋ ತಂಡದ ಬ್ಯಾಟಿಂಗ್ ಇನಿಂಗ್ಸ್ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಅಬ್ದುಲ್ ಸಮದ್ ಅವರು ಪತಿರಾಣ ಎಸೆದ ವೈಡ್ ಎಸೆತಕ್ಕೆ ರನ್ ಕದಿಯಲು ಯತ್ನಿಸಿದರು. ಈ ವೇಳೆ ಚುರುಕಿನ ವೇಗದಲ್ಲಿ ಚೆಂಡನ್ನು ಹಿಡಿದ ಧೋನಿ ನಾನ್‌ಸ್ಟ್ರೈಕ್ ಎಂಡ್‌ನತ್ತ ಎಸೆದರು. ಚೆಂಡು ನೇರವಾಗಿ ವಿಕೆಟ್‌ಗೆ ಬಡಿದು ಸಮದ್ ರನೌಟ್ ಆದರು. ಧೋನಿಯ ಈ ಕ್ರೇಜಿ ರನೌಟ್ ಕಂಡು ಒಂದು ಕ್ಷಣ ಮೈದಾನದಲ್ಲಿದ್ದ ಪ್ರೇಕ್ಷಕರು ದಂಗಾದರು.
ಧೋನಿ ಈ ಪಂದ್ಯದಲ್ಲಿ ಕ್ಯಾಚ್, ಸ್ಟಂಪಿಂಗ್ ಮತ್ತು ರನೌಟ್ ಮೂಲಕ ಮೂವರನ್ನು ಔಟ್ ಮಾಡಿದರು. ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಅವರು ಅಜೇಯ 26 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಮೂಲಕ ಐಪಿಎಲ್‌ನಲ್ಲಿ ಪಂದ್ಯಶ್ರೇಷ್ಠ ಪಡೆದ ಮೊದಲ ಅತಿ ಹಿರಿಯ ಆಟಗಾರ ಎನಿಸಿಕೊಂಡರು.
14 ನೇ ಓವರ್‌ನಲ್ಲಿ ಜಡೇಜಾ ಬೌಲಿಂಗ್‌ನಲ್ಲಿ ಆಯುಷ್ ಬಡೋನಿ ಅವರನ್ನು ಧೋನಿ ಸ್ಟಂಪಿಂಗ್ ಮಾಡುವ ಮೂಲಕ ಐಪಿಎಲ್‌ನಲ್ಲಿ ವಿಕೆಟ್ ಹಿಂದೆ 200 ಬಲಿಗಳನ್ನು(154 ಕ್ಯಾಚ್ +ಸ್ಟಂಪಿಂಗ್) ಪಡೆದ ಮೊದಲ ಕೀಪರ್ ಎನಿಸಿಕೊಂಡರು.
ಇದನ್ನೂ ಓದಿ IPL 2025: ಪಂದ್ಯದ ವೇಳೆ ಫೀಲ್ಡ್ ಅಂಪೈರ್ ದಿಢೀರ್ ಬ್ಯಾಟ್ ಪರಿಶೀಲನೆ; ಏನಿದು ಹೊಸ ನಿಯಮ?
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡ ರಿಷಭ್ ಪಂತ್ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 166 ರನ್‌ಗಳನ್ನು ಕಲೆ ಹಾಕಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ರಚಿನ್ ರವೀಂದ್ರ (37), ಶಿವಂ ದುಬೆ (43*) ಹಾಗೂ ಎಂಎಸ್ ಧೋನಿ (26*) ಅವರ ಬ್ಯಾಟಿಂಗ್ ಬಲದಿಂದ 19.3 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 168 ರನ್‌ಗಳನ್ನು ಗಳಿಸಿ 5 ವಿಕೆಟ್‌ಗಳ ಗೆಲುವು ಪಡೆಯಿತು. ಈ ಮೂಲಕ ಸತತ 5 ಸೋಲಿನ ಬಳಿಕ ಮತ್ತೆ ಗೆಲುವಿನ ಹಳಿ ಏರುವಲ್ಲಿ ಯಶಸ್ವಿಯಾಯಿತು.