ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pregnancy Tips: ಗರ್ಭಾವಸ್ಥೆಯಲ್ಲಿ ಕಾಣಿಸುವ ರಕ್ತದ ಚುಕ್ಕೆಗಳು ಸಾಮಾನ್ಯವೇ? ಈ ಬಗ್ಗೆ ವೈದ್ಯರ ಸಲಹೆ ಏನು?

Pregnancy Tips: ಹೆರಿಗೆಯ ಆರಂಭದ ಹಂತದಲ್ಲಿ ಚುಕ್ಕೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಭಾರೀ ರಕ್ತಸ್ರಾವ ಉಂಟಾದರೆ ಅದನ್ನು ಕಡೆಗಣಿಸಬಾರದು, ಏಕೆಂದರೆ ಇದು ಗರ್ಭಪಾತದ ತೊಂದರೆಯು ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಗರ್ಭಾವಸ್ಥೆಯಲ್ಲಿ, ಮಹಿಳೆಯ ದೇಹವು ಹಲವಾರು ಹಾರ್ಮೋನುಗಳ ಮತ್ತು ದೈಹಿಕ ಬದಲಾವಣೆಗಳಿಗೆ ಒಳಗಾಗುವುದರಿಂದ ರಕ್ತ ಸ್ರಾವ ಉಂಟಾದಾಗ ತಪಾಸಣೆ ಅಗತ್ಯವಾಗಿರುತ್ತದೆ..

ಗರ್ಭಾವಸ್ಥೆಯಲ್ಲಿ ಕಾಣಿಸುವ ರಕ್ತದ ಚುಕ್ಕೆಗಳು- ಇದರ ಅಪಾಯವೇನು?

Profile Pushpa Kumari Apr 12, 2025 6:52 AM

ನವದೆಹಲಿ: ಗರ್ಭಾವಸ್ಥೆಯು (Pregnancy Tips) ಪ್ರತಿಯೊಂದು ತಾಯಿಯ ಅತಿ ಮುಖ್ಯವಾದ ಘಟ್ಟ ವಾಗಿದೆ.ಗರ್ಭಾವಸ್ಥೆಯಲ್ಲಿ ಮಗುವನ್ನು ತಾಯಿ ಎಷ್ಟು ಕಾಳಜಿ ಮಾಡುತ್ತಾಳೊ ಹಾಗೆಯೇ ಮಗು ಬೆಳವಣಿಗೆಯಾಗುತ್ತಿದ್ದಂತೆ ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ  ಹೆಚ್ಚು ಗಮನ ವಹಿಸಬೇಕಾಗುತ್ತದೆ. ಗರ್ಭಿಣಿಯಾದ ಸಮಯದಲ್ಲಿ ಅಥವಾ ಹೆರಿಗೆಯಾಗುವ ಮೊದಲು ಯಾವುದೇ ಸಂದರ್ಭದಲ್ಲಿ ಯೋನಿಯಲ್ಲಿ ರಕ್ತಸ್ರಾವ ಅಥವಾ ಚುಕ್ಕೆಗಳು ಕಾಣಿಸುವುದು ಸಾಮಾನ್ಯ,  ಆದರೆ ರಕ್ತದ ಸ್ರಾವವು ಅತೀ ಹೆಚ್ಚು ಸಂಭವಿಸಿದರೆ ಇದು ಅಪಾಯದ ಸಂಕೇತವಾಗಿರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹೆರಿಗೆಯ ಆರಂಭದ ಹಂತದಲ್ಲಿ ಚುಕ್ಕೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಭಾರೀ ರಕ್ತಸ್ರಾವ ಉಂಟಾದರೆ ಅದನ್ನು ಕಡೆಗಣಿಸಬಾರದು, ಏಕೆಂದರೆ ಇದು ಗರ್ಭಪಾತದ ತೊಂದರೆಯು ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಗರ್ಭಾವಸ್ಥೆಯಲ್ಲಿ, ಮಹಿಳೆಯ ದೇಹವು ಹಲವಾರು ಹಾರ್ಮೋನುಗಳ ಮತ್ತು ದೈಹಿಕ ಬದಲಾವಣೆಗಳಿಗೆ ಒಳಗಾಗುವುದರಿಂದ ರಕ್ತ ಸ್ರಾವ ಉಂಟಾದಾಗ ತಪಾಸಣೆ ಅಗತ್ಯವಾಗಿರುತ್ತದೆ.

ಮೊದಲ ತ್ರೈಮಾಸಿಕದಲ್ಲಿ ರಕ್ತಸ್ರಾವ ಅಥವಾ ಚುಕ್ಕೆ ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ರಕ್ತಸ್ರಾವವು ಹೆಚ್ಚಾಗಿ  ಉಂಟಾದರೆ ಅಕಾಲಿಕ ಹೆರಿಗೆ ಅಥವಾ ಗರ್ಭಪಾತ ದಂತಹ ಸಮಸ್ಯೆ ಉಂಟಾ ಗಲಿದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಯಾವುದೇ ರಕ್ತಸ್ರಾವವನ್ನು ಎಂದಿಗೂ ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಈ ಕಾರಣ ಇರಬಹುದು:

  • ಗರ್ಭಾವಸ್ಥೆಯಲ್ಲಿ ರಕ್ತದ ಸ್ರಾವ ಅಥವಾ ಚುಕ್ಕೆಗಳು ಕಾಣಿಸಿಕೊಳ್ಳಲು‌ ಅತಿ ಮುಖ್ಯವಾದ ಕಾರಣಗಳೆಂದರೆ, ಲೈಂಗಿಕತೆ ಅಥವಾ ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸದೇ ಇರುವುದು
  • ಮೊಟ್ಟೆಯು ಗರ್ಭಾಶಯದ ಹೊರಗೆ ಬೆಳೆದರೆ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇದು ಗಂಭಿರ ಸಮಸ್ಯೆಯಾಗಿ ಕಾಡಬಹುದು.
  • ಗರ್ಭಕಂಠವು ತೆರೆದಾಗ ಅಥವಾ ಗರ್ಭಾಶಯವು ಸಂಕುಚಿತಗೊಂಡರೆ, ಇದು ರಕ್ತಸ್ರಾವಕ್ಕೆ ಕಾರಣವಾಗಬಹುದು.
  • ರಕ್ತಸ್ರಾವವು ಗರ್ಭಪಾತದ ಮೊದಲ ಚಿಹ್ನೆಯಾಗಿರಬಹುದು.ಹಾಗಾಗಿ ಈ ಬಗ್ಗೆಯು ಎಚ್ಚೆತ್ತುಕೊಳ್ಳಬೇಕು.
  • ಗರ್ಭಾವಸ್ಥೆಯಲ್ಲಿ ಬಿಳಿ ಸೆರಗು, ರಕ್ತಸ್ರಾವ, ಬೆನ್ನು ಹಾಗು ಹೊಟ್ಟೆ ನೋವು ಅಪಾಯದ ಸಂಕೇತ ಉಂಟು ಮಾಡಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು

ಇದನ್ನು ಓದಿ: Health Tips: ಬೇಸಿಗೆಯಲ್ಲಿ ಕಾಡುವ ಮಲಬದ್ಧತೆಗೆ ಪರಿಹಾರವೇನು?

ಹೈಡ್ರೇಟೆಡ್ ಆಗಿರುವುದು ಉತ್ತಮ

ಗರ್ಭಾವಸ್ಥೆಯಲ್ಲಿ ರಕ್ತಸ್ರಾವ ಕಾಣಿಸಿಕೊಂಡರೆ ಹೆಚ್ಚಿನ ಪ್ರಮಾಣದ ನೀರು ಕುಡಿಯುದು ಅಗತ್ಯ. ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆಯು ರಕ್ತಸ್ರಾವಕ್ಕೆ ಕಾರಣವಾಗಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಹೆಚ್ಚಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಭಾರ ಎತ್ತಬೇಡಿ

ಗರ್ಭಾವಸ್ಥೆಯಲ್ಲಿ ಭಾರವನ್ನು ಎತ್ತುವುದನ್ನು ತಪ್ಪಿಸಬೇಕು. ಅದೇ ರೀತಿ ಈ ಸಮಯದಲ್ಲಿ ನೀವು ಯಾವುದೇ ವ್ಯಾಯಾಮ ಹಾಗೆಯೇ ಯಾವುದೇ ಒತ್ತಡದ ಕೆಲಸವನ್ನು ಮಾಡುವುದನ್ನು ತಪ್ಪಿಸಿ.

ಲೈಂಗಿಕ ಸಂಭೋಗ ತಪ್ಪಿಸಿ

ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಸಮಸ್ಯೆ ಇದ್ದರೆ ನೀವು ಲೈಂಗಿಕ ಸಂಭೋಗದಿಂದ ದೂರವಿರುವುದೇ‌ ಉತ್ತಮ. ಹೊಟ್ಟೆ ನೋವು ಮತ್ತು ಚುಕ್ಕೆ ಕಡಿಮೆಯಾಗುವವರೆಗೆ ದೈಹಿಕ ಸಂಭೋಗ ತಪ್ಪಿಸಬೇಕು.