ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Delhi Assembly: ದೆಹಲಿ ವಿಧಾನ ಸಭೆಯಲ್ಲಿ ಕೋಲಾಹಲ ; ಅತಿಶಿ ಸೇರಿ 11 ಆಪ್‌ ನಾಯಕರ ಅಮಾನತು

ಮಂಗಳವಾರ ದೆಹಲಿ ವಿಧಾನಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಭಾಷಣದ ವೇಳೆ ಘೋಷಣೆ ಕೂಗಿದ್ದಕ್ಕಾಗಿ ಆಮ್‌ ಆದ್ಮಿ ಪಕ್ಷದ 11 ಶಾಸಕರನ್ನು ಅಮಾನತುಗೊಳಿಸಲಾಗಿದೆ. ಸ್ಫೀಕರ್‌ ವಿಜಯೇಂದ್ರ ಗುಪ್ತಾ ಅಮಾನತು ಆದೇಶ ಹೊರಡಿಸಿದ್ದಾರೆ. ವಿಪಕ್ಷ ನಾಯಕಿ ಅತಿಶಿ ಸೇರಿದಂತೆ 11 ಶಾಸಕರು ಅಮಾನತಾಗಿದ್ದಾರೆ.

ವಿಧಾನ ಸಭೆಯಿಂದ ಅತಿಶಿ ಸೇರಿ 11 ಆಪ್‌ ನಾಯಕರ ಅಮಾನತು

ಎಲ್‌ಜಿ ವಿಕೆ ಸಕ್ಸೇನಾ

Profile Vishakha Bhat Feb 25, 2025 11:51 AM

ನವದೆಹಲಿ: ದೆಹಲಿಯಲ್ಲಿ ವಿಧಾನ ಸಭೆ ಅಧಿವೇಶನ (Delhi Assembly) ನಡೆಯುತ್ತಿದ್ದು, ಬಿಜೆಪಿ ಸರ್ಕಾರವು ಹಿಂದಿನ ಆಪ್‌ ಆಡಳಿತದ ಕಾರ್ಯಕ್ಷಮತೆಗೆ ಸಂಬಂಧಿಸಿದ 14 ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಗಳನ್ನು ಮಂಗಳವಾರ ಮಂಡಿಸಲಿದೆ. ವರದಿ ಮಂಡನೆಗೂ ಮುನ್ನವೇ ವಿಧಾನ ಸಭೆಯಲ್ಲಿ ಹೈಡ್ರಾಮಾವೇ ನಡೆದಿದ್ದು, ವಿರೋಧ ಪಕ್ಷದ ನಾಯಕಿ ಅತಿಶಿ ಸೇರಿದಂತೆ 11 ಆಪ್‌ ಶಾಸಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಫೀಕರ್‌ ವಿಜಯೇಂದ್ರ ಗುಪ್ತಾ ಅಮಾನತು ಆದೇಶ ಹೊರಡಿಸಿದ್ದಾರೆ.

ಅಧಿವೇಶನ ಪ್ರಾರಂಭವಾಗುತ್ತಿದಂತೆ ಎಲ್‌ಜಿ ವಿಕೆ ಸಕ್ಸೇನಾ ಭಾಷಣದ ವೇಳೆ ಆಪ್‌ ಶಾಸಕರು ಘೋಷಣೆ ಕೂಗಿದ್ದರಿಂದ ವಿಧಾನಸಭೆಯಿಂದ ಹೊರಗೆ ಕರೆದೊಯ್ಯಲಾಗಿದೆ. ನಂತರ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಭೀಮರಾವ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರಿಗೆ ಅವಮಾನ ಮಾಡಿದ ವಿಷಯದ ಕುರಿತು ಎಎಪಿ ಶಾಸಕರು ಗದ್ದಲ ಸೃಷ್ಟಿಸಿದ ನಂತರ ಸ್ಪೀಕರ್ ಗುಪ್ತಾ ಅವರನ್ನು ಅಮಾನತುಗೊಳಿಸಿದರು. ಅಮಾನತುಗೊಂಡ ಶಾಸಕರನ್ನು ಸದನದ ಹೊರಗೆ ಕರೆದೊಯ್ಯಲಾಯಿತು. ಮಾರ್ಷಲ್‌ಗಳು ಅತಿಶಿ, ಗೋಪಾಲ್ ರೈ, ಸಂಜೀವ್ ಝಾ, ವಿಶೇಷ ರವಿ, ಅನಿಲ್ ಝಾ ಮತ್ತು ಜರ್ನೈಲ್ ಸಿಂಗ್ ಅವರನ್ನು ಸದನದ ಹೊರಗೆ ಕರೆದೊಯ್ದರು.



ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಎಲ್.ಜಿ. ಸಕ್ಸೇನಾ, ಸಿಎಜಿ ವರದಿಯನ್ನು ಮಂಡಿಸುವ ಸರ್ಕಾರದ ಕಾರ್ಯಸೂಚಿಯನ್ನು ಪ್ರಸ್ತಾಪಿಸುತ್ತಾ, ಸರ್ಕಾರ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ಸಿಎಜಿ ವರದಿಗಳನ್ನು ಮಂಡಿಸಲು ನಿರ್ಧರಿಸಿದೆ. ಇದು ಹಿಂದಿನ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳಯಲಿದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ, ಮಹಿಳಾ ಸಬಲೀಕರಣ, ಸ್ವಚ್ಛ ದೆಹಲಿ, ಯಮುನಾ ನದಿಯ ಪುನರುಜ್ಜೀವನ, ಶುದ್ಧ ಕುಡಿಯುವ ನೀರು ಮುಂಬರುವ ತಿಂಗಳುಗಳಲ್ಲಿ ಸರ್ಕಾರದ ಗಮನದ ಕ್ಷೇತ್ರಗಳಾಗಿವೆ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Atishi Marlena : ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ

ಸದನದಿಂದ ಹೊರಹಾಕಲ್ಪಟ್ಟ ನಂತರ, ಎಎಪಿ ಶಾಸಕರು ದೆಹಲಿ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.