RCB IPL Records: ಆರ್‌ಸಿಬಿ ಐಪಿಎಲ್ ಸಾಧನೆಯ ಇಣುಕು ನೋಟ
ಆರ್‌ಸಿಬಿ ಹಾಲಿ ಆವೃತ್ತಿಯಲ್ಲಿ ತವರಿನಾಚೆ ಆಡಿದ ಎಲ್ಲ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಆವೃತ್ತಿಯೊಂದರಲ್ಲಿ ಎದುರಾಳಿ ನೆಲದಲ್ಲಿ ಆಡಿದ ಲೀಗ್‌ನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಹೀಗಾಗಿ ಕ್ವಾಲಿಫೈಯರ್ ಪಂದ್ಯ ಕೂಡ ಗೆಲ್ಲಬಹುದು ಎಂಬ ನಂಬಿಕೆ ಅಭಿಮಾನಿಗಳದ್ದಾಗಿದೆ.


ಚಂಡೀಗಢ: 2016ರ ಬಳಿಕ ಟಾಪ್-2 ಸ್ಥಾನ ಅಲಂಕರಿಸಿ ಕ್ವಾಲಿಫೈಯರ್ ಹಂತಕ್ಕೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ, 2025ರ ಐಪಿಎಲ್(IPL 2025) ಕ್ವಾಲಿಫೈಯರ್-1 ಪಂದ್ಯವನ್ನಾಡಲು ಸಜ್ಜಾಗಿದೆ. ಗುರುವಾರ ಪಂಜಾಬ್ ಕಿಂಗ್ಸ್(PBKS vs RCB Qualifier 1) ಸವಾಲು ಎದುರಿಸಲಿದೆ. ಇದುವರೆಗಿನ 17 ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧನೆಯ(RCB IPL Records) ಇಣುಕು ನೋಟ ಇಲ್ಲಿದೆ.
ಅತ್ಯಧಿಕ ಅಭಿಮಾನಿ ಬಳಗ ಮತ್ತು ಸ್ಟಾರ್ ಆಟಗಾರರನ್ನು ಹೊಂದಿಯೂ ಆರ್‌ಸಿಬಿಗೆ ಇದುವರೆಗೂ ಕಪ್ ಭಾಗ್ಯ ಒಲಿದಿಲ್ಲ. 2009, 2011 ಮತ್ತು 2016 ರಲ್ಲಿ ಒಟ್ಟು ಮೂರು ಬಾರಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ 18 ನೇ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿಗೇರುವ ಸನಿಹದಲ್ಲಿರುವ ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ.
ಆರ್‌ಸಿಬಿ ಐಪಿಎಲ್ ಸಾಧನೆ
2008: ಲೀಗ್ ಹಂತದಲ್ಲೇ ನಿರ್ಗಮನ
2009: ರನ್ನರ್ ಅಪ್
2010: ಪ್ಲೇ ಆಫ್ ಪ್ರವೇಶ
2011: ರನ್ನರ್ ಅಪ್
2012: ಲೀಗ್ ಹಂತದಲ್ಲೇ ನಿರ್ಗಮನ
2013: ಲೀಗ್ ಹಂತದಲ್ಲೇ ನಿರ್ಗಮನ
2014: ಲೀಗ್ ಹಂತದಲ್ಲೇ ನಿರ್ಗಮನ
2015: ಪ್ಲೇ ಆಫ್ ಪ್ರವೇಶ
2016: ರನ್ನರ್ ಅಪ್
2017: ಲೀಗ್ ಹಂತದಲ್ಲೇ ನಿರ್ಗಮನ
2018: ಲೀಗ್ ಹಂತದಲ್ಲೇ ನಿರ್ಗಮನ
2019: ಲೀಗ್ ಹಂತದಲ್ಲೇ ನಿರ್ಗಮನ
2020: ಪ್ಲೇ ಆಫ್ ಪ್ರವೇಶ
2021: ಪ್ಲೇ ಆಫ್ ಪ್ರವೇಶ
2022: ಪ್ಲೇ ಆಫ್ ಪ್ರವೇಶ
2023: ಲೀಗ್ ಹಂತದಲ್ಲೇ ನಿರ್ಗಮನ
2024: ಪ್ಲೇ ಆಫ್ ಪ್ರವೇಶ
When the odds are stacked against us, we #PlayBold. ❤️🔥
— Royal Challengers Bengaluru (@RCBTweets) May 28, 2025
Next Mission: 𝙒 𝙌1 pic.twitter.com/MtCSK92mxK