SRH vs MI: ಟಿ20ಯಲ್ಲಿ 300 ವಿಕೆಟ್ ಪೂರೈಸಿದ ಜಸ್‌ಪ್ರೀತ್ ಬುಮ್ರಾ
Jasprit Bumrah: 300 ವಿಕೆಟ್ ಸಾಧನೆ ಮಾತ್ರವಲ್ಲದೆ, ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವಿಕೆಟ್ ಪಡೆದ ಲಸಿತ್ ಮಾಲಿಂಗ ದಾಖಲೆಯನ್ನು ಕೂಡ ಬುಮ್ರಾ ಸರಿಗಟ್ಟಿದರು. ಉಭಯ ಆಟಗಾರರು ಸದ್ಯ 170 ವಿಕೆಟ್ ಕಿತ್ತಿದ್ದಾರೆ. ಮಾಲಿಂಗ ನಿವೃತ್ತಿಯಾಗಿರುವ ಕಾರಣ ಬುಮ್ರಾ ಮುಂದಿನ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತರೆ ದಾಖಲೆ ತಮ್ಮ ಹೆಸರಿಗೆ ಬರೆಯಲಿದ್ದಾರೆ.


ಹೈದರಾಬಾದ್: ಬುಧವಾರ ರಾತ್ರಿ ನಡೆದಿದ್ದ ಐಪಿಎಲ್(IPL 2025)ನ ಸನ್‌ರೈಸರ್ಸ್ ಹೈದರಾಬಾದ್(SRH vs MI) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ಅವರು ಒಂದು ವಿಕೆಟ್ ಕೀಳುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸಿದ 5ನೇ ಭಾರತೀಯ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ಯಜುವೇಂದ್ರ ಚಾಹಲ್ (373), ಪೀಯುಷ್ ಚಾವ್ಲಾ (319), ಭುವನೇಶ್ವರ್ ಕುಮಾರ್ (318), ಆರ್.ಆಶ್ವಿನ್ (315) ಹಿಂದಿನ ಸಾಧಕರು.
300 ವಿಕೆಟ್ ಸಾಧನೆ ಮಾತ್ರವಲ್ಲದೆ, ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವಿಕೆಟ್ ಪಡೆದ ಲಸಿತ್ ಮಾಲಿಂಗ ದಾಖಲೆಯನ್ನು ಕೂಡ ಬುಮ್ರಾ ಸರಿಗಟ್ಟಿದರು. ಉಭಯ ಆಟಗಾರರು ಸದ್ಯ 170 ವಿಕೆಟ್ ಕಿತ್ತಿದ್ದಾರೆ. ಮಾಲಿಂಗ ನಿವೃತ್ತಿಯಾಗಿರುವ ಕಾರಣ ಬುಮ್ರಾ ಮುಂದಿನ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತರೆ ದಾಖಲೆ ತಮ್ಮ ಹೆಸರಿಗೆ ಬರೆಯಲಿದ್ದಾರೆ.
ಬೆನ್ನು ನೋವಿನ ಕಾರಣದಿಂದ ಬುಮ್ರಾ ಹಾಲಿ ಆವೃತ್ತಿಯ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅವರ ಕಮ್‌ಬ್ಯಾಕ್ ಬಳಿಕ ಮುಂಬೈ ತಂಡ ಸತತ ಗೆಲುವಿನ ನಾಗಲೋಟ ಮುಂದುವರಿಸಿದೆ. ಸತತ ನಾಲ್ಕನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
Game ho ya life, we 𝑷𝑳𝑨𝒀 𝑳𝑰𝑲𝑬 𝑴𝑼𝑴𝑩𝑨𝑰 🔥💙#MumbaiIndians #PlayLikeMumbai pic.twitter.com/UYE3HAJF8N
— Mumbai Indians (@mipaltan) March 20, 2025
ಆರ್‌ಜಿಐ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್, ವಿಕೆಟ್ ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ (71 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಅಭಿನವ್ ಮನೋಹರ್ (43 ರನ್, 37 ಎಸೆತ, 2 ಬೌಂಡರಿ, 3 ಸಿಕ್ಸರ್) ಸಾಹಸದಿಂದ 8 ವಿಕೆಟ್‌ಗೆ 143 ರನ್ ಪೇರಿಸಿತು. ಜವಾಬಿತ್ತ ಮುಂಬೈ ತಂಡ ರೋಹಿತ್ ಹಾಗೂ ಸೂರ್ಯಕುಮಾರ್ ಜತೆಯಾಟದಿಂದ 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 146 ರನ್‌ಗಳಿಸಿ ಗೆದ್ದು ಬೀಗಿತು.
ಇದನ್ನೂ ಓದಿ IPL 2025 Points Table: ಭಾರೀ ಜಿಗಿತ ಕಂಡ ಮುಂಬೈ; ಆರ್‌ಸಿಬಿಗೆ ಒಂದು ಸ್ಥಾನ ನಷ್ಟ