Saturday, 30th November 2024

ವೈ.ಎನ್‌.ಹೊಸಕೋಟೆ ಗ್ರಾಮ ಪಂಚಾಯತಿ: ನಾಮಪತ್ರ ತಿರಸ್ಕೃತ ಅಭ್ಯರ್ಥಿ ಕಣದಲ್ಲಿ…?

ಪಾವಗಡ: ವೈ.ಎನ್‌.ಹೊಸಕೋಟೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತಿ ರುವ ಚುನಾವಣಾ ಆಯೋಗ, ತಾಲ್ಲೂಕು ಮತ್ತು  ಜಿಲ್ಲಾಡಳಿತ ಒಮ್ಮೆ ನಾಮಪತ್ರ ತಿರಸ್ಕರಿಸಿದ ನಂತರ, ಸ್ಪರ್ಧೆ ಗೆ ಹೇಗೆ ಅವಕಾಶ ನೀಡಿದರು…!

ಇದೇನಾ ನಮ್ಮ ಚುನಾವಣಾ ವ್ಯವಸ್ಥೆ…? ಎಲ್ಲಿದೆ ಕಾನೂನು…? ಕಾಣೆಯಾದ ಚುನಾವಣಾ ಅಧಿಕಾರಿ ( RO) ಅಧಿಕಾರಿಯ ವಿರುಧ್ಧ ಕ್ರಮಕ್ಜೆ ಆಗ್ರಹಿಸದ- ಜನ ಜಾಗೃತಿ ವೇದಿಕೆ. ವೈ.ಎನ್‌ ಹೊಸಕೋಟೆ ಗ್ರಾಮಪಂಚಾಯತಿ D ಬ್ಲಾಕ್(6) ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯಾಂಬಿಕೆ ( BCM- B) ನಾಮ ಪತ್ರ ತಿರಸ್ಕರಿಸಲಾಗಿದೆ ಎಂದು ಹೇಳಿದ್ದ ಅಧಿಕಾರಿ ಪತ್ರಿಕೆಗಳಿಗೂ ತಿಳಿಸಿದ್ದರು.

ನಾಮಪತ್ರ ವಾಪಸ್ಸು ಪಡೆಯುವ ದಿನವು ಕಳೆದ ನಂತರ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ತಿರಸ್ಕೃತ ಅಭ್ಯರ್ಥಿಯ ದಾಖಲೆ ಗಳನ್ನು ಬದಲಾವಣೆ ಮಾಡಿ ಕ್ರಮಬದ್ದವಾಗಿದೆ ಎಂದು ಚುನಾವಣಾ ಅಧಿಕಾರ ಅನುಮತಿ ನೀಡಿದ್ದಾರೆ.

ತಿರಸ್ಕರಿಸಲು ಕಾರಣ….

ವೈ.ಎನ್‌ ಹೊಸಕೋಟೆ D ಬ್ಲಾಕ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯಾಂಬಿಕೆ ಹಿಂದುಳಿದ ವರ್ಗ ಬ ದಲ್ಲಿ ನಾಮಪತ್ರ ಸಲ್ಲಿಸುತ್ತಾರೆ. ಆದರೆ ಅವರು ನೀಡುವ ಜಾತಿ ದೃಡೀಕರಣ ಪತ್ರ ದಲ್ಲಿ ಅವರ ಜಾತಿಯನ್ನು ಹಿಂದುಳಿದ ವರ್ಗ ಅ ಎಂದು ನೀಡುತ್ತಾರೆ ಇದರ ಆಧಾರದ ಮೇಲೆ ಚುನಾವಣಾ ಅಧಿಕಾರಿಗಳು ನಾಮಪತ್ರ ತಿರಸ್ಕರಿಸುತ್ತಾರೆ.

ವಿಜಯಾಂಬಿಕೆ ಯವರು ಲಿಂಗಾಯತ ಜಾತಿ ಯು ಹಿಂದುಳಿದ ವರ್ಗ ಬ ಅಡಿಯಲ್ಲಿ ಬರುತ್ತದೆ. ಆದರೆ ಪಾವಗಡ ತಹಸಿಲ್ದಾರ್ ಅವರು ಲಿಂಗಾಯತ ಜಾತಿಯನ್ನು ಹಿಂದುಳಿದ ವರ್ಗ ಅ ಎಂದು ಪ್ರಮಾಣ ಪತ್ರ ನೀಡಿರುತ್ತಾರೆ. ಜಾತಿ ಪ್ರಮಾಣ ಪತ್ರ ದ .ನ್ಯೂನ್ಯತೆ ಆಧಾರದಲ್ಲಿ ನಾಮಪತ್ರ ತಿರಸ್ಕರಿಸುತ್ತಾರೆ   ಇದನ್ನು ಯಾರದರು ಪ್ರಶ್ನೆ ಮಾಡುತ್ತಾರೆ ಎಂದು ವೈ.ಎನ್‌ ಹೊಸಕೋಟೆ ಚುನಾವಣಾ ಕಚೇರಿಗೆ ಬಾರದೆ, ಪಾವಗಡ ಕ್ಜೆ ಸಹಾಯಕರನ್ನು ಕರೆಸಿಕೊಂಡು ಕೆಲಸ ಮಾಡುತ್ತಿದ್ದಾರೆ R.O ಸಾಹೇಬರು.
ಇಲ್ಲಿಯವರೆಗೂ ಚುನಾವಣೆಗೆ ಸ್ಪರ್ಧಿಸಿ ರುವ ಯಾವ ಒಬ್ಬ ಅಭ್ಯರ್ಥಿಗೂ ನಾಮಪತ್ರ ಸ್ವೀಕೃತಿ ಪತ್ರ ನೀಡಿಲ್ಲ.

ಏಜೆಂಟ್ ಗುರುತಿನ ಚೀಟಿ, ಅಭ್ಯರ್ಥಿ ಗುರುತಿನಚೀಟಿಗಳನ್ನು ಸಹಾಯಕ ಸಿಬ್ಬಂದಿ ಪಾವಗಡ ಕ್ಜೆ ತೆಗೆದುಕೊಂಡುಹೋಗಿ ಸಹಿ ಮಾಡಿಸಿಕೊಂಡು ಬರುತ್ತಿದ್ದಾರೆ. ಇದು ವೈ.ಎನ್‌ ಹೊಸಕೋಟೆ ಗ್ರಾಮಪಂಚಾಯತಿ ಚುನಾವಣೆ ನಡೆಸುತ್ತಿರುವ ರೀತಿ ಎನ್ನುತ್ತಿದ್ದಾರೆ. ಜನ ಜಾಗ್ರತಿ ವೇದಿಕೆಯವರು, ರಾಜ್ಯ ಚುನಾವಣಾ ಆಯೋಗಕ್ಕೆ  ತನಿಖೆ ನಡೆಸಿ ಈ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳ ದೂರು ನೀಡಲಾಗುವುದು ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೊಗಲು ಸಂಘಟನೆ ತೀರ್ಮಾನಿಸಿದೆ ಎಂದರು.

ಹೇಳಿಕೆ: ಚುನಾವಣೆ ಅಧಿಕಾರಿ ಶಂಕರ್ ಮೂರ್ತಿ ವಿಶ್ವಾವಾಣಿಗೆ ಮಾತನಾಡಿ ವೈ.ಎನ್.ಹೊಸಕೋಟೆ ಗ್ರಾ.ಪಂ.ಚುನಾವಣೆಯ ಡಿ.ಬ್ಲಾಕ್ ನ ಅಭ್ಯರ್ಥಿ ನಾಮ ಪತ್ರ ಸಮಯದಲ್ಲಿ ಸಮಸ್ಯೆ ಆಗಿತ್ತು ತದನಂತರ ತಹಶಿಲ್ದಾರ್ ನಾಗರಾಜ್ ರವರು ಅನುಮತಿ ಪಡೆದು ಸಮಸ್ಯೆ ಬಗ್ಗೆ ಹರಿಸಲಾಗಿದೆ ಎಂದರು.