Viral News: ಅಮ್ಮನ ಜೊತೆ ಪೊಲೀಸ್ ಆಫೀಸರ್ ಮನೆಗೆ ಹೋಗಿದ್ದ ಬಾಲಕನಿಂದ ರಿವಾಲ್ವರ್ ಕಳವು!
ಮಕ್ಕಳಿಗೆ ಎಲ್ಲಾ ವಸ್ತುಗಳೂ ಆಟಿಕೆಯಂತೇ ಕಾಣಿಸುತ್ತವೆ. ಅಂತಹುದ್ದೇ ಒಂದು ಘಟನೆಯಲ್ಲಿ ಕೊಲ್ಹಾಪುರದ ಬಾಲಕನೊಬ್ಬ ನಿವೃತ್ತ ಪೊಲೀಸ್ ಅಧಿಕಾರಿಯ ಮನೆಯಲ್ಲಿದ್ದ ರಿಯಲ್ ರಿವಾಲ್ವರನ್ನೇ ಕದ್ದು ಬಳಿಕ ಎಡವಟ್ಟು ಮಾಡಿಕೊಂಡ ಘಟನೆ ವರದಿಯಾಗಿದೆ. ವಿವರಗಳಿಗೆ ಈ ಸುದ್ದಿಯನ್ನು ಓದಿ.
ಪುಣೆ: ಮಹಾರಾಷ್ಟ್ರದ (Maharashtra) ಕೊಲ್ಹಾಪುರ (Kolhapur) ಜಿಲ್ಲೆಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯಿಂದ ರಿವಾಲ್ವರ್ (Revolver) ಕದ್ದ 13 ವರ್ಷದ ಬಾಲಕ ಅದನ್ನು ಹಿಡಿದುಕೊಂಡು ಮನೆಯ ಸುತ್ತ ಓಡಿ ಬಳಿಕ ಗಾಳಿಯಲ್ಲೊ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲ್ಹಾಪುರದ ಕರ್ವೀರ್ ತಾಲೂಕಿನ ಉಜಾಲ್ವಾಡಿ ಗ್ರಾಮದಲ್ಲಿ (Ujalwadi village) ಈ ಘಟನೆ ನಡೆದಿದೆ. ಈ ಹುಡುಗನ ತಾಯಿ ಆ ನಿವೃತ್ತ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಮನೆ ಕೆಲಸದವರಾಗಿದ್ದರೆಂದೂ ಸಹ ತಿಳಿದುಬಂದಿದೆ. ಈ ಘಟನೆಯ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಜ.31ರ ಶುಕ್ರವಾರದಂದು ಈ ಘಟನೆ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.
‘ಶುಕ್ರವಾರದಂದು ಈ ಹುಡುಗನ ತಾಯಿ ಈತನನ್ನು ತನ್ನ ಜೊತೆಯಲ್ಲಿ ಸಹಾಯ ಮಾಡಲೆಂದು ಆ ಮನೆಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ, ಅಲ್ಲೇ ಡ್ರಾಯರ್ ನಲ್ಲಿ ಇಟ್ಟಿದ್ದ ರಿವಾಲ್ವರ್ ಮತ್ತು ಕೆಲವು ಸಜೀವ ಗುಂಡುಗಳನ್ನು ಈ ಹುಡುಗ ಕಂಡಿದ್ದಾನೆ ಮತ್ತು ಅದನ್ನು ಆತ ಆಟದ ಗನ್ ಎಂದುಕೊಂಡು ಅಲ್ಲಿಂದ ಅದನ್ನು ಎತ್ತಿಕೊಂಡು ಹೋಗಿದ್ದಾನೆ.’ ಎಂದು ಗೋಕುಲ್ ಶಿರ್ಗಾಂವ್ ನ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಳಿಕ ಮರುದಿನ ಈ ಹುಡುಗ ಆ ರಿವಾಲ್ವರನ್ನು ಹಿಡಿದುಕೊಂಡು ತನ್ನ ಗೆಳೆಯನ ಜೊತೆ ಮೈದಾನಕ್ಕೆ ಹೊಗಿ ಅಲ್ಲಿ ಆತ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral Video: ಅಂಗನವಾಡಿಯಲ್ಲಿ ಚಿಕನ್ ಫ್ರೈ, ಬಿರಿಯಾನಿ ಕೊಡಿ- ಮಗುವಿನ ಮನವಿಗೆ ಕೇರಳ ಸರ್ಕಾರ ಹೇಳಿದ್ದೇನು?
ಈ ನಡುವೆ ಮಾಜಿ ಪೊಲೀಸ್ ಅಧಿಕಾರಿ ತನ್ನ ರಿವಾಲ್ವರ್ ಮಿಸ್ ಆಗಿರುವುದನ್ನು ಗಮನಿಸಿ ಕೂಡಲೇ ಪೊಲೀಸ್ ದೂರು ನೀಡಿದ್ದಾರೆ. ತಕ್ಷಣವೇ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಈ ಹುಡುಗ ರಿವಾಲ್ವರ್ ಎಗರಿಸಿರುವುದು ಪತ್ತೆಯಾಗಿದೆ. ಮತ್ತು ಆತ ತನ್ನ ಗೆಳೆಯನೊಂದಿಗೆ ಸೇರಿ 20 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿರುವುದೂ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
‘ನಮಗೆ 20 ಖಾಲಿ ಕ್ಯಾಟ್ರಿಡ್ಜ್ ಗಳು ಹಾಗೂ ಸ್ಥಳದಲ್ಲಿ ಎರಡು ಸುತ್ತು ಗುಂಡು ಹಾರಿಸಿರುವುದು ಗೊತ್ತಾಗಿದೆ’ ಎಂದು ಅಧಿಕಾರಿ ಹೇಳಿದ್ದು, ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.