ಗೂಗಲ್‌ಗೆ ಲಗಾಮು ತೊಡಿಸಬಲ್ಲೆವೆ ?

ಗೂಗಲ್‌ಗೆ ಲಗಾಮು ತೊಡಿಸಬಲ್ಲೆವೆ ?

image-56454be6-660e-4274-bb0b-526b24b2789e.jpg
Profile Vishwavani News November 6, 2022
image-19476a18-d830-4149-97f7-75ac5c7a1338.jpg
image-8f9f0f56-283d-4f77-8815-0bcf1cb8a394.jpg
image-d0b632af-aa98-4a61-9806-c18a9d20baff.jpg
ವಿಕ್ರಮ ಜೋಶಿ ಜಾಗತಿಕ ದೈತ್ಯನಿಗೆ ಸಡ್ಡು ಹೊಡೆದ ನಮ್ಮ ದೇಶದ ಆಯೋಗ ! ಇಪ್ಪತ್ತೊಂದನೇ ಶತಮಾನದ ಮೂರನೆಯ ದಶಕದಲ್ಲಿರುವ ನಾವು, ನೀವು, ಇಂದು ಯಾವುದೇ ವಿಷಯ, ವಿವರ ಬೇಕಿದ್ದರೆ, ‘ಗೂಗ್ಲಿಂಗ್’ ಮಾಡುತ್ತೇವೆ, ಅಂದರೆ ಗೂಗಲ್ ಸರ್ಚ್ ಎಂಜಿನ್ ಬಳಸುತ್ತೇವೆ. ಜತೆಗೆ ವಿಡಿಯೋ ನೋಡಲು ಯುಟ್ಯೂಬ್, ಮೇಲ್ ಕಳಿಸಲು ಜಿಮೇಲ್, ವಿಳಾಸ ಹುಡುಕಲು ಗೂಗಲ್ ಮ್ಯಾಪ್, ಆಪ್ ಖರೀದಿಸಲು ಪ್ಲೇ ಸ್ಟೋರ್, ಹಣ ಪಾವತಿಸಲು ಗೂಗಲ್ ಪೇ - ಹೀಗೆ ನಮ್ಮ ಬದುಕು ‘ಗೂಗಲ್ ಮಯ’ವಾಗಿದೆ. ಮಾತ್ರವಲ್ಲ, ಇಂದಿನ ಸಮಾಜ, ಆರ್ಥಿಕ ವ್ಯವಸ್ಥೆ, ಮನರಂಜನಾ ಮಾಧ್ಯಮಗಳು ಒಂದಲ್ಲ ಒಂದು ರೀತಿಯಲ್ಲಿ ಗೂಗಲ್ ಮೇಲೆ ಅವಲಂಬಿತವಾಗಿದೆ. ಗೂಗಲ್ ತನ್ನ ಕೆಲಸ ನಿಲ್ಲಿಸಿದರೆ, ಹಲವು ನಗರ, ಪಟ್ಟಣಗಳ ಬದುಕು ಒಂದು ಕ್ಷಣ ಸ್ಥಬ್ಧವಾಗಬಹುದು! ವಿಶ್ವದಾದ್ಯಂತ ತನ್ನ ಜಾಲ ಹೊಂದಿರುವ ಗೂಗಲ್, ನಿಜವಾದ ‘ತಂತ್ರಜ್ಞಾನ ದೈತ್ಯ’. ಆದರೆ, ಅಂತಹ ದೈತ್ಯ ಸಂಸ್ಥೆಗೆ ನಮ್ಮ ದೇಶದ ಸ್ಪರ್ಧಾತ್ಮಕ ಆಯೋಗವು ಇತ್ತೀಚೆಗೆ ಸುಮಾರು ರು.3200/- ಕೋಟಿ ದಂಡ ವಿಧಿಸಿದೆ. ಕಾರಣ? ಗೂಗಲ್ ಸಂಸ್ಥೆಯು ಕೆಲವು ಕ್ಷೇತ್ರಗಳಲ್ಲಿ ಬಲವಂತವಾಗಿ ತನ್ನ ಉತ್ಪನ್ನಗಳನ್ನು ಬಳಸುವಂತೆ ಮಾಡುತ್ತಿದೆ ಮತ್ತು ಅದು ಪ್ರತಿಸ್ಪರ್ಧೆ ಕಾನೂನಿನಡಿ ಅಪರಾಧ ಎಂಬ ಕಾರಣಕ್ಕಾಗಿ ನಮ್ಮ ದೇಶವು ಗೂಗಲ್‌ಗೆ ದಂಡ ವಿಧಿಸಿದ್ದು ಒಂದು ದೊಡ್ಡ ವಿದ್ಯಮಾನ. ಅಂದ ಹಾಗೆ ಗೂಗಲ್ ಅಷ್ಟೊಂದು ಮೊತ್ತವನ್ನು ದಂಡವಾಗಿ ಪಾವತಿಸುತ್ತದೆಯೆ ಅಥವಾ ಕೋರ್ಟು, ಕಾನೂನುಗಳ ಜಾಲದಲ್ಲಿ ನಮ್ಮ ದೇಶದ ಆಯೋಗವನ್ನೇ ಕೆಡವಿಬಿಡುತ್ತದೆಯೆ? ಲೇಖನ ಓದಿ ನೋಡಿ. ಗಡಿಯಾರದ ಮುಳ್ಳನ್ನು ದಿನವಿಡೀ ಆಗಾಗ ಹೇಗೆ ನಾವು ನೋಡುತ್ತಿರು ತ್ತೇವೆಯೋ ಹಾಗೆ ಇಂದು ಗೂಗಲ್ ಕ್ರೋಮ್ ಬ್ರೌಸರ್ ಬಳಕೆ. ಏನೇ ಮಾಹಿತಿ ಬೇಕಾದರೂ ನಮಗೆ ಗೂಗಲ್ ಸರ್ಚ್ ಇಂಜಿನ್ ಇದೆ. ಎಲ್ಲೇ ಹೋಗಬೇಕು ಅಂದರೂ ವಿಳಾಸ ಹುಡುಕುವುದರಿಂದ ಹಿಡಿದು ಬಾಗಿಲ ಮೆಟ್ಟಿಲ ತನಕ ಕರೆದೊಯ್ಯುವ ಗೆಳೆಯ ಗೂಗಲ್ ನಕ್ಷೆ. ಓದಲು, ಬರೆಯಲು, ಕೊನೆಗೆ ಅಡುಗೆ ಮಾಡಲು ಕಲಿಸುವುದೂ ಅದೇ ಗೂಗಲ್ ಕಂಪನಿಯ ಯುಟ್ಯೂಬ್! ಜಿಮೇಲ್ ಬಳಸದೆ ಇಂದು ಕೆಲಸವೇ ಆಗುವುದಿಲ್ಲ. ಮನುಷ್ಯನ ದೇಹದಲ್ಲಿ ನರವ್ಯೂಹ ಹೇಗೋ ಹಾಗೆ ನಮ್ಮ ಮೊಬೈಲ್‌ನಲ್ಲಿಯ ಆಂಡ್ರಾಯ್ಡ್ ಆಪರೇ ಟಿಂಗ್ ಸಿಸ್ಟಮ. ಒಂದು ಕ್ಷಣ ಇಂದು ಗೂಗಲ್ ನಿಂತರೆ, ಜಗತ್ತೇ ನಿಂತು ಬಿಡುತ್ತದೆ. ಒಪ್ಪುವಿರಾ? ಇಂತಹ ದೈತ್ಯ ಕಂಪನಿಗೆ ಭಾರತದ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ದಂಡ ವಿಧಿಸಿದೆ. ಇದೊಂದು ಜಾಗತಿಕ ಮಟ್ಟದ ಸುದ್ದಿ! ಸಿಸಿಐ ಪ್ರಕಾರ ಪ್ರತಿಸ್ಪರ್ಧೆ ಕಾನೂನಿನಡಿಯಲ್ಲಿ ಗೂಗಲ್ ಕಂಪನಿ ಅಪರಾಧವನ್ನು ಮಾಡಿದೆ. ದಂಡ ಹೇರಿಕೆಯ ಕುರಿತು ಮೊದಲ ಆದೇಶ ಬಂದಿದ್ದು ಅಕ್ಟೋಬರ್ ಇಪ್ಪತ್ತರಂದು, ಅದು ಸುಮಾರು ರು.1300 ಕೋಟಿ. ನಂತರ ಇಪ್ಪತ್ತೈದನೇ ತಾರೀಖಿನಂದು ಎರಡನೆಯ ದಂಡ, ಅದು ಸುಮಾರು ರು.1900 ಕೋಟಿ. ಅವರ ಪ್ರತಿವರ್ಷದ ಸುಮಾರು 25ಸಾವಿರ ಕೋಟಿ ರುಪಾಯಿಗಳ ವಹಿವಾಟಿನಲ್ಲಿ, ಮೂರು ಸಾವಿರ ಕೋಟಿ ಮಹಾ ಮೊತ್ತ ಅಲ್ಲ. ಆದರೆ ಸಿಸಿಐ ನೀತಿ ಹಾಗೂ ಆದೇಶ ಬಹಳ ಮಹತ್ತ್ವದ್ದು. ಗೂಗಲ್‌ನಲ್ಲಿ ನಾವೋ, ನಮ್ಮೊಳಗೆ ಗೂಗ ಎನ್ನುವ ಗೊಂದಲದಲ್ಲಿ ಇರುವ ನಾವು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗೂಗಲ್ ಹೇಗೆ ಪ್ರತಿಸ್ಪರ್ಧಿ ಕಾನೂನು ಮುರಿಯಿತು? ಗೂಗಲ್ ಕಂಪನಿಗೆ ಭಾರತವು ಮಾತ್ರ ದಂಡ ವಿಧಿಸಿದೆಯಾ? ಇನ್ನೂ ಇಂತಹ ಯಾವೆಲ್ಲ ಕಂಪನಿಗಳು ಹೀಗೆ ದಂಡ ತೆತ್ತಿವೆ? ಇದನ್ನು ತಡೆಯಲು ಏನು ಮಾಡಬೇಕು? ಎನ್ನುವ ಕೆಲವು ಬಹುಮುಖ್ಯ ಪ್ರಶ್ನೆ ಗಳಿಗೆ ಚರ್ಚೆ ಮಾಡಿ ಉತ್ತರ ಕಂಡುಕೊಳ್ಳಬೇಕಿದೆ ಎರಡು ವಿಧಾನದಲ್ಲಿ ಉಲ್ಲಂಘನೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿ, ಇನ್ನೊಬ್ಬರ ಬೆಳವಣಿಗೆಯನ್ನು ಕಡಿವಾಣಗೊಳಿಸುವ ಯಾವುದೇ ಅಭ್ಯಾಸವಿರಲಿ ಅದು ಪ್ರತಿಸ್ಪರ್ಧಿ ನಿಯಮ (Antitrust law) ದಡಿಯಲ್ಲಿ ತಪ್ಪು. ಒಂದು ಕಂಪನಿ ನಮ್ಮ ದೇಶದಲ್ಲಿ ವ್ಯಾಪಾರ ಮಾಡಬೇಕಾದರೆ ಈ ನಿಯಮ ವನ್ನು ಪಾಲಿಸಿಕೊಂಡು ಹೋಗಬೇಕು. ಗೂಗಲ್ ಕಂಪನಿ ಎರಡು ಬಗೆಯಲ್ಲಿ ಪ್ರತಿಸ್ಪರ್ಧಿ ಕಾನೂನನ್ನು ಉಲ್ಲಂಘಿಸಿದೆ. ಒಂದನೆಯದು ಆಂಡ್ರಾಯ್ಡ ಆಪರೇಟಿಂಗ್ ಸಿಸ್ಟಮ್ ಮೂಲಕ. ಎರಡನೆಯದು ಗೂಗಲ್ ಪೇ ಮುಖಾಂತರ. ಎರಡನ್ನೂ ಒಂದೊಂದಾಗಿ ತಿಳಿಯೋಣ. ನಮ್ಮ ದೇಶದ ಒಟ್ಟೂ ಅರವತ್ತು ಕೋಟಿ ಸ್ಮಾರ್ಟ್ ಫೋನ್ ಬಳಕೆಯಲ್ಲಿ 97% ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಫೋನ್‌ಗಳು. ಈ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಉಚಿತ ಸಾಫ್ಟವೇರ್. ಯಾವುದೇ ಮೊಬೈಲ್ ಕಂಪನಿ ಈ ಸಾಫ್ಟವೇರ್ ಬಳಸಿ ತನ್ನದೇ ಆಪರೇಟಿಂಗ್ ಸಿಸ್ಟಮ್ ರಚನೆ ಮಾಡಬಹುದು. ಆದರೆ ಎಲ್ಲರಿಗೂ ಸುಮ್ಮನೆ ಉಚಿತವಾಗಿ ಕೊಡುವುದಕ್ಕೆ ಗೂಗಲ್ ಅಷ್ಟು ದಡ್ಡನೇ? ಸಿಸಿಐಗೆ ಸಿಕ್ಕ ದೂರಿನ ಪ್ರಕಾರ ಗೂಗಲ್ ಏನು ಮಾಡುತ್ತಿದೆ ಗೊತ್ತಾ? ಗೂಗಲ್ ನಕ್ಷೆ, ಜಿಮೇಲ್, ಯೂಟ್ಯೂಬ್ ಬಳಕೆ ಯು ಸಲೀಸಾಗಿ ಆಗಬೇಕು ಅಂದರೆ ‘ತಾವು ರಚಿಸಿ, ಬೆಳೆಸಿದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮಾತ್ರ ಬಳಸಿ’ ಎಂದು ಗೂಗಲ್ ಕಂಪನಿ ಉಳಿದವರ ಮೇಲೆ ಒತ್ತಡ ಹಾಕುತ್ತಿದೆ. ಇದರಿಂದಾಗಿ ಉಳಿದವರಿಗೆ ಆಯ್ಕೆಯಿಲ್ಲ, ಹಾಗೆಯೇ ಸ್ಪರ್ಧಿಸಲು ಅವಕಾಶವೇ ಇಲ್ಲ. ಇದು ತಪ್ಪು ಎನ್ನುವುದು ಸಿಸಿಐ ವಾದ. ಇನ್ನೊಂದು ದೂರು ಗೂಗಲ್ ಪೇಗೆ (ಜಿಪೇ) ಸಂಬಂಧಿಸಿದ್ದು. ಚೀನಾ ದೇಶವನ್ನು ಬಿಟ್ಟರೆ ಜಗತ್ತಿನಾದ್ಯಂತ ಎಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದೆಯೋ ಅ ಆಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ಬಳಕೆ ಆಗುತ್ತದೆ. ಉಚಿತವಾಗಿ ಸಿಗುವ ಆಪ್ ವಿಷಯ ಬಿಟ್ಟುಬಿಡಿ. ಆದರೆ ‘ಹಣ ಕೊಟ್ಟು ಆಪ್ ಡೌನ್ಲೋಡ್ ಮಾಡಬೇಕು ಅಂದರೆ ತಮ್ಮದೇ ಆದ ಜಿಪೇಯನ್ನು ಬಳಸಬೇಕು’ ಎನ್ನುವುದು ಗೂಗಲ್ ಕಂಪನಿ ಹಾಕಿರುವ ಇನ್ನೊಂದು ದಿಗ್ಭಂದನ. ಅಷ್ಟೇ ಅಲ್ಲ ಆಪ್ ಮಾಲೀಕರು ಕೂಡ ಗೂಗಲ್ ಪೇ ಮೂಲಕವೇ ಹಣ ಪಡೆಯಬೇಕು, ಇದು ಇನ್ನೊಂದು ಷರತ್ತು. ಯುಪಿಐ ಯನ್ನೂ ಪ್ಲೇ ಸ್ಟೋರ್‌ನಿಂದ ಗೂಗಲ್ ಹೊರಗೆ ಇಟ್ಟಿದೆ. ಇವೆಲ್ಲವೂ, ಪ್ರತಿಸ್ಪರ್ಧಿ ನಿಯಮದ ಪ್ರಕಾರ ಅಪರಾಧ. ಅಂದರೆ, ಗೂಗಲ್‌ನಂತಹ ದೈತ್ಯ ಸಂಸ್ಥೆ ಈ ರೀತಿ ನಿಯಮಗಳನ್ನು ಹಾಕಿದರೆ, ಎದುರಾಳಿಗೆ ಸಮಾನ ಅವಕಾಶ ನೀಡದೇ ಇರುವಂತಾ ಗುತ್ತದೆ ಎಂದರ್ಥ. ಅಷ್ಟೇ ಅಲ್ಲ, ಆಪ್ ಡೇವಲಪರ್ಸ್ ಗಳಿಂದ ಆಪಲ್ ಸ್ಟೋರ್ಸ್ 3% ಕಮೀಷನ್ ಪಡೆದರೆ ಗೂಗಲ್ 15-30% ಪಡೆಯುತ್ತದೆ ಯಂತೆ. ಇದೂ ಕೂಡ ನಿಯಮೋಲ್ಲಂಘನೆ. ಯುರೋಪಿನಲ್ಲೂ ದಂಡ ಗೂಗಲ್ ಕಂಪನಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ಹೊರದೇಶಗಳಲ್ಲೂ ಕೂಡ ಈ ತರಹದ ದಂಡದ ಬಿಸಿ ತಾಗಿದೆ. ಯುರೋಪಿನಲ್ಲಂತೂ ಒಮ್ಮೆ ಕೈ ಸುಟ್ಟಿಕೊಂಡಾಗಿದೆ. 2018ರಲ್ಲಿ ಇದೇ ಆಂಡ್ರಾಯ್ಡ್ ವಿಷಯದಲ್ಲಿ ಗೂಗಲ್ ಕಂಪನಿಯ ಮೇಲೆ 4.3 ಬಿಲಿಯನ್ ಯುರೋ ದಂಡ ವಿಧಿಸಲಾಗಿತ್ತು. ಭಾರತದಲ್ಲಿನ ಹಣ ಚಲಾವಣೆಯ ಮೌಲ್ಯದಲ್ಲಿ ತುಲನೆ ಮಾಡಿದರೆ ಅದು ಸುಮಾರು ನಲವತ್ತು ಸಾವಿರ ಕೋಟಿ! ಇದು ಇಲ್ಲಿಯ ತನಕ ಯಾವುದೇ ಕಂಪನಿಯ ಮೇಲೆ ಪ್ರತಿಸ್ಪರ್ಧಿ ಕಾನೂನಿನಡಿಯಲ್ಲಿ ಹೇರಿದ ಅತಿ ಹೆಚ್ಚು ದಂಡ. ಇದಕ್ಕೂ ಮೊದಲು 2017ರಲ್ಲಿ ಆನ್‌ಲೈನ್ ಶಾಪಿಂಗ್ ರಿವ್ಯೂ ಕುರಿತಾಗಿ ಸುಮಾರು ಇಪ್ಪತ್ತು ಸಾವಿರ ಕೋಟಿ ಯುರೋ ದಂಡ, 2019ಲ್ಲಿ ಡಿಜಿಟಲ್ ಜಾಹೀರಾತು ವಿಷಯಕ್ಕಾಗಿ ಹೀಗೆ ಹಲವಾರು ಬಾರಿ ಯುರೋಪಿಯನ್ ಒಕ್ಕೂಟದ ಕಡೆಯಿಂದ ಗೂಗಲ್ ಕಂಪನಿಯ ಮೇಲೆ ದಂಡ ಬಿದ್ದಿದೆ. ರಷ್ಯಾ, ದಕ್ಷಿಣ ಕೊರಿಯಾ, ಮಲೇಷಿಯಾ ಹೀಗೆ ಹಲವಾರು ದೇಶಗಳು ವಿವಿಧ ಕಾರಣಗಳಿಂದಾಗಿ ಗೂಗಲ್ ಮೇಲೆ ದಂಡ ವಿಧಿಸಿದೆ. ಇವರ ಮಾಹಿತಿ ದುರುಪಯೋಗದ ಉದ್ದೇಶ ಅರಿತು ೨೦೧೦ರಲ್ಲಿಯೇ ಚೀನಾ ಗೂಗಲ್‌ನ್ನು ನಿಷೇಧ ಮಾಡಿದೆ. ಆದರೂ ಬುದ್ಧಿ ಬಂದಿಲ್ಲ? ನಮಗೇನು ಗೊತ್ತು- ದಂಡವು ಲಾಭವನ್ನು ಕೊಚ್ಚಿಕೊಂಡು ಹೋಗುವ ಬದಲು ನಿಯಮ ಮುರಿದು ನಡೆಸಿದ ವ್ಯಾಪಾರದಿಂದ ಆದ ಬೃಹತ್ ಲಾಭವೇ ಸಣ್ಣ ಪಟ್ಟ ದಂಡವನ್ನು ಕೊಚ್ಚಿಕೊಂಡು ಹೋಗುತ್ತಿರಬಹುದು! ವಸೂಲಾತಿ ಕಷ್ಟ! ಆದರೆ ಇಲ್ಲಿಯವರೆಗೆ ಎಷ್ಟು ದಂಡ ವಸೂಲಾಗಿದೆ ಗೊತ್ತಾ? ಕೇವಲ ಅರವತ್ತು ಕೋಟಿ ಅಂದರೆ ೧% ಗೂ ಕಡಿಮೆ! ‘ಮಿಂಟ್’ ಎನ್ನುವ ದಿನ ಪತ್ರಿಕೆಯ ಶೀರ್ಷಿಕೆಯನ್ನು ಇಲ್ಲಿ ಉಲ್ಲೇಖಿಸಬಹುದು - ‘ಭಾರತದ ಸ್ಪರ್ಧಾತ್ಮಕ ನಿಯಮ ಸಮಿತಿಯು ಕೇವಲ ಬೊಗಳುತ್ತದೆ, ಕಚ್ಚುವುದಿಲ್ಲ.’ ಇದಕ್ಕೆ ಕಾರಣ ನಮ್ಮ ನ್ಯಾಯಾಂಗ ವ್ಯವಸ್ಥೆ. ಹೇಳಿ ಕೇಳಿ ಈ ಸಮಿತಿಯು ಸರಕಾರಿ ಸಂಸ್ಥೆ. ಅವರು ಗೂಗಲ್‌ನಂತಹ ಗೂಳಿಯ ಕೊಂಬಿಗೆ ತನ್ನ ಕೊಂಬನ್ನು ಸಿಕ್ಕಿಸಿ ಎದರು ನಿಲ್ಲುವುದೇ ಮಹಾಕಾರ್ಯ. ನಂತರ, ದೈತ್ಯ ಕಂಪನಿ ಯು ಅನುಸರಿಸುವ ಕಾನೂನು, ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ ಎನ್ನುವಷ್ಟರಲ್ಲಿ ಪ್ರಕರಣ ಭೂಗತವಾಗಿ ಬಿಡುತ್ತದೆ. ಭವಿಷ್ಯದ ಹಿತಾದೃಷ್ಟಿಯಿಂದ ಪ್ರತಿಸ್ಪರ್ಧೆ ಕಾನೂನು ಯಾಕೆ ಮುಖ್ಯ! ಕೆಲವು ವರ್ಷಗಳ ಹಿಂದೆ ‘ಇಪ್ಪತ್ತೊಂದನೇ ಶತಮಾನ ದಲ್ಲಿ ಸ್ಪರ್ಧಾತ್ಮಕತೆ ಹಾಗೂ ಗ್ರಾಹಕರ ಭದ್ರತೆ’ಯ ವಿಷಯದ ಕುರಿತು ಅಮೆರಿಕ ಹಾಗೂ ಯುರೋಪಿಯನ್ ದೇಶಗಳಲ್ಲಿ ಸುದೀರ್ಘ ಚರ್ಚೆಯಾಗಿತ್ತು. ಇಂದು ಡಿಎನ್‌ಎ (ಡಾಟಾ, ನೆಟ್ವರ್ಕ್, ಹಾಗೂ ಆಕ್ಟಿವಿಟಿ) ಸುರಳಿ ಯಾವುದೇ ದೇಶಕ್ಕೆ ಹಾಗೂ ಅಲ್ಲಿನ ಪ್ರಜೆಗಳಿಗೆ ಪಾಶವಾಗಬಲ್ಲದು. ಜಾಕ್ ಮಾ ಸಂಸ್ಥಾಪಿಸಿದ ಅಲಿಬಾಬಾ ಕಂಪನಿಯ ಆಂಟ್ ಫೈನಾನ್ಷಿಯಲ್ ಒಂದು ಉದಾಹರಣೆ. ಅದನ್ನು ಚೀನಾ ಹೇಗೆ ಮಟ್ಟ ಹಾಕಿತು ಎನ್ನುವುದು ನಮಗೆ ಗೊತ್ತು. ಇಂದು ಭಾರತದಲ್ಲಿ ಕೂಡ ಈ ತರಹದ ಒಂದು ಸುರುಳಿ ಸುತ್ತಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ರಿಲಯನ್ಸ್ ತಾಜಾ ನಿದರ್ಶನ. ಜೀಯೋ, ರೀಟೇಲ್ ಹಾಗೂ ಮುಂದೆ ಬರುವ ಜಿಯೋ ಫೈನಾನ್ಷಿಯಲ್ ನಮ್ಮ ದೇಶ ದಲ್ಲಿನ ಸ್ಪರ್ಧಾತ್ಮಕ ಮಾರುಕಟ್ಟೆಗೆ ಪಾಶವಾಗಬಲ್ಲದು. ಉಪ್ಪಿನ ಉತ್ಪಾದನೆಯಿಂದ ಹಿಡಿದು ವಿಮಾನವನ್ನು ತಯಾರಿಸುವ ತನಕ ಎಲ್ಲ ಕ್ಷೇತ್ರಗಳಲ್ಲಿ ಟಾಟಾ ಕಂಪನಿಯಿದೆ. ಕಳೆದ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲಿ ಪ್ರತಿಸ್ಪರ್ಧಿ ಕಾನೂನನ್ನು ಟಾಟಾ ಉಲ್ಲಂಗಿಸಿದ ದಾಖಲೆ ಇಲ್ಲ. ಒಂದೋ, ಎರಡೋ ಇದ್ದರೆ ಅದು ಅಪವಾದ. ಆದರೆ ರಿಲಾಯನ್ಸ್ ಜಿಯೋ ಮೇಲೆ ಈಗಾಗಲೇ ಒಮ್ಮೆ ಪ್ರಕರಣ ದಾಖಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ತೋರುತ್ತಿರುವ ಕೆಲವೊಂದು ಬೃಹತ್ ಕಂಪನಿಗಳ ನಡೆ ನೋಡಿದರೆ ನಾಳೆಯ ಬಗ್ಗೆ ಭಯ ಉಂಟಾಗುತ್ತದೆ. ‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್’, ಎನ್ನುವುದು ಈಗ ಪ್ರಚಲಿತದಲ್ಲಿರುವ ಘೋಷಣೆ. ಅದನ್ನು ಭಾರತದ ಎಲ್ಲ ಕಂಪನಿಗಳೂ ತಮ್ಮ ‘ಲಾಭ’ ಉದ್ದೇಶಿತ ವ್ಯಾಪಾರದಲ್ಲಿ ಅನ್ವಯಗೊಳಿಸಬೇಕು. ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿಕೊಡಬೇಕು, ತಮ್ಮ ತಂತ್ರಜ್ಞಾನ ಅಥವಾ ಆರ್ಥಿಕ ಪ್ರಾಬಲ್ಯವನ್ನು ಇನ್ನೊಬ್ಬರ ಮೇಲೆ ಹೇರಿ ಅವರನ್ನು ಓಟದ ಜಾಡಿನಿಂದೇ ಹೊರಗಿಡಬಾರದು. ನಾವು, ನಮ್ಮ ಸಮಾಜ, ದೇಶದ ಸಂವಿಧಾನ ಹಾಗೂ ಕಂಪನಿ ಇವುಗಳ ನಡುವಿನ ಒಡನಾಟವನ್ನು ಅವಲೋಕಿಸಿದಾಗ, ಗೂಗಲ್ ವಿರುದ್ಧದ ಸಿಸಿಐ ನಡೆಯನ್ನು ನಿರ್ಲಕ್ಷಿಸಬಾರದು. ಹಾಗೆಯೇ ವಿಷಯವೂ. ಕೇವಲ ಸುದ್ದಿಯ ಬರಹವಾಗಿ ಮೂಡಿ ಸಂಜೆ ಯಾಗುವುದರೊಳಗೆ ಹಳತಾಗಬಾರದು. ಸಮಾಜದಲ್ಲಿ ನಮ್ಮೆಲ್ಲರ ಜೊತೆ ಈ ಪ್ರಶ್ನೆಗಳು ಚರ್ಚೆಯಾಗಿ ಹೊರಬರಬೇಕು ಎನ್ನುವುದು  ಆಶಯ. ಈ ಶತಮಾನ ಭಾರತದ್ದೇ ಎನ್ನುವ ನಮಗೆ ಇಲ್ಲಿ ವ್ಯಾಪಾರದಲ್ಲಿ ನೈತಿಕತೆ, ಗ್ರಾಹಕರ ಭದ್ರತೆ ಎರಡೂ ಬಹುಮುಖ್ಯ. ಎಲ್ಲಿಯವರೆಗೆ ಸ್ಪರ್ಧೆ ಇದೆಯೋ ಅಲ್ಲಿಯ ತನಕ ಉತ್ಕೃಷ್ಟವಾದ ಸೇವೆ ಇರುತ್ತದೆ, ಇಲ್ಲವಾದರೆ ಪಾಲಿಗೆ ಬಂದದ್ದು ಪಂಚಾಮೃತವೇ ಎಂದುಕೊಂಡು ಬದುಕಬೇಕು. ಕಾಲ ಮಿಂಚುವ ಮೊದಲು ಈ ವಿಚಾರ ನಮ್ಮನ್ನು ಎಚ್ಚರಿಸಲಿ. (ಪ್ರತಿಕ್ರಿಯಿಸಿ : qಜ್ಟಿZಞZmಟoಠಿಃಜಞZಜ್ಝಿ.ಟಞ) ಒಟ್ಟು 177 ಬಾರಿ ದಂಡ! ಭಾರತದಲ್ಲಿ ಸಿಸಿಐ ದಂಡ ವಿಧಿಸಿದ್ದು ಇದೇ ಮೊದಲಲ್ಲ. 2011ರಲ್ಲಿ ಸ್ಥಾಪನೆಯಾದಾಗಿನಿಂದ 2019ರವರೆಗಿನ ಸಾಧನೆ ನೋಡಿ ದಾಗ ಇಲ್ಲಿಯವರೆಗೆ ಒಟ್ಟೂ 177 ಕೇಸುಗಳು ದಾಖಲಾಗಿವೆ. ಹದಿನಾಲ್ಕು ಆಟೊಮೊಬೈಲ್ ಕಂಪನಿಗಳ ವಿರುದ್ಧ ನಡೆದ ಪ್ರಕರಣ, ಸಿಮೆಂಟ್ ಕಂಪನಿಗಳ ಮೇಲೆ ಆದ ಆರೋಪ, ಜೀಯೋ ಹಾಗೂ ಉಳಿದ ಟೆಲಿಕಾಂ ಕಂಪನಿಗಳ ಸಂಘರ್ಷ ಕೆಲವು ಮುಖ್ಯ ಉದಾಹರಣೆ ಅಷ್ಟೇ. ಸಿಸಿಐ ಪ್ರಕಾರ ಈ ಎಲ್ಲ ಕೇಸುಗಳಿಂದ ಸುಮಾರು ಹದಿನಾಲ್ಕು ಸಾವಿರ ಕೋಟಿ ರುಪಾಯಿ ಬರಬೇಕು. ಈಗಿನ ಗೂಗಲ್ ಕೇಸ್ ಸೇರಿದರೆ ಹದಿನಾರು ಸಾವಿರ ಕೋಟಿ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ