GST: ಹೇಗೆ ಅರ್ಥಪೂರ್ಣ ಜಿ.ಎಸ್.ಟಿ. ನೀತಿಯು ಭಾರತದ ಮೊಬಿಲಿಟಿ ಕ್ರಾಂತಿಯನ್ನು ಮುನ್ನಡೆಸಬಲ್ಲದು ?
ಡಿಸ್ಕವರಬಿಲಿಟಿ ಸೇವೆಗಳನ್ನು ಒದಗಿಸುತ್ತಿರುವ ತಂತ್ರಜ್ಞಾನ ವೇದಿಕೆಗಳು ಮತ್ತು ವಹಿವಾಟು ಗಳನ್ನು ಪೂರೈಸುವ ಮಾರುಕಟ್ಟೆಗಳಾಗಿ ಕೆಲಸ ಮಾಡುವವರ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಂಡುಕೊಳ್ಳ ಬೇಕಿದೆ. ರೈಡ್ ಒದಗಿಸುವ ಪ್ಲಾಟ್ ಫಾರಂಗಳು ಚಾಲಕರನ್ನು ರೈಡರ್ ಗಳೊಂದಿಗೆ ಸಂಪರ್ಕಿಸುತ್ತವೆ


ಜಿ.ಎಸ್.ಟಿ. ಮುಂಗಡ ನಿಯಮಗಳನ್ನು ರೂಪಿಸುವ ಸಂಸ್ಥೆಗಳ ಗೊಂದಲದ ನಿರ್ಧಾರಗಳು ಭಾರತದ ವೃದ್ಧಿಸುತ್ತಿರುವ ಡಿಜಿಟಲ್ ಇಕಾನಮಿಯ ಮೇಲೆ ತೆರಿಗೆಯ ಪರಿಣಾಮದ ಕುರಿತು ಪ್ರಮುಖ ಚರ್ಚೆಗಳನ್ನು ಹುಟ್ಟುಹಾಕಿದೆ. `ಡಿಸ್ಕವರಬಿಲಿಟಿ’ಯನ್ನು `ಆರ್ಡರ್ ಫುಲ್ ಫಿಲ್ ಮೆಂಟ್’ ಎಂದು ವ್ಯಾಖ್ಯಾನಿಸುವ ಮೂಲಕ ಈ ನಿಯಮಗಳು ವಿವಿಧ ವ್ಯಾಪಾರ ಮಾದರಿಗಳಿಗೆ ಜಿ.ಎಸ್.ಟಿ. ಹೇಗೆ ಅನ್ವಯಿಸುತ್ತದೆ ಎನ್ನುವುದರ ಕುರಿತು ಮತ್ತು ಆರ್ಥಿಕ ಪ್ರಗತಿ ಮತ್ತು ಒಳಗೊಳ್ಳುವಿಕೆ ಕುರಿತಾದ ಅದರ ಪರಿಣಾಮ ಕುರಿತಾದ ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ.
ಡಿಸ್ಕವರಬಿಲಿಟಿ ಸೇವೆಗಳನ್ನು ಒದಗಿಸುತ್ತಿರುವ ತಂತ್ರಜ್ಞಾನ ವೇದಿಕೆಗಳು ಮತ್ತು ವಹಿವಾಟು ಗಳನ್ನು ಪೂರೈಸುವ ಮಾರುಕಟ್ಟೆಗಳಾಗಿ ಕೆಲಸ ಮಾಡುವವರ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಂಡುಕೊಳ್ಳಬೇಕಿದೆ. ರೈಡ್ ಒದಗಿಸುವ ಪ್ಲಾಟ್ ಫಾರಂಗಳು ಚಾಲಕರನ್ನು ರೈಡರ್ ಗಳೊಂದಿಗೆ ಸಂಪರ್ಕಿಸುತ್ತವೆ. ಚಂದಾದಾರಿಕೆ ಆಧರಿತ ಸಾಸ್ (SaaS) ಮಾದರಿಯಲ್ಲಿ ಚಾಲಕರು ಈ ಪ್ಲಾಟ್ ಫಾರಂ ಬಳಸಲು ನಿಶ್ಚಿತ ಶುಲ್ಕ ಪಾವತಿಸಿ, ಪ್ರತಿ-ರೈಡ್ ಕಮಿಷನ್ ಗಳನ್ನು ತಪ್ಪಿಸಿಕೊಳ್ಳುತ್ತಾರೆ ಮತ್ತು ಸರಳೀಕರಿಸಿದ ವೆಚ್ಚದ ರಚನೆ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಡಿಸ್ಕವರಬಿಲಿಟಿ ಆಚೆಗೆ ಹೋಗುವ ಮಾರುಕಟ್ಟೆಗಳು, ಪಾವತಿಗಳ ನಿರ್ವಹಣೆ, ಲಾಜಿಸ್ಟಿಕ್ಸ್, ಗ್ರಾಹಕರ ಫೀಡ್ ಬ್ಯಾಕ್ ಮತ್ತು ದೂರುಗಳ ಮೂಲಕ ಹೆಚ್ಚು ಸಮಗ್ರ ಇಕೊಸಿಸ್ಟಂ ಸೃಷ್ಟಿಸುತ್ತವೆ.
ಜಿ.ಎಸ್.ಟಿ. ಈ ವ್ಯತ್ಯಾಸಗಳನ್ನು ಕಾಣಬೇಕು. ಚಂದಾದಾರಿಕೆಯನ್ನು ಆಧರಿಸಿದ ಸಾಸ್ ಮಾದರಿ ಯಲ್ಲಿ ಚಂದಾದಾರಿಕೆ ಶುಲ್ಕಕ್ಕೆ ಮಾತ್ರ ತೆರಿಗೆ ವಿಧಿಸಬೇಕು, ಮಾರ್ಕೆಟ್ ಪ್ಲೇಸ್ ಮಾರಿಯಲ್ಲಿ ಮೌಲ್ಯ ಸರಣಿಯಾದ್ಯಂತ ತೆರಿಗೆ ವಿಧಿಸುವುದು ಒಳಗೊಂಡಿರುತ್ತದೆ, ಅದರಲ್ಲಿ ಚಾಲಕರು ಮತ್ತು ರೈಡರ್ ಗಳು ಇಬ್ಬರು ಪಾವತಿಸುವ ಶುಲ್ಕಗಳಿರುತ್ತವೆ. ಗೊಂದಲ ನಿವಾರಿಸುವ ಮತ್ತು ನ್ಯಾಯೋಚಿತ ವಿಧಾನ ಅಗತ್ಯವಾಗಿದೆ.
ಭಾರತದ ಮೊಬಿಲಿಟಿ ಮಾರುಕಟ್ಟೆಯ ಸಾಮರ್ಥ್ಯದ ಕಾರಣದಿಂದ ಸ್ಪಷ್ಟತೆ ನೀಡುವುದು ಮುಖ್ಯ ವಾಗಿದೆ. ಅಂದಾಜು 1.5-1.7 ಕೋಟಿ ಚಾಲಕರಿದ್ದು ಅದರಲ್ಲಿ ಇವಿ ಕ್ರಾಂತಿಯಲ್ಲಿ ಸೇರಿರುವವರೂ ಇದ್ದಾರೆ ಮತ್ತು ಹೆಚ್ಚು ಮಹಿಳೆಯರು ಈ ಕಾರ್ಯಪಡೆ ಸೇರುತ್ತಿದ್ದಾರೆ, ರೈಡ್-ಹೈಲಿಂಗ್ ಸೇವೆಗಳು ಗಮನಾರ್ಹ ಆದಾಯದ ಅವಕಾಶಗಳನ್ನು ಸೃಷ್ಟಿಸಬಲ್ಲವು. ಬೆಂಬಲದ ಜಿ.ಎಸ್.ಟಿ.ನೀತಿಯು ಚಾಲಕರಿಗೆ ಪ್ರವೇಶದ ವೆಚ್ಚವನ್ನು ಕಡಿಮೆ ಮಾಡಬಲ್ಲದು, ಸ್ಪರ್ಧೆ ಉತ್ತೇಜಿಸಬಲ್ಲದು ಮತ್ತು ರೈಡ್ ಬೆಲೆಗಳನ್ನು ಕಡಿಮೆ ಮಾಡಬಲ್ಲದು, ಇದರಿಂದ ಗ್ರಾಹಕರಿಗೆ ನಗರ ಚಲನೆ ಹೆಚ್ಚು ಕೈಗೆಟುಕು ವಂತಾಗುತ್ತದೆ.
ಹಣದುಬ್ಬರ ಮತ್ತು ಜೀವನದ ವೆಚ್ಚಗಳು ಸಾರ್ವಜನಿಕರಲ್ಲಿ ಹೆಚ್ಚಿನ ಕಾಳಜಿಯುಂಟು ಮಾಡು ತ್ತಿರುವಾಗ ಚಲನೆಯ ವೆಚ್ಚಗಳನ್ನು ನಿರ್ವಹಿಸುವಂತೆ ಇರಿಸುವುದು ಬಹಳ ಮುಖ್ಯ. ಸಾಸ್ ಪ್ರೇರಿತ ಮಾದರಿಯು ಚಾಲಕರ ಭಾಗವಹಿಸುವಿಕೆಗೆ ಸರಳ ಮತ್ತು ಪರಿಣಾಮಕಾರಿ ವಿಧಾನ ಒದಗಿಸುತ್ತದೆ ಮತ್ತು ರೈಡ್ ಬೆಲೆಗಳನ್ನು ಕಡಿಮೆ ಇರಿಸಿ ಚಾಲಕರು ಮತ್ತು ನಗರದ ಜನರಿಗೆ ಅನುಕೂಲ ಕಲ್ಪಿಸುತ್ತದೆ.
ದೀರ್ಘಾವಧಿಯಲ್ಲಿ ಸದೃಢ ಮತ್ತು ಎಲ್ಲರನ್ನೂ ಒಳಗೊಳ್ಳುವ ಡಿಜಿಟಲ್ ಅರ್ಥವ್ಯವಸ್ಥೆ ನಿರ್ಮಿ ಸುವುದು ಆದ್ಯತೆಯಾಗಬೇಕು. ಭಾರತವು ಈಗಾಗಲೇ ಪಾವತಿಗಳು ಮತ್ತು ಇ-ಕಾಮರ್ಸ್ ನಲ್ಲಿ ಕ್ರಮವಾಗಿ ಎನ್.ಪಿ.ಸಿ.ಐ ಮತ್ತು ಒ.ಎನ್.ಡಿ.ಸಿ.ಯಂತಹ ಉಪಕ್ರಮಗಳಿಂದ ಯಶಸ್ಸು ಸಾಧಿಸಿದೆ. ರೈಡ್-ಹೈಲಿಂಗ್ ನಲ್ಲಿ ಸಾಸ್ ನಂತ ಮಾದರಿಗಳನ್ನು ಬೆಂಬಲಿಸುವ ಮೂಲಕ ಮಾರುಕಟ್ಟೆ ಶಕ್ತಿಯ ಕೇಂದ್ರೀಕರಣ ನಿವಾರಿಬಹುದು, ಸ್ಪರ್ಧೆ ಉತ್ತೇಜಿಸಬಹುದು ಮತ್ತು ಪ್ರಜಾಸತ್ತೀಯ ಮತ್ತು ಲಭ್ಯ ಡಿಜಿಟಲ್ ಅರ್ಥವ್ಯವಸ್ಥೆಯ ಗುರಿಯನ್ನು ಸಾಧಿಸಬಹುದು.
ಜಿ.ಎಸ್.ಟಿ. ಕೌನ್ಸಿಲ್ ಗೆ ಆವಿಷ್ಕಾರಕ ಉದ್ಯಮ ಮಾದರಿಗಳ ವಿಶಿಷ್ಟ ಪ್ರಯೋಜನಗಳನ್ನು ಗುರುತಿ ಸುವ ಮೂಲಕ ಮುನ್ನಡೆಯುವ ಅವಕಾಶವಿದೆ. ಎಲ್ಲ ಪ್ಲಾಟ್ ಫಾರಮಗಳನ್ನೂ ಜಿ.ಎಸ್.ಟಿ. ಫ್ರೇಮ್ ವರ್ಕ್ ಅಡಿಯಲ್ಲಿ ಗುರುತಿಸುವುದು ಆವಿಷ್ಕಾರ ಮತ್ತು ಆದಾಯ ಸೃಷ್ಟಿಸುವುದಕ್ಕೆ ಅಡ್ಡಿ ಯುಂಟು ಮಾಡುತ್ತದೆ. ದೂರದೃಷ್ಟಿಯ ಜಿ.ಎಸ್.ಟಿ. ನೀತಿಯು ಭಾರತದ ಆರ್ಥಿಕ ಪ್ರಗತಿ, ಒಳ ಗೊಳ್ಳುವಿಕೆ ಮತ್ತು ಸದೃಢ ಡಿಜಿಟಲ್ ಅರ್ಥವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
ಡಾ.ನವನೀತ್ ಶರ್ಮಾ ಸ್ಪರ್ಧಾತ್ಮಕ ನೀತಿಯ ಪರಿಣಿತರು