Child Marriage: ಬಾಲ್ಯ ವಿವಾಹ: ರಾಜಧಾನಿಗೆ ಕುಖ್ಯಾತಿ
ಕಳೆದ ಮೂರು ವರ್ಷಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ವಾಗಿದ್ದು, ರಾಜ್ಯಾದ್ಯಂತ ಬರೋಬ್ಬರಿ 33621 ಪ್ರಕರಣಗಳು ದಾಖಲಾಗಿವೆ. 2021-22 ಮತ್ತು 2023-24ರ ನಡುವೆ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ. ದಶಕದ ಅಂಕಿ ಅಂಶಗಳನ್ನು ಗಮನಿಸಿ ದರೆ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಬಾಲ್ಯ ವಿವಾಹಗಳಾಗಿವೆ.
ಅಪರ್ಣಾ ಎ.ಎಸ್. ಬೆಂಗಳೂರು
ರಾಜ್ಯಾದ್ಯಂತ 3 ವರ್ಷಗಳಲ್ಲಿ 33621 ಬಾಲ್ಯ ವಿವಾಹ
ಬೆಂಗಳೂರಲ್ಲೇ 4324 ಪ್ರಕರಣ
ಓದುತ್ತಾ, ಆಡುತ್ತಾ ನಲಿಯುತ್ತಿರಬೇಕಾದ ವಯಸ್ಸಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವ ಮೂಲ ಕ ಅರಳಿ ನಲಿಯ ಬೇಕಾದ ವಯಸ್ಸಿನಲ್ಲೇ ಬಾಡಿಹೋಗಲು ಕಾರಣವಾಗುತ್ತಿರುವ ಬಾಲ್ಯ ವಿವಾಹದ ಪ್ರಕರಣಗಳು ರಾಜ್ಯದಲ್ಲಿ ಇನ್ನೂ ದಾಖಲಾಗುತ್ತಲೇ ಇವೆ. ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ.
ಕಳೆದ ಮೂರು ವರ್ಷಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ವಾಗಿದ್ದು, ರಾಜ್ಯಾದ್ಯಂತ ಬರೋಬ್ಬರಿ 33621 ಪ್ರಕರಣಗಳು ದಾಖಲಾಗಿವೆ. 2021-22 ಮತ್ತು 2023-24ರ ನಡುವೆ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ. ದಶಕದ ಅಂಕಿ ಅಂಶಗಳನ್ನು ಗಮನಿಸಿ ದರೆ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಬಾಲ್ಯ ವಿವಾಹಗಳಾಗಿವೆ.
ಇದನ್ನೂ ಓದಿ: Child Marriage: ಸಾಲ ವಾಪಸ್ ಕೊಡದ್ದಕ್ಕೆ 17 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾದ ಭೂಪ!
ಬೆಂಗಳೂರಿನಲ್ಲಿ 4324 ಬಾಲ್ಯ ವಿವಾಹಗಳು ನಡೆದಿವೆ. ನಂತರದ ಸ್ಥಾನದಲ್ಲಿ ವಿಜಯನಗರ (2468), ಬಳ್ಳಾರಿ (2283), ಬೆಳಗಾವಿ (2224) ಮತ್ತು ಮೈಸೂರು (1930) ಇವೆ.
ಬಾಲ್ಯ ವಿವಾಹಕ್ಕೆ ಕಾರಣಗಳೇನು: ಹೆಣ್ಣು ಹೆತ್ತವರು ಬಹಳ ಬೇಗ ಜವಾಬ್ದಾರಿ ಕಳೆದು ಕೊಳ್ಳುವ ಉದ್ದೇಶದಿಂದ ಹಾಗೂ ಹೆಣ್ಣು ಮಕ್ಕಳು ಹಾದಿ ತಪ್ಪಿದರೆ ಎಂಬ ಭೀತಿಯಿಂದ ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ವಿವಾಹ ಮಾಡಲಾಗುತ್ತಿದೆ. ಆರ್ಥಿಕ ಸಂಕಷ್ಟ, ಸಾಲದ ಕಾರಣಕ್ಕೆ ಹದಿನೈದು-ಹದಿನಾರು ವರ್ಷದ ಬಾಲಕಿಯರನ್ನು 35-37 ವರ್ಷದ ವರನಿಗೆ ಕೊಟ್ಟು ಮದುವೆ ಮಾಡುತ್ತಿರುವ ಸಂಗತಿಗಳೂ ಬೆಳಕಿಗೆ ಬಂದಿವೆ.
ಇಂದಿನ ಬದಲಾದ ಆಹಾರ ಪದ್ಧತಿಯಿಂದಾಗಿ ಹೆಣ್ಣು ಮಕ್ಕಳು ಬಹಳ ಬೇಗ ಋತುಮತಿ ಯಾಗುತ್ತಿದ್ದು, ಆಕೆ ವಾಸಿಸುತ್ತಿರುವ ಪರಿಸರದ ಸುತ್ತ ಆಗಿರುವ ಬದಲಾವಣೆಗಳು, ಪೋಷಕರು ಹೆಣ್ಣು ಮಕ್ಕಳ ಮೇಲೆ ಹೆಚ್ಚು ಕಾಳಜಿ ವಹಿಸದೆ ನಿಯಂತ್ರಣ ಕಳೆದುಕೊಂಡಿರುವುದು ಹೀಗೆ ಹಲವಾರು ಕಾರಣಗಳಿಂದ ಬಾಲ್ಯ ವಿವಾಹಗಳು ನಡೆಯುತ್ತಿವೆ.
ಕಠಿಣ ಕಾನೂನಿದ್ದರೂ ಭಯವಿಲ್ಲ: ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಿಂದ ಬಾಲ್ಯ ವಿವಾಹ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಪೊಲೀಸ್ ಇಲಾಖೆ ಪೋಕ್ಸೊ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದ್ದರೂ ಬಾಲ್ಯ ವಿವಾಹಗಳು ನಿರಂತರವಾಗಿವೆ.
ಗ್ರಾಮ ಪಂಚಾಯಿತಿಗಳ ಮೂಲಕ ಬಾಲ್ಯ ವಿವಾಹ ನಿಷೇಧ ಮತ್ತು ಅದರಿಂದಾಗುತ್ತಿರುವ ಪರಿಣಾಮ, ಸಹಾಯವಾಣಿ ಸಂಖ್ಯೆ ಸೇರಿದಂತೆ ಹಲವು ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಸಾಧ್ಯವಾಗುತ್ತಿಲ್ಲ. ಕುಟುಂಬದ ಅಸ್ಥಿರತೆ ಮತ್ತು ಸಮಗ್ರ ಲೈಂಗಿಕ ಶಿಕ್ಷಣದ ಕೊರತೆಯಿಂದಾಗಿ ಬಾಲ್ಯ ವಿವಾಗಳು ಹೆಚ್ಚಾಗಲು ಒಂದು ಕಾರಣ ಎನ್ನಲಾಗಿದೆ.
ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರ ಹಲವು ಕ್ರಮ ಕೈಗೊಂಡಿದ್ದರೂ ಬಡತನ, ಪೋಷಕರ ನಿರ್ಲಕ್ಷ್ಯ, ಸಾಮಾಜಿಕ ಪರಿಸ್ಥಿತಿ ಹಾಗೂ ಅಭದ್ರತೆ ಸೇರಿದಂತೆ ಹಲವು ಕಾರಣಗಳಿಂದಾಗಿ ನಡೆಯುತ್ತಿವೆ.
ಹೆಚ್ಚಿನ ಜಾಗೃತಿಗೆ ಯೋಜನೆ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಪೋರ್ಟಲ್ ಡೆಟಾ ಮಾಹಿತಿ ಯಂತೆ ಬಾಲ್ಯ ವಿವಾಹ ಪ್ರಕರಣಗಳು ಏರಿಳಿತವಾಗಿದೆ. 2021-22ರಲ್ಲಿ 11792 ಬಾಲ್ಯ ವಿವಾಹ ಪ್ರಕರಣಗಳಿದ್ದರೆ, 2022-23ರಲ್ಲಿ 13198ಕ್ಕೆ ಏರಿಕೆಯಾಗಿದೆ. ನಂತರ 2023-24ರಲ್ಲಿ 8631ಕ್ಕೆ ಇಳಿಕೆ ಯಾಗಿದೆ.
ವಿವಿಧ ಎನ್‌ಜಿಒಗಳು ಮತ್ತು ಕೆಎಸ್‌ಪಿಸಿಆರ್ ಸಹಯೋಗದೊಂದಿಗೆ 2025-26ನೇ ಶೈಕ್ಷಣಿಕ ವರ್ಷ ದಲ್ಲಿ ಹೆಚ್ಚಿನ ಜಾಗೃತಿಕಾರ್ಯಕ್ರಮಗಳನ್ನು ಪ್ರಾರಂಭಿಸಲು ಸರಕಾರ ಯೋಜನೆ ರೂಪಿಸಿದೆ ಎನ್ನಲಾಗಿದೆ.