Sanam Teri Kasam: ಅಂದು ಫ್ಲಾಪ್ ಇಂದು ಮೆಗಾ ಹಿಟ್; ಬರೋಬ್ಬರಿ 9 ವರ್ಷಗಳ ಬಳಿಕ ರೀ ರಿಲೀಸ್ ಆದ ಸಿನಿಮಾ ಗಳಿಸಿದೆಷ್ಟು?
ಮೊದಲು ಬಿಡುಗಡೆ ಆದಾಗ ಫ್ಲಾಪ್ ಆಗಿ ಕೆಲ ವರ್ಷಗಳ ನಂತರ ಮರು ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ಸಿನಿಮಾಗಳ ಸಂಖ್ಯೆ ಬಲು ವಿರಳ. ಅಂತಹ ಒಂದು ವಿಶೇಷ ದಾಖಲೆಯನ್ನು ಹಿಂದಿ ಸಿನಿಮಾ ಸನಮ್ ತೇರಿ ಕಸಮ್ ಮಾಡಿದೆ. ಬಿಡುಗಡೆಯಾಗಿ ಬರೋಬ್ಬರಿ 9 ವರ್ಷಗಳ ಬಳಿಕ ಭರ್ಜರಿ ಕಲೆಕ್ಷನ್ ಮಾಡಿದೆ.

ಸನಮ್ ತೇರಿ ಕಸಮ್ ಚಿತ್ರ

ನವದೆಹಲಿ: ಇತ್ತೀಚೆಗೆ ಸಿನಿಮಾ ಜಗತ್ತಿನಲ್ಲಿ ರೀ ರಿಲೀಸ್ ಟ್ರೆಂಡ್ ನಡೆಯುತ್ತಿದೆ. ಮೊದಲು ಬಿಡುಗಡೆ ಆದಾಗ ಫ್ಲಾಪ್ ಆಗಿ ಕೆಲ ವರ್ಷಗಳ ನಂತರ ಮರು ಬಿಡುಗಡೆ ಆದಾಗ ಬ್ಲಾಕ್ ಬಸ್ಟರ್ ಆದ ಸಿನಿಮಾಗಳ ಸಂಖ್ಯೆ ಬಲು ವಿರಳ. ಅಂತಹ ಒಂದು ವಿಶೇಷ ದಾಖಲೆಯನ್ನು ಹಿಂದಿ ಸಿನಿಮಾ ಸನಮ್ ತೇರಿ ಕಸಮ್ (Sanam Teri Kasam) ಮಾಡಿದೆ. ಬಿಡುಗಡೆಯಾಗಿ ಬರೋಬ್ಬರಿ 9 ವರ್ಷಗಳ ಬಳಿಕ ಭರ್ಜರಿ ಕಲೆಕ್ಷನ್ ಮಾಡಿದೆ. 2016 ರಲ್ಲಿ ಸನಮ್ ತೇರಿ ಕಸಮ್ ಬಿಡುಗಡೆಯಾಗಿತ್ತು. ಹರ್ಷವರ್ಧನ್ ರಾಣೆ, ಮಾರ್ವಾ ಹೊಕಾನೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
2016 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸುಮಾರು 20 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿತ್ತು. ಆದರೆ ಬಿಡುಗಡೆಯಾದ ನಂತರ, ಚಿತ್ರವು ಕೇವಲ 9 ಕೋಟಿ ರೂ.ಗಳನ್ನು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಚಿತ್ರದ ಕಥಾವಸ್ತು ಪ್ರೇಕ್ಷಕರಿಗೆ ಇಷ್ಟವಾದರೂ ಕೂಡ ಗಳಿಕೆ ಕಂಡಿರಲಿಲ್ಲ. ಬಾಲಿವುಡ್‌ನ ಅಂಡರ್ ರೇಟೆಡ್ ಚಿತ್ರಗಳ ಸಾಲಿನಲ್ಲಿ ಸೇರಿತ್ತು. ಸಿನಿಮಾಗೆ ಸರಿಯಾದ ಪ್ರಚಾರ ಸಿಗದ ಕಾರಣ ಸಿನಿಮಾ ಸೋಲು ಕಂಡಿದೆ ಎಂದು ವಿಮರ್ಶಕರು ಅಭಿಪ್ರಾಯ ಕೊಟ್ಟಿದ್ದರು.
ಇದೀಗ ಸಿನಿಮಾ ಮತ್ತೆ ಬಿಡುಗಡೆಗೊಂಡಿದೆ. ಫೆ. 7 ರಂದು ಚಿತ್ರ ರೀ ರಿಲೀಸ್ ಆಗಿದೆ. ಬಿಡುಗಡೆಯಾಗಿ ಕೇವಲ ಏಳು ದಿನಗಳಲ್ಲಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಬರೋಬ್ಬರಿ 30 ಕೋಟಿ ರೂಪಾಯಿ ಹಣ ಗಳಿಸಿದೆ. ಹಿಂದಿಯಲ್ಲಿ ಇತ್ತೀಚೆಗೆ ಮರು ಬಿಡುಗಡೆ ಆದ ಸಿನಿಮಾಗಳ ಪೈಕಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಸಾಲಿಗೆ ಸನಮ್ ತೇರಿ ಕಸಮ್ ಚಿತ್ರ ಸೇರಿದೆ. ರೀ ರಿಲೀಸ್ ಆದ ಮೊದಲ ದಿನವೇ ತನ್ನ ಹಿಂದಿನ ಗಳಿಕೆಯನ್ನು ಹಿಂದಿಕ್ಕಿದೆ.
ಈ ಸುದ್ದಿಯನ್ನೂ ಓದಿ: Jio Hotstar: ಜಿಯೋ ಸಿನಿಮಾ ಜತೆ ಹಾಟ್‌ಸ್ಟಾರ್ ವಿಲೀನ; ಪ್ರೇಕ್ಷಕರ ಜೇಬಿಗೆ ಬಿತ್ತು ಕತ್ತರಿ!
ಸೋಶಿಯಲ್ ಮೀಡಿಯಾದಲ್ಲಿ ಹವಾ !
ಸಿನಿಮಾ ಮತ್ತೆ ಬಿಡುಗಡೆಯಾಗಲು ಸಾಮಾಜಿಕ ಜಾಲತಾಣ ಕೂಡ ಒಂದು ಕಾರಣವಾಗಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಸದ್ಯ ಥಿಯೇಟರ್‌ಗಳ ಬಳಿ ಜನರು ಚಿತ್ರ ವೀಕ್ಷಿಸಲು ತೆರಳುತ್ತಿದ್ದಾರೆ. ಚಿತ್ರದ ನಾಯಕ ಹರ್ಷವರ್ಧನ ರಾಣೆ ಕೂಡ ಹಲವಾರು ಚಿತ್ರ ಮಂದಿರಗಳ ಬಳಿ ತೆರಳಿದ್ದಾರೆ. ಸದ್ಯ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಸನಮ್ ತೇರಿ ಕಸಮ್ ಹವಾ ಎಬ್ಬಿಸಿದ್ದಂತು ಸುಳ್ಳಲ್ಲ.