BBK 11: ವಾರದ ಕಟ್ಟಕಡೆಯ ನಾಮಿನೇಷನ್: ಎಲ್ಲರ ಟಾರ್ಗೆಟ್ ಈ ಓರ್ವ ಸ್ಪರ್ಧಿ
ಫಿನಾಲೆ ವೀಕ್ಗೆ ತಲುಪಲು ಮನೆಯಲ್ಲಿರುವ ಏಳು ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದಾರೆ. ಈ ವಾರ ಡಬಲ್ ನಾಮಿನೇಷನ್ ಇರುವ ಕಾರಣ ಸ್ಟ್ರಾಂಗ್ ರೀಸನ್ ಕೊಟ್ಟು ನಾಮಿನೇಟ್ ಮಾಡಲಾಗುತ್ತಿದೆ. ಇದರಲ್ಲಿ ಹೆಚ್ಚಿನವರು ತೆಗೆದುಕೊಂಡ ಹೆಸರು ಉಗ್ರಂ ಮಂಜು.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಉಳಿದಿದೆ. ಹೀಗಿರುವಾಗ ಈ ವಾರ ಮನೆಯಲ್ಲಿ ಕೆಲ ಊಹಿಸಲಾಗದ ಘಟನೆ ನಡೆಯಿತು. ಮಿಡಲ್ ವೀಕ್ ಎಲಿಮಿನೇಷನ್ನಿಂದ ಪಾರಾಗಲು ನೀಡಿದ ಟಾಸ್ಕ್ನಲ್ಲಿ ಧನರಾಜ್ ಆಚಾರ್ ಮೋಸ ಮಾಡಿದರು ಎಂಬ ಕಾರಣಕ್ಕೆ ಕೊನೆಹಂತದಲ್ಲಿ ಈ ಎಲಿಮಿನೇಷನ್ ಪ್ರಕ್ರಿಯೆಯನ್ನೇ ರದ್ದು ಮಾಡಲಾಯಿತು. ಜೊತೆಗೆ ವೀಕೆಂಡ್ನಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂಬ ಟ್ವಿಸ್ಟ್ ನೀಡಿದರು. ಇದರ ಮಧ್ಯೆ ಮತ್ತೊಮ್ಮೆ ಹೊಸ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ನಾಮಿನೇಷನ್ನಿಂದ ಇಮ್ಯುನಿಟಿ ಪಡೆದುಕೊಂಡಿದ್ದ ಧನರಾಜ್ ಕೂಡ ಸದ್ಯ ನಾಮಿನೇಷನ್ನ ಭಾಗವಾಗಿದ್ದಾರೆ. ಆದರೆ, ಇಲ್ಲಿ ಬಹುತೇಕ ಎಲ್ಲ ಸ್ಪರ್ಧಿಗಳ ಟಾರ್ಗೆಟ್ ಓರ್ವ ಸ್ಪರ್ಧಿಯೇ ಆಗಿದ್ದಾರೆ.
ಫಿನಾಲೆ ವೀಕ್ಗೆ ತಲುಪಲು ಮನೆಯಲ್ಲಿರುವ ಏಳು ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದಾರೆ. ಈ ವಾರ ಡಬಲ್ ನಾಮಿನೇಷನ್ ಇರುವ ಕಾರಣ ಸ್ಟ್ರಾಂಗ್ ರೀಸನ್ ಕೊಟ್ಟು ನಾಮಿನೇಟ್ ಮಾಡಲಾಗುತ್ತಿದೆ. ಇದರಲ್ಲಿ ಹೆಚ್ಚಿನವರು ತೆಗೆದುಕೊಂಡ ಹೆಸರು ಉಗ್ರಂ ಮಂಜು. ನಿನ್ನೆ ಅರ್ಧಕ್ಕೆ ನಿಂತಿದ್ದ ಕಟ್ಟಕಡೆಯ ನಾಮಿನೇಷನ್ ಪ್ರಕ್ರಿಯೆ ಇಂದು ಮುಂದುವರೆದಿದೆ. ಈ ಕುರಿತು ಕಲರ್ಸ್ ಕನ್ನಡ ಹೊಸ ಪ್ರೊಮೊ ಬಿಡುಗಡೆ ಮಾಡಿದೆ.
ನಾಮಿನೇಷನ್ಗೆ ಭವ್ಯಾ ಗೌಡ ಅವರು ಮಂಜು ಹೆಸರು ತೆಗೆದುಕೊಂಡಿದ್ದಾರೆ. ಅಲ್ಲಿ ಗೌತಮಿ ಅವರ ಮೂಗಿಗೆ ಪೆಟ್ಟಾಯಿತು ಎಂದಾದಾಗ ನಮ್ಮನ್ನು ನೀವು ಎತ್ತಿ ಬಿಸಾಕಿದ್ರಿ.. ಗೌತಮಿ ಅವರು ಅಂದ್ರೆ ಹಾಗೆ ಹೀಗೆ ಅಂತೀರಾ.. ಇಲ್ಲಿ ಬೇರೆ ಯಾರು ಹೆಣ್ಮಕ್ಳೇ ಅಲ್ವಾ, ಅವರು ಒಬ್ರೆನಾ ಇಲ್ಲಿ ಹೆಣ್ಮಗು?. ಅವ್ರು ಹೇಳಿದ್ದನ್ನು ಕೇಳ್ಕೊಂಡು ಇರೋಕಾ ಬಿಗ್ ಬಾಸ್ ನಿಮ್ಮನ್ನ ಇಲ್ಲಿ ಕರೆಸಿಕೊಂಡಿದ್ದು ಎಂದು ಹೇಳಿದ್ದಾರೆ. ಅತ್ತ ಮಂಜು ಕೂಡ ಕೌಂಟರ್ ಕೊಟ್ಟಿದ್ದಾರೆ. ನನ್ಗೆ ಒಳ್ಳೆದನ್ನ ಬಯಸೋರು ಒಳ್ಳೆಯವರು.. ನೀನು ಹೇಳಿದ್ದನ್ನ ಕೇಳ್ಕೊಂಡು ಇರೋಕಾ ಬಿಗ್ ಬಾಸ್ ನನ್ನ ಇಲ್ಲಿಗೆ ಕರೆಸಿದ್ದು ಎಂದಿದ್ದಾರೆ.
ಇನ್ನು ಧನರಾಜ್ ಕೂಡ ಮಂಜು ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಗ್ರೇ ಏರಿಯಾ ಏನಿದೆ ಅದು ನಿಮ್ದು ಆಟದಲ್ಲಿ ಮಾತ್ರವಲ್ಲ, ಪರ್ಸನಲ್ ಆಗಿಯೂ ಇದೆ ಅನ್ಸುತ್ತೆ. ಒಬ್ಬ ವ್ಯಕ್ತಿನ ಇಲ್ಲಿ ಹೊಗಳ್ತೀರಾ.. ಅದೇ ಈಕಡೆ ಬಂದು ತೆಗಳ್ತೀರಾ ಎಂಬ ಕಾರಣ ಕೊಟ್ಟಿದ್ದಾರೆ. ಹಾಗೆಯೆ ಗೌತಮಿ ಜಾಧವ್, ಮೋಕ್ಷಿತಾ ಪೈ, ತ್ರಿವಿಕ್ರಮ್ ಕೂಡ ಮಂಜು ಹೆಸರನ್ನು ತೆಗೆದುಕೊಂಡರು. ರಜತ್ ಅವರು ಬಾಲ ಕಟ್ ಮಾಡಿದ ನರಿ ನೀನು ಎಂದು ಮಂಜುಗೆ ಹೇಳಿ ನಾಮಿನೇಟ್ ಮಾಡಿದರು.
ಒಟ್ಟಾರೆ ಕಟ್ಟಕಡೆಯ ನಾಮಿನೇಷನ್ ಪ್ರಕ್ರಿಯೆ ನಡೆದಾಗಲೂ ಎಲ್ಲ ಸ್ಪರ್ಧಿಗಳು ಮತ್ತದೇ ಹಳೇ ಕಾರಣಗಳನ್ನೇ ನೀಡಿದ್ದಾರೆ. ಪುನಃ ಅದೇ ಜಗಳಗಳೇ ರಿಪೀಟ್ ಆಗಿವೆ. ಇದರಿಂದ ವೀಕ್ಷಕರಿಗೆ ಏನೂ ಹೊಸದಾಗಿ ಸಿಕ್ಕಿಲ್ಲ. ಉಗ್ರಂ ಮಂಜು ವಿರುದ್ಧ ಬಹುತೇಕ ಎಲ್ಲ ಸ್ಪರ್ಧಿಗಳು ಕೂಗಾಡಿದ್ದಾರೆ. ಅದರಲ್ಲೂ ರಜತ್ ಜೊತೆ ಮಾತಿನ ಚಕಮಕಿ ನಡೆಯಿತು. ಜೊತೆಗೆ ತ್ರಿವಿಕ್ರಮ್ ಕೂಡ ಜಗಳಕ್ಕೆ ಇಳಿದರು. ಅಂತಿಮವಾಗಿ ಈ ವಾರ ಮನೆಯಿಂದ ಹೊರಹೋಗುವ ಇಬ್ಬರು ಸ್ಪರ್ಧಿಗಳು ಯಾರು ಎಂಬುದು ನೋಡಬೇಕಿದೆ.