ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡೆಟ್ರಾಯ್ಟ್‌ನಲ್ಲಿ ವಿಜೃಂಭಣೆಯ 47ನೇ ವಿಎಸ್ಎನ್ಎ ಮತ್ತು ಬಸವ ಜಯಂತಿ ಮಹಾಸಮಾವೇಶ

ವೀರಶೈವ ಸಮಾಜ ಉತ್ತರ ಅಮೆರಿಕ (VSNA) ಆಯೋಜಿಸಿದ್ದ 47ನೇ ವಾರ್ಷಿಕ ಮಹಾಸಮಾವೇಶ ಮತ್ತು ಬಸವ ಜಯಂತಿ (Basava Jayanthi) ಮಹೋತ್ಸವ ಅತ್ಯಂತ ಭಕ್ತಿಭಾವದಿಂದ ಹಾಗೂ ಸಂಸ್ಕೃತಿಯ ಅದ್ಧೂರಿತನದಿಂದ ಅಮೆರಿಕದ ಡೆಟ್ರಾಯ್ಟ್ (Detroit) ನಗರದಲ್ಲಿ ನೆರವೇರಿತು.

ಡೆಟ್ರಾಯ್ಟ್‌ನಲ್ಲಿ ವಿಜೃಂಭಣೆಯ 47ನೇ ವಿಎಸ್ಎನ್ಎ ಮತ್ತು ಬಸವ ಜಯಂತಿ ಸಮಾವೇಶ

ಹರೀಶ್‌ ಕೇರ ಹರೀಶ್‌ ಕೇರ Jul 7, 2025 12:07 PM

ಡೆಟ್ರಾಯ್ಟ್‌: ಅಮೆರಿಕದ ಡೆಟ್ರಾಯ್ಟ್ (Detroit) ನಗರವು ಇತ್ತೀಚೆಗೆ ಭಕ್ತಿ, ವಚನಪರಂಪರೆ ಹಾಗೂ ವೀರಶೈವ ಲಿಂಗಾಯತ (Veerashaiva- Lingayat) ಸಾಂಸ್ಕೃತಿಕ ವೈಭವದಿಂದ ನಾಡಿನ ನಮನದ ತಾಣವಾಯಿತು. ವೀರಶೈವ ಸಮಾಜ ಉತ್ತರ ಅಮೆರಿಕ (VSNA) ಆಯೋಜಿಸಿದ್ದ 47ನೇ ವಾರ್ಷಿಕ ಮಹಾಸಮಾವೇಶ ಮತ್ತು ಬಸವ ಜಯಂತಿ (Basava Jayanthi) ಮಹೋತ್ಸವ ಅತ್ಯಂತ ಭಕ್ತಿಭಾವದಿಂದ ಹಾಗೂ ಸಂಸ್ಕೃತಿಯ ಅದ್ಧೂರಿತನದಿಂದ ನೆರವೇರಿತು.

vsna1

ಈ ಪವಿತ್ರ ಸಂದರ್ಭದಲ್ಲಿ ಜರುಗಿದ ವಚನ ವಿಜಯೋತ್ಸವ ಮತ್ತು ಬಸವ ಪಲ್ಲಕ್ಕಿ ಉತ್ಸವಗಳಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪರಮಪೂಜ್ಯ ಶ್ರೀ ವಚನಾನಂದ ಮಹಾಸ್ವಾಮಿಗಳು ಭಾಗವಹಿಸಿ ಆಶೀರ್ವಚನ ನೀಡಿದರು.

vsna3

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್‌, ಕೆ.ಎಲ್.ಇ. ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ್ ಕೋರೆ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯರಾ ಪ್ರದೀಪ್ ಶೆಟ್ಟರ್‌, ಕೆ.ನವೀನ್, ವಿಎಸ್ಎನ್ಎ ಅಧ್ಯಕ್ಷರಾದ ತುಮಕೂರು ದಯಾನಂದ, ಸಮ್ಮೇಳನ ಅಧ್ಯಕ್ಷ ಮಹೇಶ ಪಾಟೀಲ ಭಾಗವಹಿಸಿದ್ದರು.

vsna4

ಅಮೇರಿಕಾದ ಸಾವಿರಾರು ವೀರಶೈವ ಲಿಂಗಾಯತ ಭಕ್ತರು ಉತ್ಸಾಹಭರಿತವಾಗಿ ಪಾಲ್ಗೊಂಡು ಈ ಮಹೋತ್ಸವವನ್ನು ಭಕ್ತಿಯ ನದಿಯಾಗಿ ಮಾಡುವಲ್ಲಿ ಪಾಲು ವಹಿಸಿದರು. ಜಗದ್ಗುರುಗಳು ಹಾಗೂ ಮಹನೀಯರ ಸಾನ್ನಿಧ್ಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡ ಸಮುದಾಯ ಉತ್ಸವವನ್ನು ಸಂಭ್ರಮಿಸಿದರು.

vsna5

ವಚನಸಾಹಿತ್ಯದ ಮಹಿಮೆ, ಬಸವ ತತ್ವದ ಸಾರ್ವಕಾಲಿಕತೆ ಹಾಗೂ ಅಮೆರಿಕದ ವೀರಶೈವ ಲಿಂಗಾಯತರ ಕೊಡುಗೆಯನ್ನು ಈ ಸಂದರ್ಭದಲ್ಲಿ ಕೊಂಡಾಡಲಾಯಿತು.

vsna6