ಸರಕಾರಕ್ಕೆ ತಟ್ಟಿದ ಡಿಸಿ, ಎಸ್ಪಿ ಹುದ್ದೆ ಹಂಚಿಕೆ ಬಿಸಿ
ಹಿಂದಿನ ಬಿಜೆಪಿ ಸರಕಾರದಲ್ಲಿ ಸುಮಾರು 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಜಿಲ್ಲಾಧಿಕಾರಿಗಳಾಗಿದ್ದರು. ಆದರೆ ಈ ಸರಕಾರದಲ್ಲಿ ಕೇವಲ ಒಂದೇ ಒಂದು ಜಿಲ್ಲೆಯಲ್ಲಿ ಇದ್ದಾರೆ. ಇದರ ಬಗ್ಗೆ ಬೇಸರ ವ್ಯಕ್ತವಾದ ನಂತರ ಇತ್ತೀಚಿಗೆ ಮತ್ತೊಂದು ಜಿಲ್ಲೆಯಲ್ಲಿ ಅವಕಾಶ ನೀಡ ಲಾಗಿದೆ. ಹೀಗಾಗಿ ದಲಿತ ಸಮಾಜಕ್ಕೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಎಂದು ಬಹುತೇಕ ಐಎಎಸ್ ಅಧಿಕಾರಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಎಸ್‌ಸಿ, ಎಸ್‌ಟಿ ಐಎಎಸ್, ಐಪಿಎಸ್ ಅಧಿಕಾರಿಗಳ ಬೇಸರ
ನಾಯಕರ ಭೇಟಿಗೆ ನಿರ್ಧಾರ
ಅನುದಾನ, ಅವಕಾಶಗಳು ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ದನಿ ಎತ್ತಿ ಇಳಿಸುತ್ತಿದ್ದಂತೆ ಈಗ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸರದಿ ಶುರುವಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಸೇರಿದಂತೆ ಆಡಳಿತಾತ್ಮಕ ಹುದ್ದೆಗಳು ಲಭಿಸುತ್ತಿಲ್ಲ. ಸರಕಾರದ ಆಡಳಿತದಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಪರಿಶಿಷ್ಟಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ಸೇರಿದ ಐಎಎಸ್ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರಕಾರ ಸದಾ ದಲಿತ ಸಮುದಾಯ ಏಳಿಗೆ ಬಯಸುವ ಮಾತನಾಡುತ್ತಿದೆ. ಆದರೆ ಈ ಸರಕಾರದಲ್ಲೇ ತಮಗೆ ನಿರೀಕ್ಷಿತ ಅವಕಾಶ ಲಭಿಸುತ್ತಿಲ್ಲ ಎಂದು ಅನೇಕ ಐಎಎಸ್ ಅಧಿಕಾರಿಗಳು ಸಿಟ್ಟಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಬಿಜೆಪಿ ಸರಕಾರದಲ್ಲಿ ಸುಮಾರು 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಜಿಲ್ಲಾಧಿಕಾರಿಗಳಾಗಿದ್ದರು. ಆದರೆ ಈ ಸರಕಾರದಲ್ಲಿ ಕೇವಲ ಒಂದೇ ಒಂದು ಜಿಲ್ಲೆ ಯಲ್ಲಿ ಇದ್ದಾರೆ. ಇದರ ಬಗ್ಗೆ ಬೇಸರ ವ್ಯಕ್ತವಾದ ನಂತರ ಇತ್ತೀಚಿಗೆ ಮತ್ತೊಂದು ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ದಲಿತ ಸಮಾಜಕ್ಕೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಎಂದು ಬಹುತೇಕ ಐಎಎಸ್ ಅಧಿಕಾರಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Yagati Raghu Naadig Column: ಪ್ರಾಮಾಣಿಕ ಪ್ರಾರ್ಥನೆಗೆ ಪರವಶನಾಗನೇ ಪರಮಾತ್ಮ ?
ಈ ಹಿನ್ನೆಲೆಯಲ್ಲಿ ಅನೇಕ ಅಧಿಕಾರಿಗಳು ಇತ್ತೀಚಿಗೆ ಒಂದು ಕಡೆ ಕಲೆತು ಚರ್ಚಿಸಿದ್ದು ಕೆಲವು ರಾಜಕೀಯ ನಾಯಕರನ್ನೂ ಭೇಟಿ ಮಾಡಿ ನೋವುಗಳನ್ನು ತೋಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಕೆಲವು ಐಎಎಸ್ ಅಧಿಕಾರಿಗಳ ಆಪ್ತ ಮೂಲಗಳು ತಿಳಿಸಿವೆ.
ರಾಜ್ಯ ವಿಧಾನಸಭೆಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ 54 ಶಾಸಕರಿದ್ದು, ಅವರನ್ನು ಪ್ರತಿನಿಧಿಸುವ 8 ಸಚಿವರು ಸಂಪುಟದಲ್ಲಿದ್ದಾರೆ. ಆದರೆ ಅವರು ತಮ್ಮ ಪರ ದನಿ ಎತ್ತುತ್ತಿಲ್ಲವೋ ಅಥವಾ ಅವರಿಗೆ ಸರಕಾರದಲ್ಲಿ ಮನ್ನಣೆ ಸಿಗುತ್ತಿಲ್ಲವೋ ಆದರೆ ತಮಗೆ ಮಾತ್ರ ಅವಕಾಶ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸರಕಾರದಲ್ಲಿ ಕೆಲವು ಕಿರಿಯ ಅಧಿಕಾರಿಗಳಿಗೂ ಜಿಲ್ಲಾಧಿಕಾರಿ ಹುದ್ದೆ ನೀಡಲಾಗುತ್ತಿದ್ದು, ಬಹುತೇಕರು ಹಿರಿಯರಿದ್ದರೂ ಪರಿಗಣಿಸುತ್ತಿಲ್ಲ. ಅದರಲ್ಲೂ ನಿವೃತ್ತಿ ಅಂಚಿನಲ್ಲಿರುವವರಿಗಾದರೂ ಕೆಲಕಾಲ ಜಿಲ್ಲಾಧಿಕಾರಿ ಹುದ್ದೆ ನೀಡುವ ಪ್ರಯತ್ನ ನಡೆಯುತ್ತಿಲ್ಲ ಎಂದು ಐಎಎಸ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ ತಿಳಿದು ಬಂದಿದೆ.
ಏನಿದು ಡಿಸಿ, ಎಸ್ಪಿ ಹುದ್ದೆ ಸಮಸ್ಯೆ?
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸುಮಾರು 45ಕ್ಕೂ ಹಚ್ಚು ಐಎಎಸ್ ಅಧಿಕಾರಿ ಗಳಿದ್ದು, 25ಕ್ಕೂ ಅಧಿಕ ಐಪಿಎಸ್ ಅಧಿಕಾರಿಗಳಿದ್ದಾರೆ. ಇವರಿಗೆ ಡಿಸಿ ಮತ್ತು ಎಸ್ಪಿ ಹುದ್ದೆಗಳನ್ನು ನೀಡುವಾಗಿ ಅವಕಾಶ ತಪ್ಪಿಸಲಾಗುತ್ತಿದೆ. ಅದರಲ್ಲೂ ಕೆಲವು ಡಿಸಿ ಮತ್ತು ಎಸ್ಪಿಗಳನ್ನು ಕನಿಷ್ಠ ೨ ವರ್ಷಗಳ ಅವಧಿ ಮುಗಿಯುವ ಮುನ್ನವೇ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಬೇಸರ ಅಧಿಕಾರಿ ಗಳಲ್ಲಿ ಹೆಚ್ಚಾಗುತ್ತಿದೆ. ಇದರ ಮಧ್ಯೆ, ಐಎಎಸ್ ಅಧಿಕಾರಿಗಳು ಸೀನಿಯರ್ ಸೂಪರ್ ಟೈಮ್ ಸ್ಕೇಲ್ ಪ್ರವೇಶಿಸಿದ ನಂತರ ಅವರನ್ನು ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸ ಬಹುದು. ಆಗ ಅವಕಾಶ ಸಿಗದಿದ್ದರೆ, ನಂತರ ಜೂನಿಯರ್ ಅಡಳಿತ ಸ್ಕೇಲ್ ಪ್ರವೇಶಿಸುತ್ತಾರೆ. ಅ ನಾಲ್ಕು ವರ್ಷಗಳಲ್ಲೂ ಅವರು ಜಿಲ್ಲಾಧಿಕಾರಿಯಾಗದಿದ್ದರೆ ಅವರಿಗೆ ಮತ್ತೆ ಅವಕಾಶ ಸಿಗುವುದೇ ಇಲ್ಲ. ಅಂತಹ ಸ್ಥಿತಿಯ ದಲಿತ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಅಂದರೆ 2013ರ ಬ್ಯಾಜ್ ಅಧಿಕಾರಿಗಳಿಗೇ ಇನ್ನೂ ಜಿಲ್ಲಾಧಿಕಾರಿ ಹುದ್ದೆ ನೀಡಿಲ್ಲ.
ಆದರೆ ಆಗಲೂ 2017ರ ಬ್ಯಾಚ್ ನ ಕಿರಿಯ ಕಿರಿಯ ಅಧಿಕಾರಿಗೆ ( ಬೆಂಗಳೂರು) ಅವಕಾಶ ನೀಡಲಾ ಗಿದೆ. ಇದರಿಂದ ಮುಂದಿನ ವರ್ಷ ಅನೇಕ ಅಧಿಕಾರಿಗಳು ನಿವೃತ್ತಿಯಾಗುತ್ತಿದ್ದು, ಅವರಿಗೆ ಈಗಲೂ ಅವಕಾಶ ಸಿಗದಿದ್ದರೆ, ಅವರ ಜಿಲ್ಲಾಧಿಕಾರಿ ಕನಸು ಭಗ್ನ ಎನ್ನುವುದು ಅಧಿಕಾರಿಗಳ ಅಸಮಾಧಾನ ಕ್ಕೆ ಕಾರಣವಾಗಿದೆ. ಈ ಸಮಸ್ಯೆ ಬರೀ ಐಎಎಎಸ್ ಮಾತ್ರವಲ್ಲದೆ, ಐಪಿಎಸ್ ನಲ್ಲೂ ಎಸ್ಪಿ ಹುದ್ದೆ ಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ವಿಶೇಷ ಅವಕಾಶಕ್ಕೆ ಆಕ್ರೋಶ
ಸಾಮಾನ್ಯ ಎಲ್ಲಾ ಐಎಎಸ್ ಅಧಿಕಾರಿಗಳಿಗೂ ಜಿಲ್ಲಾಧಿಕಾರಿಯಾಗುವ ಅವಕಾಶ ಸಿಗಲೆಂದು ಮುಖ್ಯ ಕಾರ್ಯದರ್ಶಿ ಅವರು ಸೇವೆಯನ್ನು ಸರಿದೂಗಿಸುತ್ತಾರೆ. ಆದರೆ ಅಂದರೆ ಸಾಮಾನ್ಯ 2 ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗುವ ಅವಕಾಶ ಎಲ್ಲರಿಗೂ ಸಿಗುತ್ತದೆ. ಕೆಲವರು 2 ವರ್ಷ ಪೂರ್ಣ ಗೊಳಿಸಿ ತುಂಬಾ ಸಮಯವಾಗಿದೆ. ಆದರೂ ಆ ಜಿಲ್ಲೆಗಳಿಗೆ ( ಅಂಥ ಜಿಲ್ಲೆಗಳು ಶಿವಮೊಗ್ಗ, ವಿಜಯನಗರ, ಚಿತ್ರದುರ್ಗ ಸೇರಿದಂತೆ ೭ ಜಿಲ್ಲೆಗಳಿವೆ.) ಯಾರನ್ನೂ ವರ್ಗಾವಣೆ ಮಾಡುತ್ತಿಲ್ಲ ಎಂದು ದಲಿತ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.