Nora Fatehi: ಏರ್‌ಪೋರ್ಟ್‌ನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಬಾಲಿವುಡ್ ನಟಿ ನೋರಾ ಫತೇಹಿ! ಅಷ್ಟಕ್ಕೂ ಆಗಿದ್ದೇನು?
ತೆಲುಗು ಮತ್ತು ಬಾಲಿವುಡ್ ಸಿನಿಮಾ ರಂಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ನಟಿ ನೋರಾ ಫತೇಹಿ ಅವರು ಆಗಾಗ ಸಿನಿಮಾ, ಫ್ಯಾಷನ್ ಇವೆಂಟ್ ಗಳಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಸಿನಿಮಾ ನಿಮಿತ್ತ ವಾಗಿ ಮುಂಬೈ ಏರ್ ಪೋರ್ಟ್ ಗೆ ಆಗಮಿಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ನಟಿ ನೋರಾ ಕಣ್ಣೀರು ಹಾಕುತ್ತಾ ಬರುವ ವಿಡಿಯೋ ವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.


ಮುಂಬೈ: ಬಾಲಿವುಡ್ ಖ್ಯಾತ ನಟಿ, ಡ್ಯಾನ್ಸರ್ ನೋರಾ ಫತೇಹಿ (Nora Fatehi) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ತೆಲುಗು ಮತ್ತು ಬಾಲಿವುಡ್ ಸಿನಿಮಾ ರಂಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ನಟಿ ನೋರಾ ಫತೇಹಿ ಅವರು ಆಗಾಗ ಸಿನಿಮಾ, ಫ್ಯಾಷನ್ ಇವೆಂಟ್‌ಗಳಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಸಿನಿಮಾ ನಿಮಿತ್ತವಾಗಿ ಮುಂಬೈ ಏರ್ ಪೋರ್ಟ್ ಗೆ ಆಗ ಮಿಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ನಟಿ ನೋರಾ ಕಣ್ಣೀರು ಹಾಕುತ್ತಾ ಬರುವ ವಿಡಿಯೋ ವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನೋರಾ ಫತೇಹಿ ಅವರು ಸನ್ ಗ್ಲಾಸ್ ಧರಿಸಿ ತಾವು ಕಣ್ಣೀರು ಹಾಕಿದ್ದನ್ನು ಮರೆಮಾಚುವ ಪ್ರಯತ್ನ ಮಾಡಿದ್ದರೂ ಕೂಡ ಮುಖದಲ್ಲೇ ಎಲ್ಲವೂ ಅಭಿವ್ಯಕ್ತವಾಗಿದೆ. ನಟಿ ನೋರಾ ಅವರಿಗೆ ಏನಾಯಿತು ಎಂಬಂತೆ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಸ್ಟಾರ್ ಸೆಲೆಬ್ರಿಟಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಅವರ ಫೋಟೊ ಕ್ಲಿಕ್ಕಿಸುವುದು, ವಿಡಿಯೋ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಅಂತೆಯೇ ಈ ಬಾರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಖ್ಯಾತ ಡ್ಯಾನ್ಸರ್ ನೋರಾ ಫತೇಹಿ ಅವರು ಆಗಮಿಸುತ್ತಿದ್ದಂತೆ ಅಭಿಮಾನಿ ಒಬ್ಬರು ಅವರ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆಗ ನೋರಾ ಅದ್ಯಾವುದಕ್ಕೂ ಸಮಯ ಕೊಡದೆ ತಮ್ಮ ಪಾಡಿಗೆ ಕಣ್ಣೊರಿಸಿ ಕೊಳ್ಳುತ್ತಾ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ್ದಾರೆ. ಅಭಿಮಾನಿಗಳು ಈ ವಿಡಿಯೋ ಕಂಡು ಕಳವಳ ವ್ಯಕ್ತಪಡಿಸಿದ್ದಾರೆ.
ನಟಿ ನೋರಾ ಅವರು ಕಪ್ಪು ಬಣ್ಣದ ವೆಸ್ಟರ್ನ್ ಬಟ್ಟೆ ಧರಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಆಕೆಯ ಹಿಂದೆಯೇ ಬಾಡಿಗಾರ್ಡ್ಸ್ ಕೂಡ ಇದ್ದು ಆಕೆಗೆ ಯಾರು ತೊಂದರೆ ನೀಡದಂತೆ ಜಾಗೃತಿ ವಹಿಸಿಕೊಂಡಿದ್ದಾರೆ. ನೋರಾ ಅವರ ಖಿನ್ನತೆಗೆ ಕಾರಣ ಏನು ಎಂಬ ಬಗ್ಗೆ ಕೂಡ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಏರ್ಪಡುತ್ತಿದೆ.
ಜು. 7ರ ಬೆಳಗ್ಗೆ ನಟಿ ನೋರಾ ಫತೇಹಿ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಉರ್ದು ಭಾಷೆಯಲ್ಲಿ ಬರೆದ ಪ್ರಾರ್ಥನೆಯ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಯಾರಾದರೂ ನಿಧನರಾದಾಗ ಈ ರೀತಿಯ ಪ್ರಾರ್ಥನೆ ಪಠಿಸಲಾಗುತ್ತದೆಯಂತೆ. ಹೀಗಾಗಿ ನೋರಾ ಆಪ್ತರಿಗೆ ಏನೋ ಸಮಸ್ಯೆಯಾಗಿದೆ. ಹೀಗಾಗಿ ಅವರು ಅದೇ ಚಿಂತೆಯಲ್ಲಿ ಇದ್ದಿರಬೇಕು ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ:Jockey 42 Movie: ನಟ ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ಗುಡ್‌ನ್ಯೂಸ್ ಕೊಟ್ಟ ನಿರ್ದೇಶಕ ಗುರುತೇಜ್ ಶೆಟ್ಟಿ
ನಟಿ ನೋರಾ ಫತೇಹಿ ಅವರು ರೋರ್: ಟೈಗರ್ಸ್ ಆಫ್ ದಿ ಸುಂದರ್‌ಬನ್ಸ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಹಿಂದಿ, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ದಿಲ್‌ಬಾರ್, ಓ ಸಾಕಿ ಸಾಕಿ, ಕಮಾರಿಯಾ ಮತ್ತು ಗಾರ್ಮಿಯಂತಹ ಹಿಟ್ ಟ್ರ್ಯಾಕ್‌ಗಳಲ್ಲಿ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಸೀಸನ್ 9 ಮತ್ತು ಝಲಕ್ ದಿಖ್ಲಾ ಜಾ ನಂತಹ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದು ಖ್ಯಾತಿ ಪಡೆದಿದ್ದಾರೆ.