ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni Birthday: ಬಾಲ್ಯದ ಗೆಳೆಯರ ಜತೆ ಹುಟ್ಟುಹಬ್ಬ ಆಚರಿಸಿದ ಧೋನಿ

happy birthday dhoni: 2019ರ ಜುಲೈ 9ರಂದು ಓಲ್ಡ್‌ಟ್ರಾಫರ್ಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಧೋನಿ ರನೌಟ್ ಆಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತ್ತು. ನ್ಯೂಜಿಲೆಂಡ್ ಫೈನಲ್‌ ಪ್ರವೇಶಿಸಿತ್ತು. ಧೋನಿ ಪಾಲಿಗೆ ಇದು ಕೊನೆಯ ಪಂದ್ಯವಾಯಿತು. ಅದಾದ ನಂತರ ಧೋನಿ ಮತ್ತೆ ಭಾರತ ತಂಡದಲ್ಲಿ ಆಡದೆ ನಿವೃತ್ತಿ ಘೋಷಿಸಿದ್ದರು.

ಬಾಲ್ಯದ ಗೆಳೆಯರ ಜತೆ ಹುಟ್ಟುಹಬ್ಬ ಆಚರಿಸಿದ ಧೋನಿ

Profile Abhilash BC Jul 7, 2025 11:43 AM

ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ(MS Dhoni Birthday) ಸೋಮವಾರ (ಜುಲೈ 7) ತಮ್ಮ ತವರಾದ ರಾಂಚಿಯಲ್ಲಿ ತಮ್ಮ 44 ನೇ ಹುಟ್ಟುಹಬ್ಬವನ್ನು ಬಾಲ್ಯದ ಆಪ್ತ ಸ್ನೇಹಿತರ(Dhoni celebrates his birthday with friends) ಜತೆ ಆಚರಿಸಿಕೊಂಡರು. ಧೋನಿ ಕೇಕ್ ಕತ್ತರಿಸುವ ಸಮಾರಂಭದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತೋಳಿಲ್ಲದ ಟಿ-ಶರ್ಟ್ ಧರಿಸಿ ಧೋನಿ ನಗುತ್ತಾ ಕೇಕ್ ಕತ್ತರಿಸಿ ತನ್ನ ಸಹಚರರಿಗೆ ಕೇಕ್ ನೀಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಧೋನಿಯ ಈ ಸರಳತೆ ಕಂಡು ಅವರ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಸರಿಸುಮಾರು 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇವತ್ತು ಧೋನಿ ಹೊಂದಿದ್ದಾರೆ. ಇಷ್ಟೆಲ್ಲ ಇದ್ದರೂ, ತಾರಾ ಕ್ರಿಕೆಟಿಗನಾದರೂ ತಮ್ಮ ತವರೂರು ರಾಂಚಿಯಲ್ಲಿ ಬಾಲ್ಯದ ಗೆಳೆಯರೊಂದಿಗೆ ಬೈಕ್‌ ಮೇಲೆ ಸುತ್ತಾಡುತ್ತಾರೆ. ತಮ್ಮ ಪ್ರಥಮ ಕೋಚ್ ಕೇಶವ್ ಬ್ಯಾನರ್ಜಿ, ಗೆಳೆಯ ಚೋಟು ಮತ್ತಿತರರೊಂದಿಗೆ ಮೂರ್ನಾಲ್ಕು ತಾಸು ಬ್ಯಾಡ್ಮಿಂಟನ್ ಆಡುತ್ತಾರೆ. ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುತ್ತಾರೆ.



2019ರ ಜುಲೈ 9ರಂದು ಓಲ್ಡ್‌ಟ್ರಾಫರ್ಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಧೋನಿ ರನೌಟ್ ಆಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತ್ತು. ನ್ಯೂಜಿಲೆಂಡ್ ಫೈನಲ್‌ ಪ್ರವೇಶಿಸಿತ್ತು. ಧೋನಿ ಪಾಲಿಗೆ ಇದು ಕೊನೆಯ ಪಂದ್ಯವಾಯಿತು. ಅದಾದ ನಂತರ ಧೋನಿ ಮತ್ತೆ ಭಾರತ ತಂಡದಲ್ಲಿ ಆಡದೆ ನಿವೃತ್ತಿ ಘೋಷಿಸಿದ್ದರು.

ಇದನ್ನೂ ಓದಿ MS Dhoni Birthday: 44ನೇ ವಸಂತಕ್ಕೆ ಕಾಲಿಟ್ಟ 'ಕ್ಯಾಪ್ಟನ್ ಕೂಲ್' ಧೋನಿ; ಅಭಿಮಾನಿಗಳ ಶುಭ ಹಾರೈಕೆ

538 ಅಂತಾರಾಷ್ಟ್ರೀಯ ಪಂದ್ಯಗಳ ವೃತ್ತಿಜೀವನದಲ್ಲಿ, ಧೋನಿ 17,266 ರನ್ ಗಳಿಸಿದ್ದಾರೆ ಮತ್ತು 829 ಔಟ್‌ಗಳನ್ನು ಮಾಡಿದಾರೆ. ಏಕದಿನ ಪಂದ್ಯಗಳಲ್ಲಿ ಅವರು 50.57 ಸರಾಸರಿಯಲ್ಲಿ 10,773 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕಗಳು ಮತ್ತು 73 ಅರ್ಧಶತಕಗಳು ಸೇರಿವೆ. ಶ್ರೀಲಂಕಾ ವಿರುದ್ಧದ ಅಪ್ರತಿಮ ಅಜೇಯ 183 ರನ್ ಇನ್ನೂ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ನೆನಪಿನಲ್ಲಿದೆ.

2007 ರ ಟಿ 20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿ - ಧೋನಿ ನಾಯಕತ್ವದಲ್ಲಿ ಭಾರತ ಒಲಿದ ಐಸಿಸಿ ಟ್ರೋಫಿಗಳಾಗಿದೆ. ಟೆಸ್ಟ್‌ನಲ್ಲಿ, ಅವರು 60 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 27 ಗೆಲುವುಗಳನ್ನು ಸಾಧಿಸಿದರು. ಒಟ್ಟಾರೆಯಾಗಿ 90 ಪಂದ್ಯಗಳನ್ನು ಆಡಿ, ಸುಮಾರು 5,000 ರನ್‌ಗಳನ್ನು ಗಳಿಸಿದರು.