ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dating APP: ವಿವಾಹೇತರರ ಸಂಬಂಧ; ಟಾಪ್ ಲಿಸ್ಟ್‌ನಲ್ಲಿದ್ದಾರೆ ಬೆಂಗಳೂರಿಗರು

ವಿವಾಹ ಎನ್ನುವುದು ಪವಿತ್ರವಾದ ಸಂಬಂಧ. ಇದಕ್ಕೆ ಬದ್ಧರಾಗಿರಬೇಕು ಎನ್ನುವ ಯಾವುದೇ ಕಟ್ಟುಪಾಡುಗಳು ಇಲ್ಲದೇ ಇದ್ದರೂ ಒಬ್ಬರಿಗೊಬ್ಬರು ಬದ್ಧರಾಗಿ, ನಿಷ್ಠರಾಗಿ ಇರಬೇಕು ಎನ್ನುವ ಶಾಸ್ತ್ರ ಸಂಪ್ರದಾಯವನ್ನು ಪಾಲಿಸಿಕೊಂಡು ಜೀವನ ಪರ್ಯಂತ ಜತೆಯಾಗಿರುವವರನ್ನು ನಾವು ನೋಡಿದ್ದೇವೆ. ಆದರೆ ಈಗ ಕಾಲ ಬದಲಾಗಿರುವುದು ಮಾತ್ರವಲ್ಲ ಮನಸ್ಸುಗಳು ಕೂಡ ಎನ್ನುವುದನ್ನು ಇತ್ತೀಚಿನ ಗ್ಲೀಡೆನ್ ಡೇಟಿಂಗ್ ಅಪ್ಲಿಕೇಶನ್ ಅಂಕಿ ಅಂಶಗಳು ಹೇಳುತ್ತವೆ.

ವಿವಾಹೇತರರ ಸಂಬಂಧದಲ್ಲಿದ್ದಾರೆ 3 ಮಿಲಿಯನ್‌ಗೂ ಹೆಚ್ಚು ಭಾರತೀಯರು

ಬೆಂಗಳೂರು: ಹಿಂದೂ (Hindu) ಶಾಸ್ತ್ರಗಳು ಹೇಳುವ ಏಳೇಳು ಜನ್ಮಕ್ಕೂ ನೀನೇ ನನ್ನ ಗಂಡ, ನೀನೇ ನನ್ನ ಹೆಂಡತಿ ಎನ್ನುವ ಕಾಲ ಈಗಿಲ್ಲ. ಯಾಕೆಂದರೆ ವಿವಾಹವಾದ ತಿಂಗಳೊಳಗೆ ವಿಚ್ಛೇದನಕ್ಕೆ ಅರ್ಜಿ ಹಾಕಿ, ಇನ್ನೊಂದು, ಮತ್ತೊಂದು ಮದುವೆಯಾಗಿರುವ ಕೆಲವು ಜೋಡಿಗಳೂ ಇವೆ. ವಿವಾಹ ಸಂಬಂಧದಲ್ಲಿ ವಂಚನೆ ಪ್ರಕರಣಗಳು ಇತ್ತೀಚೆಗೆ ತೀರಾ ಹೆಚ್ಚಾಗಿದೆ. ಇದನ್ನು ಬಹಿರಂಗ ಪಡಿಸುವ ಮತ್ತೊಂದು ಅಂಶ ಈಗ ಬೆಳಕಿಗೆ ಬಂದಿದೆ. ವಿವಾಹೇತರರ ಸಂಬಂಧದ ಡೇಟಿಂಗ್ ಆ್ಯಪ್‌ನಲ್ಲಿ (Gleeden Dating APP) 3 ಮಿಲಿಯನ್‌ಗೂ ಹೆಚ್ಚು ಭಾರತೀಯರು (Indians in dating app) ನೋಂದಾಯಿಸಿಕೊಂಡಿದ್ದು, ಇವರಲ್ಲಿ ಬೆಂಗಳೂರಿಗರೇ ಟಾಪ್ ಲಿಸ್ಟ್ ನಲ್ಲಿದ್ದಾರೆ ಎನ್ನುವುದು ಆತಂಕಕಾರಿ ವಿಚಾರ. ಇದು ಇನ್ನು ಮುಂದೆ ಪತಿ-ಪತ್ನಿಯರ ಸಂಬಂಧದಲ್ಲಿ ಬಿರುಕು ಮೂಡಿಸಿದರೂ ಅಚ್ಚರಿ ಇಲ್ಲ.

ಡೇಟಿಂಗ್ ಆ್ಯಪ್‌ ಬಳಸುವ ಭಾರತೀಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಲ್ಲಿ ಬೆಂಗಳೂರಿಗರೇ ಅತೀ ಹೆಚ್ಚು ಪ್ರಮಾಣದಲ್ಲಿದ್ದರೆ. ಅದರಲ್ಲೂ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ಬದಲಾಗುತ್ತಿರುವ ಸಾಮಾಜಿಕ ಜೀವನದ ಬಗ್ಗೆ ಎಲ್ಲರೂ ಚಿಂತಿಸುವಂತೆ ಮಾಡುತ್ತದೆ ಎಂದರೆ ಅಚ್ಚರಿ ಏನಲ್ಲ.

ಆರಂಭದಲ್ಲಿ ಅವಿವಾಹಿತರು, ವಿಚ್ಛೇದನ ಪಡೆದವರಿಗೆ ಮಾತ್ರ ಇದ್ದ ಡೇಟಿಂಗ್ ಆ್ಯಪ್‌ಗಳು ಈಗ ವಿವಾಹೇತರ ಸಂಬಂಧ ಹುಡುಕುತ್ತಿರುವವರಿಗೂ ವರದಾನ ಎನಿಸಿಕೊಂಡಿದೆ. ಇದಕ್ಕಾಗಿಯೇ ಇರುವ ಒಂದು ಡೇಟಿಂಗ್ ಆ್ಯಪ್‌ ಬಹಿರಂಗ ಪಡಿಸಿರುವ ಅಂಕಿ ಅಂಶವು ಈಗ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಈ ಮಾಹಿತಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ವಿವಾಹೇತರ ಸಂಬಂಧ ಹುಡುಕುತ್ತಿರುವವರಿಗೆ ಗ್ಲೀಡಿನ್ ಎಂಬ ಡೇಟಿಂಗ್ ಆ್ಯಪ್‌ ಹೆಚ್ಚು ಪ್ರಚಲಿತದಲ್ಲಿದೆ. ಗ್ಲೀಡಿನ್ ಫ್ರೆಂಚ್ ಮೂಲದ ಆನ್‌ಲೈನ್ ಡೇಟಿಂಗ್ ಆ್ಯಪ್‌ ಆಗಿದ್ದು, ಇದನ್ನು 3 ಮಿಲಿಯನ್‌ಗೂ ಹೆಚ್ಚುಭಾರತೀಯರು ಬಳಸುತ್ತಿದ್ದಾರೆ. ಅದರಲ್ಲೂ ಅತಿ ಹೆಚ್ಚಿನ ಬೆಂಗಳೂರಿಗರು ಇದನ್ನು ಬಳಸುತ್ತಿರುವುದು ಆತಂಕಕಾರಿ ವಿಚಾರವಾಗಿ ಪರಿಣಮಿಸಿದೆ.

ಇದನ್ನೂ ಓದಿ: Kichcha Sudeep: ಕಾರ್‌ ರೇಸ್‌ ತಂಡ ಖರೀದಿಸಿದ ನಟ ಕಿಚ್ಚ ಸುದೀಪ್‌

2024ರಿಂದ ಈ ಆ್ಯಪ್‌ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಲ್ಲಿ ಮಹಿಳೆಯರ ಪ್ರಮಾಣ ಶೇ. 58ರಷ್ಟಿದೆ. ಇವರಲ್ಲಿ ಅನೇಕರು 30ರಿಂದ 45 ವಯಸ್ಸಿನವರು. ಗ್ಲೀಡೆನ್‌ನ ಬಳಕೆದಾರರಲ್ಲಿ ಶೇ. 20ರಷ್ಟು ಬೆಂಗಳೂರು, ಶೇ. 19ರಷ್ಟು ಮುಂಬೈ, ಶೇ. 18ರಷ್ಟು ಕೋಲ್ಕತ್ತಾ ಮತ್ತು ಶೇ. 15ರಷ್ಟು ದೆಹಲಿ ಬಳಕೆದಾರರನ್ನು ಹೊಂದಿದೆ. ಮೆಟ್ರೋ ನಗರಗಳಲ್ಲಿ ಗರಿಷ್ಠ ಬಳಕೆದಾರರು ಇದ್ದರೂ ಭೋಪಾಲ್, ವಡೋದರಾ ಮತ್ತು ಕೊಚ್ಚಿಯಂತಹ ಸಣ್ಣ ನಗರಗಳಲ್ಲೂ ಬಳಕೆದಾರರ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಆ್ಯಪ್‌ ಹೇಳಿಕೊಂಡಿದೆ.

ಇದು ಭಾರತದಲ್ಲಿ ಬದಲಾಗುತ್ತಿರುವ ಸಾಮಾಜಿಕ ಬೆಳವಣಿಗೆಯ ಸಂಕೇತ ಎಂದಿದ್ದಾರೆ ಗ್ಲೀಡೆನ್‌ ಅಪ್‌ನ ಭಾರತ ದೇಶದ ಮ್ಯಾನೇಜರ್ ಸಿಬಿಲ್ ಶಿಡೆಲ್.