Kangana Ranaut: ಪ್ರವಾಹ ಸಂತ್ರಸ್ತರಿಗೆ ನೀಡಲು ಹಣವಿಲ್ಲ, ನಾನು ಕ್ಯಾಬಿನೇಟ್ ಸಚಿವೆ ಅಲ್ಲ; ಮತ್ತೆ ವಿವಾದ ಸೃಷ್ಟಿಸಿದ ಕಂಗನಾ
ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದಾಗಿ ಪ್ರವಾಹ (Kangana Ranaut) ಉಂಟಾಗಿದೆ. ಪ್ರವಾಹದಿಂದಾಗಿ ಈ ವರೆಗೆ 78 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಹಾನಿಯಾಗಿವೆ. ಆದಾಗ್ಯೂ, ಕೇಂದ್ರದಿಂದ ಆರ್ಥಿಕ ನೆರವು ಪಡೆಯಲು ತಾವು ಪ್ರಯತ್ನಿಸುತ್ತಿರುವುದಾಗಿ ಅವರು ಒತ್ತಿ ಹೇಳಿದರು.


ಶಿಮ್ಲಾ: ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದಾಗಿ ಪ್ರವಾಹ (Kangana Ranaut) ಉಂಟಾಗಿದೆ. ಪ್ರವಾಹದಿಂದಾಗಿ ಈ ವರೆಗೆ 78 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಹಾನಿಯಾಗಿವೆ. ಭಾನುವಾರ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪ್ರವಾಹ (Mandi Flood) ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ್ದ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್, ತಮ್ಮ ಬಳಿ ಸಂಪುಟ ಹುದ್ದೆಯೂ ಇಲ್ಲ, ವಿಪತ್ತು ಪರಿಹಾರಕ್ಕಾಗಿ ಹಣವೂ ಇಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಆದಾಗ್ಯೂ, ಕೇಂದ್ರದಿಂದ ಆರ್ಥಿಕ ನೆರವು ಪಡೆಯಲು ತಾವು ಪ್ರಯತ್ನಿಸುತ್ತಿರುವುದಾಗಿ ಅವರು ಒತ್ತಿ ಹೇಳಿದರು.
ನನ್ನ ಬಳಿ ವಿಪತ್ತು ಪರಿಹಾರಕ್ಕಾಗಿ ಯಾವುದೇ ಹಣವಿಲ್ಲ ಅಥವಾ ಯಾವುದೇ ಸಂಪುಟ ಹುದ್ದೆಯನ್ನು ಹೊಂದಿಲ್ಲ. ಸಂಸದರಿಗೆ ಸಂಸತ್ತಿಗೆ ಸೀಮಿತವಾದ ಕೆಲಸವಿದೆ. ನಾವು ಬಹಳ ಸಣ್ಣವರು. ಆದರೆ, ಕೇಂದ್ರದಿಂದ ವಿಪತ್ತು ನಿಧಿಯನ್ನು ಪಡೆಯಲು ನಾನು ಸಹಾಯ ಮಾಡಬಹುದು" ಎಂದು ಮಂಡಿಯ ಸಂಸದೆ ಹೇಳಿದ್ದಾರೆ. ಕಂಗನಾ ಅವರ ಈ ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
#WATCH | Himachal Pradesh: BJP MP from Mandi, Kangana Ranaut says, "The central government provided immediate relief operations by sending in the forces. At the local level, we provided relief material to the affected families... Even though the Prime Minister is on a foreign… https://t.co/VoW4I4Uh4X pic.twitter.com/G9BeCHHTjF
— ANI (@ANI) July 6, 2025
ಸ್ವಪಕ್ಷದವರೇ ಕಂಗನಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಮಂಡಿಯಲ್ಲಿ ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದರೂ ಸಂಸದೆ ಅದರ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ. ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಕಂಗನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕಂಗನಾ ಮಂಡಿಯ ಪರಿಸ್ಥಿತಿಯ ಬಗ್ಗೆ ಏಕೆ ಪ್ರತಿಕ್ರಿಯಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಠಾಕೂರ್, "ನನಗೆ ಗೊತ್ತಿಲ್ಲ, ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕಾಳಜಿ ವಹಿಸುವವರಿಗಾಗಿ ನೆರವು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಕಾಳಜಿ ವಹಿಸದವರ ಬಗ್ಗೆ ನಾನು ಕಾಮೆಂಟ್ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Texas Flood: ಟೆಕ್ಸಾಸ್‌ನಲ್ಲಿ ಭಾರೀ ಪ್ರವಾಹ; ಸಾವಿನ ಸಂಖ್ಯೆ 43ಕ್ಕೆ ಏರಿಕೆ, 27 ಬಾಲಕಿಯರು ನಾಪತ್ತೆ
ಠಾಕೂರ್ ಅವರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್, "ಸಂಸದ ಕಂಗನಾ ರನೌತ್ ಅವರಿಗೆ ಮಂಡಿಯ ಜನರ ಬಗ್ಗೆ ಕಾಳಜಿ ಇಲ್ಲ. ಇವು ನಮ್ಮ ಮಾತುಗಳಲ್ಲ, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ ಎಂದು ಹೇಳಿದೆ. ಮಂಡಿಯಲ್ಲಿ ಪ್ರಸ್ತುತ ಭಾರೀ ಮಳೆಯಾಗುತ್ತಿದ್ದು, ಇದು ನಿವಾಸಿಗಳ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.