Theft case: ಚಿನ್ನಗಳ್ಳನ ಪ್ರೇಮಕಥೆ; ಪ್ರೇಯಸಿಗೆ 3 ಕೋಟಿ ಮೌಲ್ಯದ ಮನೆ ಗಿಫ್ಟ್ ಕೊಟ್ಟ ಹೈಟೆಕ್ ಕಳ್ಳ!
Theft case: ಈ ಕಳ್ಳನಿಗೆ ಮದುವೆಯಾಗಿದ್ದರೂ ಪ್ರೇಯಸಿಯ ಶೋಕಿ ಹೊಂದಿದ್ದ. ಮದುವೆಯಾಗಿ ಮಗು ಇದ್ದರೂ 2016ರಲ್ಲಿ ಪ್ರಿಯತಮೆಗೆ ಕೊಲ್ಕತ್ತಾದಲ್ಲಿ 3 ಕೋಟಿ ಮೌಲ್ಯದ ಮನೆ ಗಿಫ್ಟ್ ಕೊಟ್ಟಿದ್ದಾನೆ ಎಂಬುವುದು ವಿಚಾರಣೆ ವೇಳೆ ಬಯಲಾಗಿದೆ.
ಬೆಂಗಳೂರು: ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡಿದ ಹಣದಿಂದ ಪ್ರೇಯಸಿಗೆ ಬರೋಬ್ಬರಿ 3 ಕೋಟಿ ರು. ಮೌಲ್ಯದ ಮನೆ ಕಟ್ಟಿಸಿಕೊಟ್ಟಿದ್ದ ಖತರ್ನಾಕ್ ಖದೀಮನೊಬ್ಬ (Theft case) ಮಡಿವಾಳ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಬಂಧಿತ ಆರೋಪಿ. ಆತನಿಂದ 12.25 ಲಕ್ಷ ಮೌಲ್ಯದ 181 ಗ್ರಾಂ ಚಿನ್ನದ ಗಟ್ಟಿ, 333 ಗ್ರಾಂ ಬೆಳ್ಳಿಯ ವಸ್ತುಗಳು, ಚಿನ್ನದ ಗಟ್ಟಿ ಮಾಡಲು ಉಪಯೋಗಿಸುತ್ತಿದ್ದ ಒಂದು ಫೈರ್ ಗನ್, ಮೂಸ್ ಜಪ್ತಿ ಮಾಡಲಾಗಿದೆ.
ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಪಂಚಾಕ್ಷರಿ ಸ್ವಾಮಿಯ ಸಹಚರ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಬಂಧಿತ ಆರೋಪಿಯು ಪ್ರಖ್ಯಾತ ನಟಿಯೊಬ್ಬಳ ಜತೆಗೂ ನಂಟು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ತನ್ನ ಮನೆ ಹರಾಜಿಗೆ: ಪಂಚಾಕ್ಷರಿ ಸ್ವಾಮಿ ತಂದೆ
ಪಂಚಾಕ್ಷರಿಸ್ವಾಮಿಯ ತಂದೆ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದು, ಅವರ ಅಕಾಲಿಕ ಸಾವಿನ ಬಳಿಕ ತಾಯಿಗೆ ನೌಕರಿ ಸಿಕ್ಕಿತ್ತು. ಚಿಕ್ಕದಾಗಿರುವ ಆತನ ಮನೆಯು ತಾಯಿಯ ಹೆಸರಿನಲ್ಲಿದೆ. ಈ ಮನೆ ಮೇಲೆ ಸಾಲ ಇದ್ದು, ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ನೋಟಿಸ್ ಬಂದಿದೆ. ವಾಸದ ಮನೆ ಸದ್ಯ ಹರಾಜಿಗೆ ಬಂದಿದೆ.
ಮಹಾರಾಷ್ಟ್ರದಿಂದ ಬೆಂಗಳೂರಿಗೆ ಶಿಫ್ಟ್!
2024ರಲ್ಲಿ ಜೈಲಿನಿಂದ ಬಿಡುಗಡೆಯಾದ ಪಂಚಾಕ್ಷರಿ ಬೆಂಗಳೂರಿಗೆ ಬಂದು ಕಳ್ಳತನ ಆರಂಭಿಸಿದ್ದ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಇವನು ಸದ್ದಿಲ್ಲದೇ ಕೆಲಸ ಮುಗಿಸಿ ಬಿಡುತ್ತಿದ್ದ. ಕಳೆದ ಜನವರಿ 9ರಂದು ಮಡಿವಾಳದಲ್ಲಿ ಮನೆ ಕಳ್ಳತನ ಮಾಡಿದ್ದ ಇವನು ಕಳ್ಳತನ ಮಾಡಿದ ಬಳಿಕ ರಸ್ತೆಯಲ್ಲೇ ಬಟ್ಟೆ ಬದಲಿದ್ದಾನೆ. ಇದೇ ಸುಳಿವಿನ ಮೇಲೆ ಮಡಿವಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಂಚಾಕ್ಷರಿ ಮೇಲೆ 180ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
22 ಲಕ್ಷದ ಅಕ್ಟೇರಿಯಂ ಉಡುಗೊರೆ
ಪಂಚಾಕ್ಷರಿಗೆ ಮದುವೆಯಾಗಿದ್ದರೂ ಪ್ರೇಯಸಿಯ ಶೋಕಿ ಹೊಂದಿದ್ದ. ಮದುವೆಯಾಗಿ ಮಗು ಇದ್ದರೂ 2016ರಲ್ಲಿ ಪ್ರಿಯತಮೆಗೆ ಕೊಲ್ಕತ್ತಾದಲ್ಲಿ 3 ಕೋಟಿ ಮೌಲ್ಯದ ಮನೆ ಗಿಫ್ಟ್ ಕೊಟ್ಟಿದ್ದಾನೆ. ಇಷ್ಟೇ ಅಲ್ಲದೇ ಪ್ರಿಯತಮೆ ಹುಟ್ಟುಹಬ್ಬಕ್ಕೆ 22 ಲಕ್ಷದ ಆಕ್ಕೇರಿಯಂ ಗಿಫ್ಟ್ ಕೊಟ್ಟಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Viral News: ಮುಸ್ಲಿಂ ಹುಡುಗನ ಜೊತೆ ಮದುವೆಗೆ ನೋ ಎಂದ ಉರ್ಫಿ ಜಾವೇದ್; ವೈರಲ್ ಆಯ್ತು ಹಳೆಯ ವಿಡಿಯೊ
ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ!
ಬೆಂಗಳೂರು: ಅನೈತಿಕ ಸಂಬಂಧ ಶಂಕೆಯಿಂದ ನಡುರಸ್ತೆಯಲ್ಲೇ ಪತ್ನಿಯನ್ನು ಪತಿ ಏಳೆಂಟು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಆನೇಕಲ್‌ನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.
ಶ್ರೀಗಂಗಾಗೆ (29) ಕೊಲೆಯಾದವರು. ಮೋಹನ್ ರಾಜ್ (32) ಆರೋಪಿ. ಬೆಳಗ್ಗೆ ಮಗನನ್ನು ಶಾಲೆಗೆ ಬಿಡಲು ಬಂದಿದ್ದ ಪತ್ನಿಯನ್ನು ಮೋಹನ್ ರಾಜ್ ರಸ್ತೆ ಮಧ್ಯೆ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ದಂಪತಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಶ್ರೀಗಂಗಾ ತನ್ನ ಸ್ನೇಹಿತನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದಾಗಿ ಮೋಹನ್ ರಾಜ್ ಪದೇ ಪದೇ ಜಗಳ ತೆಗೆಯುತ್ತಿದ್ದ. ಹೀಗಾಗಿ ಶ್ರೀಗಂಗೆ 8 ತಿಂಗಳಿನಿಂದ ಪತಿಯಿಂದ ದೂರವಾಗಿದ್ದಳು. ಆದರೆ ನಿನ್ನೆ ರಾತ್ರಿ ಮೋಹನ್ ರಾಜ್ ತನ್ನ ಮಗುವನ್ನು ನೋಡಲು ಮನೆಗೆ ಬಂದಿದ್ದ. ಆಗ ಕೂಡ ಇಬ್ಬರ ಮಧ್ಯೆ ಜಗಳವಾಗಿತ್ತು.
ಈ ಸುದ್ದಿಯನ್ನೂ ಓದಿ | Assault Case: ಹೋಟೆಲ್‌ನಲ್ಲಿ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಗ್ರಾಹಕನ ಮೇಲೆ ಹಿಂದಿ ಭಾಷಿಕರ ಹಲ್ಲೆ!
ಬುಧವಾರ ಪತ್ನಿಯನ್ನು ಕೊಲ್ಲಲೇಬೇಕೆಂಬ ಉದ್ದೇಶದಿಂದ ಮೋಹನ್ ರಾಜ್ ಚೂರಿ ಸಮೇತ ಹೋಗಿದ್ದಿ, ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಂದಿದ್ದಾನೆ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ರೀಗಂಗಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.