Wednesday, 11th December 2024

ಬಿಜೆಪಿಯ ಕೇಂದ್ರ ವೀಕ್ಷಕರಾಗಿ ಬಿಎ‌ಸ್‌ವೈ ಸೇರಿ ಮೂವರ ನೇಮಕ

ಅಹಮದಬಾದ್‌: ಗುಜರಾತ್‌ ಮುಖ್ಯಮಂತ್ರಿ ಆಯ್ಕೆ ಸಲುವಾಗಿ ನಡೆಯಲಿರುವ ಪಕ್ಷದ ಶಾಸಕರ ಸಭೆಗೆ ಬಿಜೆಪಿಯ ಕೇಂದ್ರ ವೀಕ್ಷಕರಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ ಅರ್ಜುನ್‌ ಮುಂಡಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪರನ್ನು ಬಿಜೆಪಿ ನೇಮಿಸಿದೆ.

ಗುರುವಾರ ಗುಜರಾತ್‌  ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು 37 ವರ್ಷಗಳ ಹಿಂದೆ ಕಾಂಗ್ರೆಸ್‌ ನಿರ್ಮಿಸಿದ್ದ ದಾಖಲೆಯನ್ನು ಬಿಜೆಪಿ 156 ಸ್ಥಾನಗಳನ್ನ ಗೆಲ್ಲುವ ಮೂಲಕ ಧೂಳಿಪಟ ಮಾಡಿದೆ. ನಾಲ್ವರು ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದಲ್ಲಿ ಆಡಳಿತ ಪಕ್ಷದ ಒಟ್ಟು ಸಂಖ್ಯಾಬಲ 160ಕ್ಕೆ ಏರಲಿದೆ.

ಬಿಜೆಪಿ ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ರನ್ನು 2ನೇ ಅವಧಿಗೆ ಮುಖ್ಯಮಂತ್ರಿ ಯನ್ನಾಗಿ ಮಾಡಿದೆ ಮತ್ತು ಡಿ.12ರಂದು ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಘೋಷಿಸಿದೆ.

ಶನಿವಾರ ಅಹಮದಬಾದ್‌ನಲ್ಲಿ ಸಭೇ ನಡೆಯಲಿದ್ದು ಮುಖ್ಯಮಂತ್ರಿ ಆಯ್ಕೆ ಕುರಿತು ಶಾಸಕರು ತಮ್ಮ ಅಭಿಪ್ರಾಯವನ್ನ ಮಂಡಿಸಲಿದ್ದಾರೆ ಎಂದು ತಿಳಿದು ಬಂದಿದೆ.