Monday, 20th May 2024

ಭಾರಿ ಮಳೆಗೆ ಹಲವೆಡೆ ಭೂಕುಸಿತ: ಇಬ್ಬರ ಸಾವು

ಶಿಲ್ಲಾಂಗ್‌: ಮೇಘಾಲಯದಲ್ಲಿ ಸುರಿದ ಭಾರಿ ಮಳೆಯಿಂದ ಹಲವೆಡೆ ಭೂಕುಸಿತ ಉಂಟಾಗಿಮನೆಗಳು, ವಾಹನಗಳು ಕೊಚ್ಚಿ ಹೋಗಿ, ಆ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಏಳು ಕಡೆ ಭೂಕುಸಿತ ಉಂಟಾಗಿದೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಮೌಲಾತ್ ಗ್ರಾಮದಲ್ಲಿ ಉಂಟಾದ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿ ದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದರು.

ಮತ್ತೊಂದು ಭೂಕುಸಿತದಲ್ಲಿ ಎರಡು ಮನೆಗಳು ಮತ್ತು ಎರಡು ಅಂಗಡಿಗಳು ಕೊಚ್ಚಿ ಹೋಗಿವೆ. ತಂಗ್ಬನೈ-ಮೌಲಿಂಗೋಟ್ ರಸ್ತೆಯ ಒಂದು ಭಾಗವು ಹಾನಿಗೀಡಾಗಿದ್ದು ವಾಹನವು ಕೊಚ್ಚಿಹೋಗಿದೆ. 

error: Content is protected !!