Self harming: ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿ ನೇಣಿಗೆ ಶರಣು
ಪ್ರೇಮ ವಿವಾಹವಾಗಿ ಸುಮಾರು ಎರಡು ದಶಕ ಸಮೀಪಿಸಿತ್ತು. ಅವರ ಪ್ರೀತಿಗೆ ಸಾಕ್ಷಿಯಾಗಿ ಮಕ್ಕಳೂ ಇದ್ದವು. ಆದರೆ ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾ ಗಿರುವ ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ. ನಗರಕ್ಕೆ ಹೊಂದಿಕೊಡಿರುವ ಮುಸ್ಟೂರು ಗ್ರಾಮದ ನರಸಿಂಹಮೂರ್ತಿ(೪೦) ಎಂಬ ನತದೃಷ್ಟನೇ ಮೃತ ವ್ಯಕ್ತಿಯಾಗಿದ್ದಾನೆ. ಮುಸ್ಟೂರು ಗ್ರಾಮದ ಪುಟ್ಟಮ್ಮ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ ನರಸಿಂಹಮೂರ್ತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದ.


ಚಿಕ್ಕಬಳ್ಳಾಪುರ : ಪ್ರೇಮ ವಿವಾಹವಾಗಿ ಸುಮಾರು ಎರಡು ದಶಕ ಸಮೀಪಿಸಿತ್ತು. ಅವರ ಪ್ರೀತಿಗೆ ಸಾಕ್ಷಿಯಾಗಿ ಮಕ್ಕಳೂ ಇದ್ದವು. ಆದರೆ ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾ ಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರಕ್ಕೆ ಹೊಂದಿಕೊಡಿರುವ ಮುಸ್ಟೂರು ಗ್ರಾಮದ ನರಸಿಂಹಮೂರ್ತಿ(೪೦) ಎಂಬ ನತದೃಷ್ಟನೇ ಮೃತ ವ್ಯಕ್ತಿಯಾಗಿದ್ದಾನೆ. ಮುಸ್ಟೂರು ಗ್ರಾಮದ ಪುಟ್ಟಮ್ಮ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ ನರಸಿಂಹಮೂರ್ತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದ.
ಇದನ್ನೂ ಓದಿ: Crime News: ಸಿಟ್ಟಿನಲ್ಲಿ ಪ್ರೇಯಸಿಯನ್ನು ಕೊಂದು ಕುಡಿದ ಅಮಲಿನಲ್ಲಿ ಗೆಳೆಯನ ಎದುರು ಸತ್ಯ ಬಾಯಿಬಿಟ್ಟ ಹಂತಕ
ಕಳೆದ ಒಂದು ವರ್ಷದಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಇದರಿಂದ ಬೇಸತ್ತ ಪತ್ನಿ ಪತಿಯನ್ನು ತೊರೆದು ಪ್ರತ್ಯೇಕವಾಗಿ ಬದುಕುತ್ತಿದ್ದಳು. ಮದ್ಯಪಾನದ ದಾಸನಾದ ಪತಿ ಪದೇ ಪದೇ ಪತ್ನಿ ಮಕ್ಕಳನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ,
ಆದರೆ ಮನೆಗೆ ವಾಪಸ್ ಕರೆ ತರುವ ಪ್ರಯತ್ನದಲ್ಲಿ ವಿಫಲವಾದ ನರಸಿಂಹಮೂರ್ತಿ ಮನನೊಂದು ಮುಸ್ಟೂರು ಗ್ರಾಮದ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿ ದ್ದಾರೆ.