Viral News: ಪ್ರವಾಹದ ನೀರಿನಲ್ಲಿ ಮೊಬೈಲ್‍ಗಾಗಿ ಯುವಕನ ಗೋಳಾಟ; ವಿಡಿಯೊ ಫುಲ್ ವೈರಲ್
ಜೈಪುರದಲ್ಲಿ ಭಾರಿ ಮಳೆಯಿಂದಾಗಿ ನೀರು ತುಂಬಿ ಹರಿಯುತ್ತಿದ್ದ ರಸ್ತೆಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವಕನ ಮೊಬೈಲ್ ಜಾರಿ ನೀರಿಗೆ ಬಿದ್ದಿದ್ದು, ಅದನ್ನು ಹುಡುಕಾಡಿದ ಯುವಕ ಕೊನೆಗೆ ಮೊಬೈಲ್ ಕಾಣದಿದ್ದಾಗ ಕಣ್ಣೀರು ಹಾಕುತ್ತಾ ಕುಳಿತಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಜೈಪುರ: ರಾಜಸ್ಥಾನದ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆಯಾದ ಕಾರಣದಿಂದ ಜಲಾವೃತಗೊಂಡಿದ್ದು, ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ. ಬೀದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಕಷ್ಟಕರವಾಗಿದೆ. ಇತ್ತೀಚೆಗೆ ಜೈಪುರದಲ್ಲಿ ಭಾರಿ ಮಳೆಯಿಂದಾಗಿ ಮೊಬೈಲ್ ನೀರು ತುಂಬಿ ಹರಿಯುತ್ತಿದ್ದ ಬೀದಿಯಲ್ಲಿ ಜಾರಿ ಬಿದ್ದ ಪರಿಣಾಮ ಯುವಕನೊಬ್ಬ ಕಣ್ಣೀರು ಹಾಕುತ್ತಾ ಕುಳಿತಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ರಾಜಸ್ಥಾನದ ರಾಮನಿವಾಸ ಬಾಗ್ ಬಳಿಯ ಪ್ರವಾಹಕ್ಕೆ ಸಿಲುಕಿದ್ದ ರಸ್ತೆಯಲ್ಲಿ ಸುಭಾಷ್ ಚೌಕ್ ನಿವಾಸಿ ಹಲ್ಧರ್ ತನ್ನ ಆಕ್ಟಿವಾ ಸ್ಕೂಟರ್‌ನಲ್ಲಿ ಹೋಗುವಾಗ ಸಮತೋಲನ ಕಳೆದುಕೊಂಡು ನೀರಿಗೆ ಬಿದ್ದಿದ್ದಾನೆ. ಅವನು ಬೀಳುತ್ತಿದ್ದಂತೆ, ಅವನ ಮೊಬೈಲ್ ಫೋನ್ ಸಹ ನೀರಿನಲ್ಲಿ ಬಿದ್ದಿತು.ಎಷ್ಟು ಹುಡುಕಾಡಿದರೂ, ಅದನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಬೇಸರಗೊಂಡ ಹಲ್ಧರ್ ಅಳಲು ಶುರುಮಾಡಿದ್ದಾನೆ.ಹಾಗೇ ಕೋಪಗೊಂಡ ಆತ ಅಧಿಕಾರಿಗಳನ್ನು ದೂಷಿಸಿದ್ದಾನೆ ಮತ್ತು ಇಂತಹ ವ್ಯವಸ್ಥೆಯು ತಮ್ಮಂತಹ ಜನರನ್ನು ಎಷ್ಟು ಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಗೋಳಾಡಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
सड़क पर पानी में गिरा फोन, ढूंढता रह गया युवक
— NDTV India (@ndtvindia) July 10, 2025
राजधानी जयपुर के रामनिवास बाग़ में हलधर नाम का युवक बारिश में सड़क पर भरे पानी में अपना मोबाइल गिर जाने के बाद फूट-फूट कर रोने लगा. युवक की एक्टिवा फिसल गई और मोबाइल पानी में गिर गया, जिसे वह काफी देर तक ढूंढता रहा. जब मोबाइल नहीं… pic.twitter.com/DpEmGPQsT4
ವೈರಲ್ ಆದ ವಿಡಿಯೊದಲ್ಲಿ ಹಲ್ಧರ್ ನೀರಿನಲ್ಲಿ ನಡೆದುಕೊಂಡು ಹೋಗುವುದನ್ನು, ಅಳುವುದನ್ನು ಮತ್ತು ತನ್ನ ಫೋನ್‌ಗಾಗಿ ಪ್ರವಾಹಕ್ಕೆ ಸಿಲುಕಿದ ರಸ್ತೆಯಲ್ಲಿ ಅಲೆದಾಡುವುದನ್ನು ಸೆರೆಹಿಡಿಯಲಾಗಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು, "ಫೋನ್ ಅನ್ನು ಹುಡುಕಲು ಅವನಿಗೆ ಅಲ್ಲಿದ್ದ ಅನೇಕ ಜನರು ಸಹಾಯ ಮಾಡಬಹುದಿತ್ತು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು , "ಯಾರಾದರೂ ಅವರ ಸಂಪರ್ಕ ವಿವರಗಳನ್ನು ನೀಡಬಹುದೇ?" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಅಜ್ಮೀರ್ ಜಿಲ್ಲೆಯ ನಾಸಿರಾಬಾದ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಗುರುವಾರ ತಿಳಿಸಿದೆ. ಬುಧವಾರ ಮತ್ತು ಗುರುವಾರ ಬೆಳಿಗ್ಗೆ 8:30 ರ ನಡುವೆ, ಪೂರ್ವ ರಾಜಸ್ಥಾನದ ಅನೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ನಾಸಿರಾಬಾದ್‌ನಲ್ಲಿ 163 ಮಿಮೀ ಮಳೆಯಾಗಿದ್ದು, ನಂತರ ಜೈಪುರ ಜಿಲ್ಲೆಯ ಕೋಟ್‌ಪುಟ್ಲಿಯಲ್ಲಿ 150 ಮಿಮೀ ಮತ್ತು ಬೆಹ್ರೋರ್‌ನಲ್ಲಿ 110 ಮಿಮೀ ಮಳೆಯಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಗತಿಸಿದ ಗಂಡನ ಜೊತೆ ಕೈ ಹಿಡಿದು ಹೆಜ್ಜೆ ಹಾಕಿದ ಅಜ್ಜಿ; ಹೃದಯಸ್ಪರ್ಶಿ ಎಐ ವಿಡಿಯೊ ವೈರಲ್!
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ನಡೆದ ಘಟನೆಯಲ್ಲಿ ಸಿಕಾರ್ ಜಿಲ್ಲೆಯ ಲಕ್ಷ್ಮಣ್‌ಗಢ ಪ್ರದೇಶದ ಗಡೋರಾ ಗ್ರಾಮದ ಶಾಲಾ ವಿದ್ಯಾರ್ಥಿನಿಯೊಬ್ಬಳು ರಸ್ತೆಯಲ್ಲಿ ಮೊಣಕಾಲು ಆಳದವರೆಗೆ ಬಂದಿರುವ ನೀರಿನಲ್ಲಿ ನಡೆದುಕೊಂಡು ಹೋಗುತ್ತಾ ರಾಜಕೀಯ ನಾಯಕರು ಮತ್ತು ಸರ್ಕಾರಿ ವ್ಯವಸ್ಥೆಗಳನ್ನು ಅಣಕಿಸಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.