ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪ್ರಿಯಕರನ ಜತೆ ಲವ್ವಿಡವ್ವಿ, ವಿಡಿಯೊ ಸೆರೆ ಹಿಡಿದಿದ್ದ ಪತಿಯ ಮೊಬೈಲ್‌ ಕಳ್ಳತನಕ್ಕೆ ಹೆಂಡ್ತಿಯಿಂದಲೇ ಸುಪಾರಿ!

ಮಹಿಳೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯ ಪತಿ ಅದನ್ನು ತನ್ನ ಫೋನಿನಲ್ಲಿ ಸೆರೆಹಿಡಿದಿದ್ದಾನೆ. ಅದನ್ನು ಮಹಿಳೆ ಡಿಲೀಟ್ ಮಾಡಲು ಪತಿಯ ಫೋನ್‍ ಅನ್ನೇ ಕಳ್ಳತನ ಮಾಡಲು ಹೇಳಿದ್ದಾಳೆ. ಇಂತಹ ದುಷ್ಕೃತ್ಯಕ್ಕಾಗಿ ಈಗ ಅವಳು ಪೊಲೀಸರ ಅತಿಥಿಯಾಗಿದ್ದಾಳೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ಪತಿ ಮೊಬೈಲ್‌ ಕಳ್ಳತನಕ್ಕೆ ಪತ್ನಿಯಿಂದಲೇ ಸುಪಾರಿ!

Profile pavithra Jul 12, 2025 2:04 PM

ನವದೆಹಲಿ: ಇತ್ತೀಚೆಗೆ ದಕ್ಷಿಣ ದೆಹಲಿಯ ಸುಲ್ತಾನ್‌ಪುರ ಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಫೋನ್ ಕಳ್ಳತನ ಮಾಡಲು ಇಬ್ಬರು ಪುರುಷರ ಸಹಾಯ ಕೋರಿದ್ದು, ಆ ಫೋನ್‌ನಲ್ಲಿರುವ ತನ್ನ ಪ್ರೇಮಿಯೊಂದಿಗೆ ಇದ್ದ ಖಾಸಗಿ ಫೋಟೋಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಒಬ್ಬ ಅಂಕಿತ್ ಗಹ್ಲೋಟ್ (27) ಅವನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ಮಾಡಿದ್ದಾಗ ಆ ಮಹಿಳೆ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ಆಕೆಯ ಪತಿಯ ಫೋನ್‌ನಲ್ಲಿ ಅವರ ಫೋಟೋಗಳಿವೆ. ಅದನ್ನು ಡಿಲೀಟ್ ಮಾಡಲು ಅವಳು ಈ ಕೆಲಸ ಮಾಡಲು ಹೇಳಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಮಾಹಿತಿ ಪ್ರಕಾರ, ಆ ಮಹಿಳೆ ತನ್ನ ಪತಿಯ ದಿನಚರಿಯ ಕುರಿತು ಇಬ್ಬರಿಗೂ ಮಾಹಿತಿ ಒದಗಿಸಿದ್ದಳು. ಹಾಗಾಗಿ ಅವರು ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಸುಲ್ತಾನ್‌ಪುರದ ಮುಖ್ಯ ಮಾರುಕಟ್ಟೆ ರಸ್ತೆಯ ಓಲ್ಡ್ ಯುಕೆ ಪೇಂಟ್ ಫ್ಯಾಕ್ಟರಿ ಬಳಿ ಮೊಬೈಲ್ ಕಳ್ಳತನದ ಬಗ್ಗೆ ಪೊಲೀಸರಿಗೆ ಕರೆ ಬಂದಿದೆ.ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಸ್ಕೂಟರ್‌ನಲ್ಲಿ ಬಂದು ತನ್ನ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾನೆ. ಸ್ಕೂಟರ್ ನೋಂದಣಿ ಸಂಖ್ಯೆಯನ್ನು ಗುರುತಿಸಿ ಪೊಲೀಸರು ಮಾಹಿತಿ ಕಲೆಹಾಕಿದಾಗ ಸ್ಕೂಟರ್ ಅನ್ನು ದರಿಯಾಗಂಜ್‌ನಿಂದ ಒಂದೇ ದಿನಕ್ಕೆ ಬಾಡಿಗೆಗೆ ಪಡೆಯಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಬಾಡಿಗೆ ದಾಖಲೆಗಳು ಮತ್ತು ಆಧಾರ್-ಲಿಂಕ್ಡ್ ಡೇಟಾವನ್ನು ಬಳಸಿಕೊಂಡು, ಆರೋಪಿಗಳನ್ನು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾದಲ್ಲಿ ಪತ್ತೆಹಚ್ಚಲಾಯಿತು. ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಸಹಚರನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪ್ರೀತಿಸಿ ಮದ್ವೆಯಾದ ಜೋಡಿಗೆ ಇದೆಂಥಾ ಶಿಕ್ಷೆ? ನೊಗಕ್ಕೆ ಕಟ್ಟಿ ಉಳಮೆ ಮಾಡಿಸಿದ ಜನ- ವಿಡಿಯೊ ನೋಡಿ

ಪತಿಯ ಅನೈತಿಕ ಸಂಬಂಧದಿಂದ ಜೀವನದಲ್ಲಿ ಬೇಸತ್ತ 34 ವರ್ಷದ ಮಹಿಳೆಯೊಬ್ಬಳು ತನ್ನ ನಾಲ್ಕು ವರ್ಷದ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಮಯ್ಯ ಲೇಔಟ್​ ನಡೆದಿದೆ.ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ರುತಿ, ಮೊದಲು ತಮ್ಮ ಮಗಳು ರೋಶಿನಿಯನ್ನು ದುಪ್ಪಟ್ಟಾ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.