ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Joe Root: ದ್ರಾವಿಡ್‌ ವಿಶ್ವ ದಾಖಲೆ ಮುರಿದ ಜೋ ರೂಟ್‌

ಸ್ಲಿಪ್‌ನಲ್ಲಿ ಕರುಣ್‌ ನಾಯರ್‌ ಅವರ ಅಸಾಮಾನ್ಯ ಕ್ಯಾಚ್‌ ಹಿಡಿಯುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದದ ವಿಶ್ವದಾಖಲೆ ಬರೆದರು. ಜೋ ರೂಟ್‌ ಸದ್ಯ 211* ಕ್ಯಾಚ್‌ ಹಿಡಿದಿದ್ದು, ರಾಹುಲ್‌ ದ್ರಾವಿಡ್‌(210) ಅವರ ವಿಶ್ವ ದಾಖಲೆಯನ್ನು ಮುರಿದರು.

ದ್ರಾವಿಡ್‌ ವಿಶ್ವ ದಾಖಲೆ ಮುರಿದ ಜೋ ರೂಟ್‌

Profile Abhilash BC Jul 12, 2025 12:29 PM

ಲಂಡನ್‌: ಇಲ್ಲಿನ ಲಾರ್ಡ್ಸ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಿತ್ತಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌( IND vs ENG 3rd Test) ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಸ್ಟಾರ್‌ ಆಟಗಾರ ಜೋ ರೂಟ್‌(Joe Root) ಅವರು ಕನ್ನಡಿಗ ರಾಹುಲ್‌ ದ್ರಾವಿಡ್‌(Rahul Dravid) ಅವರ ಶತಕ ದಾಖಲೆ ಮಾತ್ರವಲ್ಲದೆ ಕ್ಯಾಚ್‌ ದಾಖಲೆಯನ್ನು ಮುರಿದು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಸ್ಲಿಪ್‌ನಲ್ಲಿ ಕರುಣ್‌ ನಾಯರ್‌ ಅವರ ಅಸಾಮಾನ್ಯ ಕ್ಯಾಚ್‌ ಹಿಡಿಯುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದದ ವಿಶ್ವದಾಖಲೆ ಬರೆದರು. ಜೋ ರೂಟ್‌ ಸದ್ಯ 211* ಕ್ಯಾಚ್‌ ಹಿಡಿದಿದ್ದು, ರಾಹುಲ್‌ ದ್ರಾವಿಡ್‌(210) ಅವರ ವಿಶ್ವ ದಾಖಲೆಯನ್ನು ಮುರಿದರು.

ಟೆಸ್ಟ್‌ನಲ್ಲಿ ಅತ್ಯಧಿಕ ಕ್ಯಾಚ್‌

ಜೋ ರೂಟ್‌-211*

ರಾಹುಲ್‌ ದ್ರಾವಿಡ್‌-210

ಮಹೇಲಾ ಜಯವರ್ಧನೆ-205

ಸ್ಟೀವನ್‌ ಸ್ಮಿತ್‌-200*

ಜಾಕ್‌ ಕ್ಯಾಲಿಸ್‌-200



ಟೆಸ್ಟ್‌ ವೃತ್ತಿ ಜೀವನದ 37ನೇ ಶತಕ ಪೂರ್ತಿಗೊಳಿಸಿದ ರೂಟ್‌, ಗರಿಷ್ಠ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಾಗುಲ್‌ ದ್ರಾವಿಡ್‌ ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದರು. ಭಾರತ ವಿರುದ್ಧ ರೂಟ್‌ ಅವರ 11 ಶತಕ ಇದಾಗಿದೆ.

ಅತ್ಯಧಿಕ ಟೆಸ್ಟ್‌ ಶತಕ ಸಾಧಕರು

ಸಚಿನ್‌ ತೆಂಡೂಲ್ಕರ್‌-51 ಶತಕ

ಜಾಕ್‌ ಕ್ಯಾಲಿಸ್‌-45 ಶತಕ

ರಿಕಿ ಪಾಂಟಿಂಗ್‌-41 ಶತಕ

ಕುಮಾರ್‌ ಸಂಗಕ್ಕರ- 38 ಶತಕ

ಜೋ ರೂಟ್‌-37* ಶತಕ

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ರೂಟ್‌ ಬಾರಿಸಿದ 8ನೇ ಟೆಸ್ಟ್‌ ಶತಕ ಇದಾಗಿದೆ. ಈ ಮೈದಾನದಲ್ಲಿ ಅತ್ಯಧಿಕ ಟೆಸ್ಟ್‌ ಶತಕ ಬಾರಿಸಿದ ದಾಖಲೆ ಅವರ ಹೆಸರಿನಲ್ಲಿಯೇ ಇತ್ತು. ಇದೀಗ ಮತ್ತೊಂದು ಶತಕವನ್ನು ಈ ಪಟ್ಟಿಗೆ ಸೇರಿಸಿದ್ದಾರೆ. ಒಟ್ಟು 24 ಪಂದ್ಯ 42 ಇನಿಂಗ್ಸ್‌ ಆಡಿದ್ದಾರೆ. ಇಲ್ಲಿ ಅವರ ಗರಿಷ್ಠ ವೈಯಕ್ತಿಕ ಮೊತ್ತ 200* ರನ್‌ ಆಗಿದೆ. 8 ಅರ್ಧಶತಕ ಬಾರಿಸಿದ್ದಾರೆ. ಕೇವಲ ಒಂದು ಬಾರಿ ಶೂನ್ಯ ಸಂಕಟಕ್ಕೆ ಸಿಲುಕಿದ್ದಾರೆ. ರೂಟ್‌ ಬಳಿಕ ಲಾರ್ಡ್ಸ್‌ನಲ್ಲಿ ಮಾಜಿ ನಾಯಕರಾದ ಮೈಕಲ್‌ ವಾನ್‌ ಮತ್ತು ಗ್ರಹಾಂ ಗೂಚ್‌ ತಲಾ 6 ಟೆಸ್ಟ್‌ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ IND vs ENG: 3 ವಿಕೆಟ್‌ ಕಳೆದುಕೊಂಡು ಭಾರತ ತಂಡಕ್ಕೆ ಕೆಎಲ್‌ ರಾಹುಲ್‌ ಆಸರೆ!