ಸೊನಾಲಿಕಾ 2026ರ ಹಣಕಾಸು ವರ್ಷದಲ್ಲಿ ಕ್ಯೂ1ರ ಅತ್ಯಂತ ಹೆಚ್ಚು 43,603 ಟ್ರಾಕ್ಟರ್ ಗಳ ಮಾರಾಟದಿಂದ ದಾಖಲೆ ಸೃಷ್ಟಿ
ಸೊನಾಲಿಕಾ ಪ್ರತಿ ರೈತನೂ ಬೆಳೆ ಮತ್ತು ಮಣ್ಣಿನ ಅಗತ್ಯಗಳಿಗೆ ಹೊಂದುವಂತೆ ಉತ್ಪನ್ನವನ್ನು ಸೊನಾ ಲಿಕಾ ದೃಢೀಕರಿಸುತ್ತದೆ. ಕಂಪನಿಯು 400+ ಅತ್ಯಂತ ಕುಶಲಿ ಎಂಜಿನಿಯರಿಂಗ್ ಪರಿಣಿತರನ್ನು ಹೊಂದಿ ದ್ದು ಅವರು ರೈತರ ಅಭಿಪ್ರಾಯದ ಪ್ರತಿ ಯೊಂದು ಅಂಶವನ್ನೂ ಅಳವಡಿಸಿಕೊಳ್ಳುವ ಮೂಲಕ ಅತ್ಯಂತ ಸುಧಾರಿತ ಅತ್ಯಾಧುನಿಕ ರೊಬೊಟಿಕ್ ಮತ್ತು ಆಟೊಮೇಷನ್ ತಂತ್ರಗಳ ಮೂಲಕ ಅತ್ಯಂತ ಉನ್ನತ ಮಾನದಂಡಗಳನ್ನು ಪೂರೈಸುತ್ತದೆ.


ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಟ್ರಾಕ್ಟರ್ಸ್ ರೈತರಿಗೆ ಉತ್ತಮ ಉತ್ಪಾದಕತೆ ಮತ್ತು ಸಂಪತ್ತು ತರಲು ವಿಶೇಷವಾಗಿ ರೂಪಿಸಿದ ತನ್ನ ಹೆವಿ ಡ್ಯೂಟಿ ಟ್ರಾಕ್ಟರ್ ಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸಲು ಖ್ಯಾತಿ ಪಡೆದಿದೆ. ಈ ವಿಧಾನವು ಕಂಪನಿಗೆ 2026ರ ಹಣಕಾಸು ವರ್ಷದಲ್ಲಿ ಹೊಸ ದಾಖಲೆ ಮುರಿಯುವ ಕಾರ್ಯಕ್ಷಮತೆ ದಾಖಲಿಸಲು ಸನ್ನದ್ಧವಾಗಿಸಿದ್ದು ಏಪ್ರಿಲ್-ಜೂನ್ 2025ರಲ್ಲಿ ಅತ್ಯಂತ ಹೆಚ್ಚು ಕ್ಯೂ1 ಒಟ್ಟಾರೆ ಮಾರಾಟ 43,603 ಟ್ರಾಕ್ಟರ್ ಗಳ ಮಾರಾಟ ಕಂಡಿದೆ. ಈ ಮಹತ್ತರ ದಾಪುಗಾಲು ಪ್ರತಿ ರೈತನಿಗೂ `ದಮ್ ಆಗೆ ಬಢೇಕಾ’ ಭರವಸೆಗೆ ಮತ್ತು ತನ್ನ ಅತ್ಯಾಧುನಿಕ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು 20-120 ಎಚ್.ಪಿ. ಟ್ರಾಕ್ಟರ್ ವಲಯದಲ್ಲಿ ನೀಡುವುದಕ್ಕೆ ಸಾಕ್ಷಿಯಾಗಿದೆ.
ದೇಶಾದ್ಯಂತ ಮಳೆಗಾಲವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಮುಂಗಾರಿನ ಬಿತ್ತನೆ ಋತುವಿನಲ್ಲಿ ಗಮನಾರ್ಹ ಹೆಚ್ಚಳ ಕಂಡಿದೆ. ಸೊನಾಲಿಕಾ ಪ್ರತಿ ರೈತನೂ ಬೆಳೆ ಮತ್ತು ಮಣ್ಣಿನ ಅಗತ್ಯಗಳಿಗೆ ಹೊಂದುವಂತೆ ಉತ್ಪನ್ನವನ್ನು ಸೊನಾಲಿಕಾ ದೃಢೀಕರಿಸುತ್ತದೆ. ಕಂಪನಿಯು 400+ ಅತ್ಯಂತ ಕುಶಲಿ ಎಂಜಿನಿಯರಿಂಗ್ ಪರಿಣಿತರನ್ನು ಹೊಂದಿದ್ದು ಅವರು ರೈತರ ಅಭಿಪ್ರಾಯದ ಪ್ರತಿ ಯೊಂದು ಅಂಶವನ್ನೂ ಅಳವಡಿಸಿಕೊಳ್ಳುವ ಮೂಲಕ ಅತ್ಯಂತ ಸುಧಾರಿತ ಅತ್ಯಾಧುನಿಕ ರೊಬೊಟಿಕ್ ಮತ್ತು ಆಟೊಮೇಷನ್ ತಂತ್ರಗಳ ಮೂಲಕ ಅತ್ಯಂತ ಉನ್ನತ ಮಾನದಂಡಗಳನ್ನು ಪೂರೈಸುತ್ತದೆ. ಕಂಪನಿಯು ಪಂಜಾಬಿನ ಹೊಷಿಯಾರ್ ಪುರದಲ್ಲಿನ ವಿಶ್ವದ ನಂ.1 ಪೂರ್ಣ ಏಕೀಕೃತ ಟ್ರಾಕ್ಟರ್ ಉತ್ಪಾದನಾ ಘಟಕದಲ್ಲಿ ಪ್ರತಿ 2 ನಿಮಿಷಕ್ಕೆ ಒಂದು ಹೊಸ ಟ್ರಾಕ್ಟರ್ ಹೊರ ತರುತ್ತದೆ.
ಇದನ್ನೂ ಓದಿ: Keshava Prasad B Column: ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!
ಈ ಸಾಧನೆ ಕುರಿತು ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್ ಮಿಟ್ಟಲ್ , “ನಾವು ಸದಾ ನಮ್ಮ `ದಮ್ ಆಗೆ ಬಡ್ನೇ ಕಾ’ ಎಂಬ ಭರವಸೆ ನೀಡುವ ಪ್ರತಿಯೊಬ್ಬ ರೈತನ ಪ್ರಯಾಣಕ್ಕೂ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದು ಕ್ಯೂ1ರ ಒಟ್ಟಾರೆ 43,603 ಟ್ರಾಕ್ಟರ್ ಗಳ ದಾಖಲೆ ಮಾರಾಟಕ್ಕೆ ನಮ್ಮನ್ನು ಕೊಂಡೊಯ್ದಿದೆ, ಇದರಲ್ಲಿ ನಮ್ಮಸಾರ್ವಕಾಲಿಕ ಜೂನ್ ತಿಂಗಳ ಸಾಧನೆಯೂ ಒಳಗೊಂಡಿದೆ.
ಮಳೆಗಾಲವು ರೈತರಲ್ಲಿ ಈಗಾಗಲೇ ಆಶಾವಾದ ತಂದಿದೆ ಮತ್ತು ದಾಖಲೆ ಪ್ರಮಾಣದ ಮುಂಗಾರು ಬಿತ್ತನೆ ಮತ್ತು ಆಶಾಭಾವನೆಯ ಬೆಳೆ ಅಂದಾಜುಗಳಿಂದ ರೈತರಿಗೆ ಉತ್ತಮ ಆದಾಯದ ಹರಿವು ಸಾಧ್ಯವಿದೆ. ನಾವು ನಮ್ಮ ಕೇಂದ್ರ ಮೌಲ್ಯಗಳ ಅನುಷ್ಠಾನ ಮುಂದುವರಿಸುತ್ತೇವೆ ಮತ್ತು ನಮ್ಮ `ರೈತ-ಪ್ರಥಮ’ ನಂಬಿಕೆಯನ್ನು ಆವಿಷ್ಕಾರ ಮತ್ತು ತಂತ್ರಜ್ಞಾನದಿಂದ ಬೆಂಬಲಿಸುವ ಮೂಲಕ ಪ್ರತಿನಿತ್ಯ ರೈತರ ಜೀವನದಲ್ಲಿ ದೀರ್ಘಾವಧಿ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತೇವೆ” ಎಂದರು.