Haryana Shootout: ಜಮೀನಿನ ವಿವಾದ ; ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಂದ ಹಂತಕ
ಭೂ ವಿವಾದಕ್ಕೆ ಸಂಬಂಧಿಸಿದಂತೆ ಹರಿಯಾಣದ ಸೋನಿಪತ್‌ನ ಬಿಜೆಪಿ ನಾಯಕ ಸುರೇಂದ್ರ ಜವಾಹರ್ ಅವರನ್ನು ಶುಕ್ರವಾರ ರಾತ್ರಿ ಅಂಗಡಿಯೊಂದರೊಳಗೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ . ಆರೋಪಿ ಮೋನು ಬಿಜೆಪಿ ನಾಯಕನ ಮೇಲೆ ಕನಿಷ್ಠ ಎರಡು ಗುಂಡುಗಳನ್ನು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು

ಚಂಡೀಗಢ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಹರಿಯಾಣದ ಸೋನಿಪತ್‌ನ ಬಿಜೆಪಿ ನಾಯಕ ಸುರೇಂದ್ರ ಜವಾಹರ್ ಅವರನ್ನು ಶುಕ್ರವಾರ ರಾತ್ರಿ ಅಂಗಡಿಯೊಂದರೊಳಗೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ . ಆರೋಪಿ ಮೋನು ಬಿಜೆಪಿ ನಾಯಕನ ಮೇಲೆ ಕನಿಷ್ಠ ಎರಡು ಗುಂಡುಗಳನ್ನು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದೆ. ಗುಂಡು ಹಾರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮೋನು ಸುರೇಂದ್ರ ಜವಾಹರ್ ಅವರ ಅಂಗಡಿಗೆ ನುಗ್ಗಿದ್ದಾನೆ. ನಂತರ ಅವರನ್ನು ತಳ್ಳಿ ತಲೆಗೆ ಬಂದೂಕು ಇಟ್ಟಿದ್ದಾನೆ. ಸುರೇಂದ್ರ ಜವಾಹರ್ ಜೋರಾಗಿ ಕೂಗಿಕೊಂಡಿದ್ದಾರೆ
ಎರಡರಿಂದ ಮೂರು ಜನರು ಮೋನುವನ್ನು ತಡೆಯಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸುರೇಂದ್ರ ಜವಾಹರ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶನಿವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Haryana: होली पर सोनीपत में BJP नेता की गोली मारकर हत्या, जमीनी विवाद में उतारा मौत के घाट. पड़ोसी ने जमीनी विवाद में BJP नेता सुरेंद्र जवाहरा पर 3 राउंड फायर कर दिया. इस फायरिंग में सुरेंद्र की मौत हो गई.#HaryanaPolice pic.twitter.com/4oyTUpwCHc
— Anaya Sharma (अनाया शर्मा) (@Anayasharma01) March 15, 2025
ಪ್ರಾಥಮಿಕ ತನಿಖೆಯಲ್ಲಿ ಸುರೇಂದ್ರ ಜವಾಹರ್ ಮೋನುನ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಂದ ಭೂಮಿಯನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಅಂದಿನಿಂದ, ಜಮೀನಿನ ಬಗ್ಗೆ ಇಬ್ಬರ ನಡುವೆ ಪೈಪೋಟಿ ನಡೆಯುತ್ತಿತ್ತು. ಮೋನು, ಸುರೇಂದ್ರ ಜವಾಹರ್‌ಗೆ ಜಮೀನಿಗೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಇದರಿಂದಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿ ನಾಯಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Punjab Shootout : ಪಂಜಾಬ್ ಶಿವಸೇನಾ ನಾಯಕನ ಹತ್ಯೆ ಪ್ರಕರಣ; ಕೊಲೆಗೂ ಮೊದಲಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪಂಜಾಬ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಶಿವಸೇನಾ ಪಕ್ಷದ ನಾಯಕರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮೋಗಾ ಜಿಲ್ಲಾಧ್ಯಕ್ಷರಾಗಿದ್ದ ಮಂಗತ್ ರೈ ಹಾಲು ಖರೀದಿಸಲು ಸ್ಕೂಟರ್‌ನಲ್ಲಿ ಮನೆಯಿಂದ ಹೊರಬಂದಾಗ ಅವರ ಮೇಲೆ ದಾಳಿ ನಡೆಸಲಾಯಿತು. ಅವರು ತಮ್ಮ ಮೇಲೆ ಹಾರಿಸಲಾದ ಹಲವಾರು ಗುಂಡುಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು, ಆದರೆ ಅದು ಸಾಧ್ಯವಾಗದೆ ಮೃತಪಟ್ಟಿದ್ದಾರೆ.