ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮಾ.16 ರಿಂದ ಮೇ 15 ಎರಡು ತಿಂಗಳ ಅವಧಿ ಮಾತ್ರ ರೈತರ ಪ್ರತಿ ಲೀಟರ್ ಮೇಲೆ 1 ರೂ. ಹೆಚ್ಚಳ ಘೋಷಣೆ

ಕೋರ್ಟಿನ ನಿರ್ದೇಶನದಂತೆ ಸಿಬ್ಬಂದಿ ಸ್ಥಿರಾಸ್ತಿ ಚರಾಸ್ತಿ, ಮಾರುಕಟ್ಟೆ ಸರಹದ್ದು ಎಲ್ಲವೂ ಸೇರಿ ಶೇ.53ರಷ್ಟು ಕೋಲಾರಕ್ಕೆ ಮತ್ತು ಶೇ 47ರಷ್ಟು ಚಿಕ್ಕಬಳ್ಳಾಪುರಕ್ಕೆ ಎಂಬ ಐಕ್ಯಮತದಲ್ಲಿ 53/ 47ರ ಅನುಪಾತದಲ್ಲಿ ವಿಭಜನೆ ಆಗಿದ್ದು ಮಾ.1, 2025ರಿಂದಲೇ ಸ್ವತಂತ್ರವಾಗಿ ಚಿಮುಲ್ ಆರ್ಥಿಕ ವಹಿವಾಟು ನಡೆಸುತ್ತಿದೆ ಎಂದರು.

ಹೈನುಗಾರರ ಹಿತರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ

ಚಿಕ್ಕಬಳ್ಳಾಪುರ ನಗರ ಹೊರವಲಯ ಚಿಮುಲ್ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು.

Profile Ashok Nayak Mar 15, 2025 7:21 PM

ಚಿಕ್ಕಬಳ್ಳಾಪುರ: ಬೇಸಿಗೆ ಕಾಲವನ್ನು ಗಮನದಲ್ಲಿರಿಸಿಕೊಂಡು  ಜಿಲ್ಲೆಯ ಜೀವನಾಡಿ ಯಾಗಿರುವ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಮಾ.16ರಿಂದಲೇ ಜಾರಿಗೆ ಬರು ವಂತೆ ಮೇ 15 ರವರೆಗೆ ಎರಡು ತಿಂಗಳ ಕಾಲ ರೈತರಿಗೆ ಪ್ರತಿ ಲೀಟರ್ ಮೇಲೆ ಈಗಿರುವ 31.40 ಪೈಸೆಗೆ ಹೆಚ್ಚುವರಿಯಾಗಿ 1 ರೂಪಾಯಿ ಸೇರಿಸಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಘೋಷಣೆ ಮಾಡಿದರು. ನಗರ ಹೊರವಯ ಚಿಮುಲ್ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ದರು.

ನಾವಾಗಲಿ ನಮ್ಮ ಸರಕಾರವಾಗಲಿ ಕೋಚಿಮುಲ್ ವಿಭಜನೆ ವಿರುದ್ಧವಾಗಿ ನಿಂತಿರಲಿಲ್ಲ. ಬದಲಿಗೆ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡ ನಂತರವೇ ವೈಜ್ಞಾನಿಕವಾಗಿ ವಿಭಜನೆ ಆಗಲಿ ಎನ್ನುವುದಾಗಿತ್ತು.

ಇದನ್ನೂ ಓದಿ: Chikkaballapur News: ಕೈವಾರ ತಾತಯ್ಯ ಬರೆದಿರುವ ಕಾಲಜ್ಞಾನ ಎಂದೆಂದಿಗೂ ಅಜರಾಮರ: ತಹಸೀಲ್ದಾರ್ ಮಹೇಶ್ ಪತ್ರಿ

ಚಿಮುಲ್ ಸ್ವತಂತ್ರ
ಆದರೆ ಹಿಂದಿನ ಸರಕಾರದಲ್ಲಿ ತರಾತುರಿಯಲ್ಲಿ ವಿಭಜನೆ ಮಾಡಿ ಗೊಂದಲಕ್ಕೆ ಕಾರಣ ವಾಗಿದ್ದೇ ಅಲ್ಲದೆ,ನಿರ್ದೇಶಕರಲ್ಲಿ ಅಭದ್ರತೆ ಉಂಟು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದರಿಂದ ವಿಳಂಬವಾಗಿತ್ತು. ಕೋರ್ಟಿನ ನಿರ್ದೇಶನದಂತೆ ಸಿಬ್ಬಂದಿ ಸ್ಥಿರಾಸ್ತಿ ಚರಾಸ್ತಿ, ಮಾರುಕಟ್ಟೆ ಸರಹದ್ದು ಎಲ್ಲವೂ ಸೇರಿ ಶೇ.53ರಷ್ಟು ಕೋಲಾರಕ್ಕೆ ಮತ್ತು ಶೇ 47 ರಷ್ಟು ಚಿಕ್ಕಬಳ್ಳಾಪುರಕ್ಕೆ ಎಂಬ ಐಕ್ಯಮತದಲ್ಲಿ 53/47ರ ಅನುಪಾತದಲ್ಲಿ ವಿಭಜನೆ ಆಗಿದ್ದು ಮಾ.1 2025ರಿಂದಲೇ  ಸ್ವತಂತ್ರವಾಗಿ ಚಿಮುಲ್ ಆರ್ಥಿಕ ವಹಿವಾಟು ನಡೆಸು ತ್ತಿದೆ ಎಂದರು.

ಬೀಜವಿತರಣೆ
ಚಿಮುಲ್ ಪ್ರತ್ಯೇಕವಾದ ಮೇಲೆ ನೀರಾವರಿ ಸೌಲಭ್ಯವುಳ್ಳ ರೈತರಿಗೆ ರಿಯಾಯಿತಿ ಧರದಲ್ಲಿ ಮೇವಿನ ಬೀಜಗಳನ್ನು ವಿತರಿಸಿ ಸುಮಾರು 1500 ಎಕರೆ ಪ್ರದೇಶದಲ್ಲಿ ಹಸಿರು ಮೇವು ಬೆಳೆಸಲು ಪ್ರತೀ ಎಕರೆಗೆ ರೂ.3500.0 ಗಳಂತೆ ಅಂದಾಜು ರೂ.52.50 ಲಕ್ಷಗಳ ಪ್ರೋತ್ಸಾಹ ಧನ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಶೇ.50 ದರದಲ್ಲಿ ಉತ್ಪಾದಕರಿಗೆ 1000 ಕ್ವಿಂಟಾಲ್ ಎಟಿಎಂ ಜೋಳ, 1000 ಕ್ವಿಂಟಾಲ್ ಎಸ್‌ಎಸ್‌ಜಿ, 100 ಕ್ವಿಂಟಾಲ್ ಅಲಸಂಧಿ ಬೀಜಗಳ ವಿತರಣೆಗೆ ಕ್ರಮವಹಿಸಲಾಗಿದೆ ಎಂದರು.

ಗುಂಪು ವಿಮೆ
ಜಿಲ್ಲೆಯ ಚಿಮುಲ್ ವ್ಯಾಪ್ತಿಯಲ್ಲಿ ಬರುವ 985 ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು ಇಲ್ಲಿರುವ 55 ರಿಂದ 60 ಸಾವಿರ ರಾಸುಗಳಿಗೆ ಶೇ.50ರ ರಿಯಾಯಿತಿ ಧರದಲ್ಲಿ ಗುಂಪು ವಿಮೆ ಯೋಜನೆಯನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಒಕ್ಕೂಟದ ವಿಭಜನೆಯ ನಂತರ ಹಾಲು ಉತ್ಪಾದಕರಿಗೆ ವಿಳಂಭವಾಗದೆ ಸಕಾಲಕ್ಕೆ ಬಟವಾಡೆಯನ್ನು ಪಾವತಿ ಮಾಡಲಾಗು ತ್ತಿದೆ. ಒಕ್ಕೂಟ ವ್ಯಾಪ್ತಿಯ 985 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ೬೮೭ ಸಂಘಗಳಿಗೆ ಎ.ಎಂ.ಸಿ.ಯು ಇದ್ದು, ಉಳಿದ300 ಹಾ.ಉ. ಸ.ಸಂಘಗಳಲ್ಲಿ ಎ.ಎಂ.ಸಿ.ಯು ಗಳನ್ನು ಅಳವಡಿಸಿ ರಾಷ್ಟ್ರೀಯ ಹೈನೋಧ್ಯಮ ಅಭಿವೃದ್ದಿ ಮಂಡಳಿ ಅಭಿವೃದ್ಧಿ ಪಡಿಸಿ ರುವ ಸಾಪ್ಟ್ವೇರ್ ಅಳವಡಿಸಲು ಅಂದಾಜು ವೆಚ್ಚ ರೂ.6.0 ಕೋಟಿಗಳು. ಖರ್ಚಾಗಲಿದ್ದು ¸ಈ ಸಂಬಂಧ ಯೋಜನೆ ರೂಪಿಸಲಾಗಿದೆ ಎಂದರು.

ಕಲಬೆರಕೆಗೆ ತಡೆ
ಚಿಮುಲ್ ಒಕ್ಕೂಟ ವ್ಯಾಪ್ತಿಯಲ್ಲಿ ಇರುವ 170 ಬಿ.ಎಂ.ಸಿ ಕೇಂದ್ರಗಳಲ್ಲಿ ಹಾಲಿಗೆ ನೀರನ್ನು ಬೆರೆಸಿ ಗುಣಮಟ್ಟ ಹಾಳುಮಾಡುತ್ತಿರುವುದನ್ನು ತಪ್ಪಿಸಲು ಮತ್ತು ಈ ವ್ಯವಹಾರಗಳನ್ನು ಮಾನಿಟರ್ ಮಾಡಲು ಅಂದಾಜು ರೂ.36,11,೦೦೦.೦೦ ವೆಚ್ಚದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.ಕಲಬೆರಕೆ ಕೇವಲ ಚಿಂತಾಮಣಿಯಲ್ಲಿ ತಾಲೂ ಕಿನಲ್ಲಿ ಮಾತ್ರ ಆಗುತ್ತಿಲ್ಲ, ಜಿಲ್ಲೆಯ ಎಲ್ಲಾ ಕಡೆ ಆಗಿರುವ ಬಗ್ಗೆ ನನಗೆ ಮಾಹಿತಿಯಿದೆ. ಇದಕ್ಕೆ ಕಡಿವಾಣ ಹಾಕಲು ಬೇಕಾದ ಉಪಕ್ರಮಗಳನ್ನು ಚಿಮುಲ್ ಕೈಗೊಳ್ಳಲಿದೆ. ತಪ್ಪಿ ತಸ್ಥರಿಗೆ ಶಿಕ್ಷೆ ಆಗಲಿದೆ. ಫ್ಯಾಟ್‌ಬಗ್ಗೆ ಇರುವಲ್ಲಿಯೇ ಮಾಹಿತಿ ಪಡೆದುಕೊಳ್ಳುವ ಅವಕಾಶ ವಿದ್ದು ಈಬಗ್ಗೆ ರೈತರಿಗೆ ತಿಳುವಳಿಕೆ ನೀಡಲಾಗುವುದು ಎಂದರು.

ಹಾಲು ಉತ್ಪಾದನೆ ಹೆಚ್ಚಳ
೨೦೨೩-೨೪ ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಪ್ರತಿದಿನ ಸರಾಸರಿ ೬೮೬೮೪ಲೀಟರ್ ಹಾಲು ಉತ್ಪಾದನೆ ಆಗಿತ್ತು,೨೦೨೪-೨೫ ನೇ ಸಾಲಿನಲ್ಲಿ ೭೦೬೨೫ ಲೀಟರ್ ಹಾಲು ಉತ್ಪಾ ದನೆಯಾಗಿ ಒಟ್ಟಾರೆ ಜಿಲ್ಲೆಯಲ್ಲಿ ಶೇ.೨.೮ರಷ್ಟು ಉತ್ಪಾದನೆ ಬೆಳವಣಿಗೆಯಾಗಿದೆ. ೨೦೨೩-೨೪ ರಲ್ಲಿ ಜಿಲ್ಲೆಯಲ್ಲಿ ಒಟ್ಟು ೩, ೯೪,೬೯೪ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ೨೦೨೪-೨೫ ನೇ ಸಾಲಿನಲ್ಲಿ ೪,೪೨೨೯  ಉತ್ಪಾದನೆ ಆಗಿ ೧೨.೦೮ ಬೆಳವಣಿಗೆಯಾಗಿದೆ ಎಂದರು.

ಸಕಾಲಕ್ಕೆ ಬಟವಾಡೆ
ಈ ಹಿಂದೆ ಕೋಚಿಮುಲ್‌ನಲ್ಲಿದ್ದಾಗ ಹಾಲು ಉತ್ಪಾದಕರಿಗೆ ಮೂರು ವಾರಕ್ಕೊಮ್ಮೆ ಹಾಲಿನ ಬಿಲ್ ಬಟವಾಡೆ ಆಗುತ್ತಿತ್ತು. ಈಗ ಹಲವು ಸುಧಾರಣೆಗಳನ್ನು ಮಾಡಿ ಚಿಮುಲ್ ಎರಡು ವಾರಕ್ಕೊಮ್ಮೆ ಬಿಲ್ ಬಟವಾಡೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 153 ಕೋಟಿ ರೂಪಾಯಿ ವೆಚ್ಚದಲ್ಲಿ ಪನ್ನೀರ್ ಘಟಕ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಈಗಾಗಲೇ ಚಿಂತಾಮಣಿಗೆ 60 ಕೋಟಿ ರೂಪಾಯಿ ವೆಚ್ಚದ ಐಸ್‌ಕ್ರೀಂ ಘಟಕ ಮಂಜೂರಾಗಿದೆ. ಚಿಮುಲ್‌ನ ಮೆಗಾಡೇರಿಗೆ ಹೊಂದಿಕೊAಡಿರುವ ತೋಟಗಾರಿಕೆ ಇಲಾಖೆ ಯ ೯ ಎಕರೆ ೧೫ ಗುಂಟೆ ಭೂಮಿಯನ್ನು ಚಿಮುಲ್‌ಗೆ ಹಸ್ತಾಂತರಿಸಿ ಪ್ಯಾಕಿಂಗ್ ಘಟಕ ಮತ್ತಿತರ ಘಟಕಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು.
ಸ್ವತಂತ್ರ ಕಾರ್ಯನಿರ್ವಹಣೆ
ದಿನಾಂಕ:೦೧.೦೧.೨೦೨೫ ರಿಂದ ಒಕ್ಕೂಟವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಕ್ಕೂಟದಲ್ಲಿ ವೆಚ್ಚಗಳನ್ನು ಕಡಿತ ಮಾಡಿ ಅಭಿವೃದ್ಧಿಯತ್ತ ದೃಷ್ಟಿ ನೆಡಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ರಿಕೆಟ್ಸ್ -ಉರುವಲು(ಬಯೋಮಾಸ್) ಖರೀದಿಯಲ್ಲಿ ಕಳೆದ ಸಾಲಿಗೆ ಹೋಲಿಸಿದಾಗ ರೂ.೫೦.೦ ಲಕ್ಷಗಳ ಉಳಿತಾಯ ಮಾಡಲಾಗಿದೆ.

ಚಿಂತಾಮಣಿ ಶೀಥಲ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಐಸ್‌ಕ್ರೀಂ ಘಟಕದ ರೆಫ್ರಿಜಿರೇಷನ್ ಇ-ಟೆಂಡರ್‌ನಲ್ಲಿ ಎಲ್-೧ ಗುತ್ತಿಗೆದಾರರೊಂದಿಗೆ ಧರ ಸಂಧಾನ ನಡೆಸಿ ರೂ.೩೬.೦ ಲಕ್ಷಗಳ ಉಳಿತಾಯ ಮಾಡಲಾಗಿದೆ. ಉತ್ಪಾದನಾ ಕೆಲಸಗಳನ್ನು ಎರಡು ಪಾಳಿಗೆ ಸೀಮಿತಗೊಳಿಸಿ ವಿದ್ಯುತ್ ಮತ್ತು ಬ್ರಿಕೆಟ್ ಬಳಕೆ ನಿಯಂತ್ರಣ ಮಾಡಿ ಪ್ರತೀ ಮಾಹೆ ಅಂದಾಜು ರೂ.೧೦.೦ ಲಕ್ಷಗಳು ಉಳಿತಾಯ ಮಾಡಿದೆ.

*

ಬಿ.ಎಂ.ಸಿ ಮಾರ್ಗಗಳನ್ನು ಪರಿಷ್ಕರಿಸಿ ೦೪ ಸಂಖ್ಯೆ ಬಿ.ಎಂ.ಸಿ ಮಾರ್ಗಗಳನ್ನು ರದ್ದುಪಡಿಸಿ ಮಾಹೆಯಾನ ಅಂದಾಜು ರೂ. ೪.೫೦ ಲಕ್ಷಗಳು ಉಳಿತಾಯ.ಹಾಲು ಮತ್ತು ಮೊಸರು, ಕೋ-ಪ್ಯಾಕಿಂಗ್ ವ್ಯವಸ್ಥೆಯನ್ನು ಕೋಲಾರ ಡೇರಿಯಿಂದ ಮದರ್‌ಡೇರಿ, ಯಲಹಂಕಗೆ ಬದಲಾವಣೆ ಮಾಡಿರುವುದರಿಂದ ಸಾಗಾಣಿಕಾ ವೆಚ್ಚ ಮಾಹೆಯಾನ ಅಂದಾಜು ರೂ.೧೦.೦ ಲಕ್ಷಗಳು ಉಳಿತಾಯ ಮಾಡಲಾಗಿದೆ.
--ಡಾ.ಎಂ.ಸಿ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು

ರೈತರಿಂದ ಹಾಲಿನ ಖರೀದಿ ಧರ ಲೀಟರ್‌ಗೆ ೧ ರೂಪಾಯಿ ಹೆಚ್ಚಳ ಮಾಡುವ ಮೂಲಕ ಚಿಮುಲ್ ರಾಜ್ಯದಲ್ಲಿ ಅತಿಹೆಚ್ಚು ರೈತರಿಗೆ ಹಣ ಕೊಡುತ್ತಿರುವ ೨ನೇ ಸ್ಥಾನದಲ್ಲಿದೆ. ಮೇಲಾಗಿ ಇಲ್ಲಿಗೆ ಹಾಲಿನ ಪ್ಯಾಕೇಟ್ ಯೂನಿಟ್ ಘಟಕ ತರಲು ಭೂಮಿಯ ಅಗತ್ಯವಿದೆ. ಇದನ್ನು ಕೂಡ ಗುರುತಿಸಲಾಗಿದ್ದು ಶೀಘ್ರವೇ ಯಾವ ಸ್ಥಳ ಎಂಬುದನ್ನು ಮಾಧ್ಯಮದ ಮೂಲಕ ತಿಳಿಸಲಾಗುವುದು. ಸದ್ಯ ಒಕ್ಕೂಟ ಲಾಭದಲ್ಲಿದ್ದು ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಗೆ ಆದ್ಯತೆ ನೀಡಲಾಗುವುದು ಎಂದರು.

ಚುನಾವಣೆ ಸದ್ಯಕ್ಕಿಲ್ಲ
ಕೋಲಾರದಲ್ಲಿ ಚುನಾವಣೆ ಬಗ್ಗೆ ಆಗುತ್ತಿರುವ ಘಟನೆಗಳನ್ನು ಗಮನಿಸುತ್ತಿದ್ದೇನೆ.ಅಲ್ಲಿ ಚುನಾವಣೆ ಹೇಗೆ ನಡೆಸಬೇಕು, ಯಾವ ರೀತಿಯಲ್ಲಿ ಪ್ರಕ್ರಿಯೆ ಸಾಗಬೇಕು ಎಂಬ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕಿದೆ.ಅದರಂತೆ ಇಲ್ಲಿಯೂ ಕೂಡ ಚುನಾವಣೆ ನಡೆಸಲು ಪ್ರಯತ್ನ ಸಾಗಿದೆ. ಈ ನಡುವೆ ಕ್ಷೇತ್ರವಿಂಗಡಣೆ ಆಗಬೇಕು.ಜಿಲ್ಲಾ ಮಟ್ಟದ ಸಹಕಾರ ಸಂಘದಲ್ಲಿ ಸದಸ್ಯರ ಸಂಖ್ಯೆ ಎಷ್ಟಿರಬೇಕು ಎಂಬ ಬಗ್ಗೆ ತೀರ್ಮಾನ ಮಾಡಬೇಕು. ನಂತರ ಇವೆಲ್ಲ ವನ್ನೂ ಸರ್ವಸದಸ್ಯರ ಸಭೆಯ ಗಮನಕ್ಕೆ ತಂದು ಅಲ್ಲಿ ಅನುಮೋದನೆ ತೆಗೆದುಕೊಂಡು ಮಾಡಬೇಕು.ಆದಷ್ಟು ಬೇಗನೆ ಚುನಾವಣೆ ನಡೆಸಲಾಗುವುದು ಎಂದು ಹೇಳುವ ಮೂಲಕ ವಿಳಂಭವಾಗುವ ಸೂಚನೆ ನೀಡಿದರು.

ಚಿಮುಲ್‌ಗೆ ಭೂಮಿ
ಚಿಮುಲ್‌ಗೆ ಹೊಂದಿಕೊಂಡಂತಿರುವ ತೋಟಗಾರಿಕೆ ಇಲಾಖೆಯ ಸುರ್ಧಿಯಲ್ಲಿರುವ 9 ಎಕರೆ 15 ಗುಂಟೆ ಭೂಮಿಯನ್ನು ಒಕ್ಕೂಟಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋ ನ್ಮುಖರಾಗಿದ್ದೇವೆ. ತೋಟಗಾರಿಕೆ ಇಲಾಖೆಗೆ ಶಿಡ್ಲಘಟ್ಟ ತಾಲೂಕು ಚಿಕ್ಕದಾಸರಹಳ್ಳಿಯಲ್ಲಿ ಬದಲಿ ಭೂಮಿ ನೀಡಲು ಸಹ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇದನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ಭೂಮಿಯನ್ನು ಇದಕ್ಕೆ ಕೊಡಿಸಲು ಸಿದ್ಧತೆ ಮಾಡಿ ಕೊಂಡಿದ್ದು ಒಕ್ಕೂಟ ಸ್ವಂತಬಲದ ಮೇಲೆ ನಿಲ್ಲುವಂತೆ ಮಾಡಲು ಏನೆಲ್ಲಾ ಮಾಡ ಬಹುದೋ ಅದನ್ನೆಲ್ಲಾ ಮಾಡಲಾಗುವುದು ಎಂದರು.

ಸಭೆಯಲ್ಲಿ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಎಂ.ಎಲ್.ಸಿ ಅನಿಲ್‌ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್‌ನಿಟ್ಟಾಲಿ, ಜಿಲ್ಲಾ ಉಪವಿಭಾಗಾಧಿಕಾರಿ ಅಶ್ವಿನ್, ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ, ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತಿತರರು ಇದ್ದರು.